• search
  • Live TV
ಚೆನ್ನೈ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ನಿವಾರ್ ಸೈಕ್ಲೋನ್: ಚೆನ್ನೈಗೆ ಇಂಡಿಗೋ ವಿಮಾನ ಸಂಚಾರ ರದ್ದು

|

ಚೆನ್ನೈ, ನವೆಂಬರ್ 25: ನಿವಾರ್ ಚಂಡಮಾರುತದ ಹಿನ್ನೆಲೆಯಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇರುವುದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ಚೆನ್ನೈಗೆ ತೆರಳುವ ಮತ್ತು ಚೆನ್ನೈನಿಂದ ಹೊರಡುವ ಒಟ್ಟು 24 ವಿಮಾನಗಳ ಹಾರಾಟವನ್ನು ಇಂಡಿಗೋ ರದ್ದುಗೊಳಿಸಿದೆ. ಚೆನ್ನೈ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಈಗಾಗಲೇ ಭಾರಿ ಮಳೆಯಾಗುತ್ತಿದ್ದು, ಬುಧವಾರ ರಾತ್ರಿ ವೇಳೆ ಪುದುಚೆರಿ ಮತ್ತು ತಮಿಳುನಾಡು ನಡುವೆ ಚಂಡಮಾರುತ ಅಪ್ಪಳಿಸುವುದರಿಂದ ಭಾರಿ ಅನಾಹುತ ಸಂಭವಿಸುವ ಅಪಾಯವಿದೆ.

ಚೆನ್ನೈಗೆ ಬರುವ 12 ಮತ್ತು ಹೊರಡುವ 12 ವಿಮಾನಗಳು ಸೇರಿದಂತೆ ಒಟ್ಟು 24 ವಿಮಾನ ಸಂಚಾರವನ್ನು ಇಂಡಿಗೋ ರದ್ದುಗೊಳಿಸಿದೆ. ಇವುಗಳಲ್ಲಿ ಹೆಚ್ಚಿನವು ಎಟಿಆರ್-72 ಮಾದರಿಯ ಸಣ್ಣ ವಿಮಾನಗಳಾಗಿವೆ. ಒಟ್ಟಾರೆಯಾಗಿ 49 ವಿಮಾನಗಳ ಹಾರಾಟ ರದ್ದುಗೊಂಡಿದೆ.

ಇಂದಿನಿಂದ 'ನಿವಾರ್' ಆರ್ಭಟ: ಬೆಂಗಳೂರಲ್ಲೂ ಭಾರಿ ಮಳೆ ಸಾಧ್ಯತೆ

'ಬುಧವಾರ ಸಂಚಾರ ನಡೆಸಬೇಕಿದ್ದ ಒಟ್ಟು 49 ವಿಮಾನಗಳ ಸಂಚಾರವನ್ನು ರದ್ದುಗೊಳಿಸಲಾಗಿದೆ. ನವೆಂಬರ್ 26ರಂದು ಪರಿಸ್ಥಿತಿಯನ್ನು ಅವಲೋಕಿಸಿ ವಿಮಾನ ಸಂಚಾರ ಆರಂಭಿಸುವ ಸಂಬಂಧ ನಿರ್ಧಾರ ತೆಗೆದುಕೊಳ್ಳಲಾಗುವುದು' ಎಂದು ಇಂಡಿಗೋ ತಿಳಿಸಿದೆ.

ಇನ್ನು ಕೆಲವು ವಿಮಾನಯಾನ ಸಂಸ್ಥೆಗಳು ಎಚ್ಚರಿಕೆಯೊಂದಿಗೆ ವಿಮಾನ ಸಂಚಾರ ಮುಂದುವರಿಸಿವೆ. ಚೆನ್ನೈ ಮತ್ತು ವಿಜಯವಾಡಗಳಿಂದ ನಡೆಯುವ ವಿಮಾನ ಸಂಚಾರ ಕಾರ್ಯಾಚರಣೆಯ ಮೇಲೆ ನಿವಾರ್ ಚಂಡಮಾರುತ ಪ್ರಭಾವ ಬೀರುವ ಸಾಧ್ಯತೆ ಇದೆ. ವಿಮಾನ ಹಾರಾಟ ರದ್ದುಗೊಂಡರೆ ಅದರ ಮಾಹಿತಿಯನ್ನು ಪ್ರಯಾಣಿಕರಿಗೆ ಎಸ್ಎಂಎಸ್ ಮತ್ತು ಇಮೇಲ್ ಮೂಲಕ ರವಾನಿಸಲಾಗುವುದು ಎಂದು ಸ್ಪೈಸ್ ಜೆಟ್ ತಿಳಿಸಿದೆ.

ನಿವಾರ್ ಚಂಡಮಾರುತ: ತಮಿಳುನಾಡಿನಲ್ಲಿ ಮಳೆ ಆರ್ಭಟ ಶುರು

ಗೋ ಏರ್ ಮತ್ತು ವಿಸ್ತಾರಾ ಕೂಡ ಸೂಚನೆ ಹೊರಡಿಸಿದ್ದು, ಚೆನ್ನೈನಿಂದ ಹೊರಡುವ ಮತ್ತು ಚೆನ್ನೈಗೆ ತೆರಳುವ ವಿಮಾನಗಳ ಹಾರಾಟದಲ್ಲಿ ವ್ಯತ್ಯಯವಾಗಬಹುದು. ನಿಮ್ಮ ನೋಂದಾಯಿತ ಸಂಪರ್ಕ ವಿವರಗಳಿಗೆ ಮಾಹಿತಿ ನೀಡಲಾಗುವುದು ಎಂದು ಸಂಸ್ಥೆಗಳು ತಿಳಿಸಿವೆ.

English summary
Nivar Cyclone Effect: Indigo has announced the cancellation of 24 flights to and fro Chennai due to heavy rain. Other airlines also issued alerts to passengers.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X