• search
  • Live TV
ಚೆನ್ನೈ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಫ್ಲೆಕ್ಸ್ ಬಿದ್ದು, ಟ್ಯಾಂಕರ್ ಗುದ್ದಿ ಚೆನ್ನೈಯಲ್ಲಿ ಟೆಕ್ಕಿ ದುರಂತ ಸಾವು

|

ಚೆನ್ನೈ, ಸೆಪ್ಟೆಂಬರ್ 13: ದ್ವಿಚಕ್ರ ವಾಹನದಲ್ಲಿ ಆಫೀಸಿನಿಂದ ಮನೆಗೆ ತೆರಳುತ್ತಿದ್ದ 23 ವರ್ಷ ವಯಸ್ಸಿನ ಸಾಪ್ಟ್ ವೇರ್ ಇಂಜಿನಿಯರ್ ಒಬ್ಬರ ಮೇಲೆ ಅಕ್ರಮ ಫ್ಲೆಕ್ಸ್ ಬಿದ್ದು, ಅದೇ ಸಮಯದಲ್ಲಿ ಟ್ಯಾಂಕರ್ ವೊಂದುಗುದ್ದಿ ದುರಂತ ಸಾವು ಕಂಡ ಘಟನೆ ಗುರುವಾರ ನಡೆದಿದೆ.

ಟೆಕ್ಕಿಯ ಜೀವಕ್ಕೇ ಕುತ್ತು ತಂದ ಟ್ರಾಫಿಕ್ ಪೊಲೀಸರೊಂದಿಗಿನ ವಾಗ್ವಾದ

ಚೆನ್ನೈಯ ಶುಭಶ್ರೀ ಐಟಿ ಕಂಪನಿಯೊಂದರಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಗುರುವಾರ ಸಂಜೆ ಆಫೀಸಿನಿಂದ ಮನೆಗೆ ಹೊರಟಿದ್ದ ಶುಭಶ್ರೀ ಪಲ್ಲವರಂ-ತೋರೈಪಕ್ಕಂ ರೇಡಿಯಲ್ ರಸ್ತೆಯಲ್ಲಿ ತೆರಳುತ್ತಿದ್ದ ಸಂದರ್ಭದಲ್ಲಿ ಎಐಎಡಿಎಂಕೆ ನಾಯಕರ ಚಿತ್ರಗಳಿದ್ದ ಅಕ್ರಮ ಫ್ಲೆಕ್ಸ್ ವೊಂದು ಅವರ ಮೇಲೆ ಬಿದ್ದಿತ್ತು. ಈ ಸಂದರ್ಭದಲ್ಲಿ ಅವರು ದ್ವಿಚಕ್ರವಾಹನದಿಂದ ಕೆಳಗೆ ಬಿದ್ದರು. ಅದೇ ಸಮಯದಲ್ಲಿ ಹಿಂದಿನಿಂದ ವೇಗವಾಗಿ ಬರುತ್ತಿದ್ದ ಟ್ಯಾಂಕರ್ ವೊಂದು ಅವರಿಗೆ ಡಿಕ್ಕಿ ಹೊಡೆದ ಪರಿಣಾಮ ಅವರು ತೀವ್ರವಾಗಿ ಗಾಯಗೊಂಡಿದ್ದರು.

ಕೂಡಲೇ ಅವರನ್ನು ಹತ್ತಿರದ ಆಸ್ಪತ್ರೆಗೆ ಸೇರಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಅವರು ಸಾವನ್ನಪ್ಪಿದರು. ನವದಂಪತಿಗಳಿಗೆ ಎಐಎಡಿಎಂಕೆ ನಾಯಕರು ಶುಭ ಕೋರಿತ್ತಿರುವ ಫ್ಲೆಕ್ಸ್ ಅದಾಗಿದ್ದು, ಅದನ್ನು ಅಕ್ರಮವಾಗಿ ನಿಲ್ಲಿಸಲಾಗಿತ್ತು. ಯುವತಿಯ ಪ್ರಾಣವನ್ನೇ ಕಿತ್ತುಕೊಂಡ ಫ್ಲೆಕ್ಸ್ ಬಗ್ಗೆ ಇದೀಗ ತೀವ್ರ ಆಕ್ರೋಶ ವ್ಯಕ್ತವಾಗಿದೆ.

ಮಹಿಳಾ ಟೆಕ್ಕಿಯನ್ನು ಹಾಸ್ಟೆಲ್ ಬದಲು ತನ್ನ ಮನೆಗೆ ಎಳೆದೊಯ್ದ ಆಟೋ ಚಾಲಕ

ಪ್ರತ್ಯಕ್ಷದರ್ಶಿಗಳ ಪ್ರಕಾರ ಯುವತಿ ದ್ವಿಚಕ್ರ ವಾಹನವನ್ನು ಅತೀ ವೇಗದಲ್ಲೇನೂ ಓಡಿಸುತ್ತಿರಲಿಲ್ಲ, ಜೊತೆಗೆ ಹೆಲ್ಮೆಟ್ ಸಹ ಹಾಕಿದ್ದರು.

English summary
Chennai: Techie Dies After Tankers Hits And A Hoarding Falls On Her
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X