ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚೆನ್ನೈನಲ್ಲಿ 5 ದಿನದ ಮಗುವಿಗೆ ಕೊರೊನಾ ಸೋಂಕು!

|
Google Oneindia Kannada News

ಚೆನ್ನೈ, ಏಪ್ರಿಲ್ 29: ತಮಿಳುನಾಡಿನಲ್ಲಿ ಕೋವಿಡ್‌ 19 ಅಕ್ಷರಶಹಃ ಅಟ್ಟಹಾಸ ಮೆರದಿದೆ. ಕಾರಣ 10 ವರ್ಷಕ್ಕಿಂತ ಕಡಿಮೆ ವಯಸ್ಸಿನ 103 ಚಿಕ್ಕ ಮಕ್ಕಳು ವೈರಸ್ ಸೋಂಕಿಗೆ ತುತ್ತಾಗಿದ್ದಾರೆ. ಚೆನ್ನೈನಲ್ಲಿ 5 ದಿನದ ಮಗುವಿಗೆ ಸೋಂಕು ತಗುಲಿರುವುದು ಬೆಚ್ಚಿ ಬೀಳಿಸಿದೆ.

ಚೆನ್ನೈ ಕಿಲ್ಪಾಕ್ ವೈದ್ಯಕೀಯ ಕಾಲೇಜಿನ (ಕೆಎಂಸಿ) ಅಧಿಕಾರಿಗಳ ಪ್ರಕಾರ, ಮಗುವನ್ನು ಪಲ್ಲವರಂನ ಕಂಟೋನ್ಮೆಂಟ್ ಜನರಲ್ ಆಸ್ಪತ್ರೆಯಲ್ಲಿ ಹೆರಿಗೆ ಮಾಡಿಸಲಾಗಿತ್ತು. ಹೆರಿಗೆಯಾದ ನಾಲ್ಕು ದಿನಗಳ ನಂತರ, ತಾಯಿಗೆ ಕೊರೊನಾ ವೈರಸ್‌ ಪರೀಕ್ಷೆ ಪಾಸಿಟಿವ್ ಬಂದಿತ್ತು. ಮಾರನೇ ದಿನ ಮಗುವಿಗೂ ಪರೀಕ್ಷೆ ನಡೆಸಿದಾಗ ಆ ಐದು ದಿನದ ಹೆಣ್ಣು ಮಗುವನ್ನು ಬಿಟ್ಟಿಲ್ಲ ಕೊರೊನಾ ವೈರಸ್.

ಒಳ್ಳೇ ಸುದ್ದಿ: ಆಗ್ರಾದಲ್ಲಿ ಆರೋಗ್ಯವಂತ ಮಗುವಿಗೆ ಜನ್ಮ ನೀಡಿದ ಕೊರೊನಾ ಸೋಂಕಿತೆಒಳ್ಳೇ ಸುದ್ದಿ: ಆಗ್ರಾದಲ್ಲಿ ಆರೋಗ್ಯವಂತ ಮಗುವಿಗೆ ಜನ್ಮ ನೀಡಿದ ಕೊರೊನಾ ಸೋಂಕಿತೆ

ಮಗುವಿನ ಸೋಂಕು ತಾಯಿಯಿಂದ ಬಂದಿದೆ ಎಂದು ಅಧಿಕಾರಿಗಳು ದೃಢಪಡಿಸಿದ್ದರೂ, ಈ ಪ್ರಕರಣದ ಪ್ರಾಥಮಿಕ ಸಂಪರ್ಕವನ್ನು ಬಹಿರಂಗಪಡಿಸಲಾಗಿಲ್ಲ. ಈ ಘಟನೆಯಿಂದ ಬೇಸತ್ತಿರುವ ವೈದ್ಯರು, ಗರ್ಭಿಣಿಯರು ಮತ್ತು ಅವರ ಕುಟುಂಬಗಳು ಹೆಚ್ಚು ಜಾಗರೂಕರಾಗಿರಿ ಎಂದು ಸಲಹೆ ನೀಡಿದ್ದಾರೆ.

5 Days Baby Girl Test Positive For Deadly Coronavirus In Chennai

ತಾಯಿಯ ರೋಗನಿರೋಧಕ ಶಕ್ತಿಯನ್ನು ಸೋಂಕಿತ ಮಗುವಿಗೆ ವರ್ಗಾಯಿಸಲು ಹಾಲುಣಿಸುವುದಕ್ಕೆ ಅನುಮತಿ ನೀಡಲಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

English summary
5 Days Baby Girl Test Positive For Deadly Coronavirus In Chennai. baby condition is stable.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X