ರಜನೀಕಾಂತ್ ವಿರುದ್ಧ ಕೃತಿ ಚೌರ್ಯದ ಆರೋಪ: ನ್ಯಾಯಾಲಯದಲ್ಲಿ ಕೇಸು ದಾಖಲು
ರಜನಿಕಾಂತ್ ವಿರುದ್ಧ ಚೆನ್ನೈ ನ್ಯಾಯಾಲಯದಲ್ಲಿ ದಾಖಲಾಯಿತು ಕೃತಿ ಚೌರ್ಯ ಪ್ರಕರಣ. ತಮಿಳು ಚಿತ್ರ ನಿರ್ದೇಶಕ ರಾಜಶೇಖರ್ ಎಂಬುವರಿಂದ ಪ್ರಕರಣ ದಾಖಲು. ರಜನಿಕಾಂತ್ ಮುಂದಿನ ಚಿತ್ರ 'ಕಾಳ ಕರಿಕಾಳನ್' ಚಿತ್ರದ ಕಥೆ ತನ್ನದೇ ಎನ್ನುತ್ತಿರುವ ರಾಜಶೇಖರ್.
ಚೆನ್ನೈ, ಜೂನ್ 9: ಇತ್ತೀಚೆಗಷ್ಟೇ ಪ್ರಕಟಗೊಂಡಿರುವ ರಜನಿಕಾಂತ್ ಅವರ ಮುಂದಿನ ಚಿತ್ರ 'ಕಾಳ ಕರಿಕಾಳನ್' ಚಿತ್ರದ ವಿರುದ್ಧ ತಮಿಳು ಚಿತ್ರ ನಿರ್ದೇಶಕ ರಾಜಶೇಖರ್ ಎಂಬುವರು ಪ್ರಕರಣ ದಾಖಲಿಸಿದ್ದಾರೆ.
ಚೆನ್ನೈನ ಸಿವಿಲ್ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿರುವ ರಾಜಶೇಖರ್, ''ಕಾಳ ಕರಿಕಾಳನ್ ಚಿತ್ರದ ಕಥೆಯು ತಮ್ಮದಾಗಿದ್ದು, ರಜನೀಕಾಂತ್ ಅವರು ಅದನ್ನು ಕದ್ದು ಪಾ. ರಂಜಿತ್ ಎಂಬ ನಿರ್ದೇಶಕನ ಕೈಯ್ಯಲ್ಲಿ ಸಿನಿಮಾ ಮಾಡಿಸುತ್ತಿದ್ದಾರೆ'' ಎಂದು ಆರೋಪಿಸಿದ್ದಾರೆ.

ಅವರ ಪ್ರಕಾರ, 1995ರಲ್ಲಿ ರಜನಿಕಾಂತ್ ಅವರಿಗೆ ಕಾಳ ಚಿತ್ರದ ಕಥೆಯನ್ನು ಹೇಳಿದ್ದರಂತೆ. ಕಥೆ ಕೇಳಿ ಮುಂದೊಂದು ದಿನ ಅದೇ ಕಥೆಯನ್ನು ಆಧರಿಸಿ ಸಿನಿಮಾ ಮಾಡೋಣವೆಂದಿದ್ದರಂತೆ ರಜನಿ.
ಆದರೆ, ಅದಾಗಿ 30 ವರ್ಷಗಳವರೆಗೆ ಆ ಚಿತ್ರವನ್ನು ಮಾಡಲು ಸಾಧ್ಯವಾಗಲೇ ಇಲ್ಲವಂತೆ. ಆದರೀಗ, ಅದೇ ಕಥೆಯನ್ನಿಟ್ಟುಕೊಂಡು ಸಿನಿಮಾ ಮಾಡಲಾಗುತ್ತಿದೆ. ನಾನು ಹೇಳಿದ ಕಥೆಯನ್ನು ರಜನಿ ಕದ್ದಿದ್ದಾರೆಂದು ಅವರು ಪ್ರಕರಣದಲ್ಲಿ ಆರೋಪಿಸಿದ್ದಾರೆ.












Click it and Unblock the Notifications