Get Updates
Get notified of breaking news, exclusive insights, and must-see stories!

400ಕೆಜಿ ಚಿನ್ನ, 20 ಕೋಟಿಯ ವಜ್ರಕ್ಕಾಗಿ ಚೆನ್ನೈ ಕಟ್ಟಡದಲ್ಲಿ ಹುಡುಕಾಟ

ಚೆನ್ನೈ, ಜೂನ್ 2: ಭಾರೀ ಬೆಂಕಿ ಕಾಣಿಸಿಕೊಂಡ ನಂತರ ಚೆನ್ನೈನ ಟಿ ನಗರದಲ್ಲಿದ್ದ ಚೆನ್ನೈ ಸಿಲ್ಕ್ಸ್ ಕಟ್ಟಡವನ್ನು ನೆಲಸಮಗೊಳಿಸಲಾಗಿದೆ. ಕಟ್ಟಡ ಹೋಗಿದ್ದಕ್ಕೆ ಮಾಲಿಕರು ಹೆಚ್ಚು ತಲೆಕೆಡಿಸಿಕೊಂಡಿಲ್ಲ. ಆದರೆ, ಈ ಕಟ್ಟಡದ ಲಾಕರುಗಳಲ್ಲಿ 400 ಕೆಜಿ ಚಿನ್ನ ಹಾಗೂ ಸುಮಾರು 20 ಕೋಟಿ ಮೌಲ್ಯದ ವಜ್ರಗಳನ್ನು ಇಡಲಾಗಿತ್ತು. ಇದೀಗ ಕಟ್ಟಡದ ಮಾಲಿಕರಿಗೆ ಇವುಗಳದ್ದೇ ಚಿಂತೆ ಕಾಡುತ್ತಿದೆ.

ಕಟ್ಟಡದಲ್ಲಿ ಕಾಣಸಿಕೊಂಡ ಬೆಂಕಿಗೆ ಇದೆಲ್ಲಾ ನಾಶವಾಗಿರಲಿಕ್ಕಿಲ್ಲ ಎಂದುಕೊಂಡಿರುವ ಕಟ್ಟಡ ಮಾಲಿಕರು, ಇದಕ್ಕಾಗಿ ಭರ್ಜರಿ ಹುಡುಕಾಟದಲ್ಲಿ ತೊಡಗಿದ್ದಾರೆ.

Chennai silks fire: Hunt on for 400 kg gold, Rs 20 crore diamonds stuck in building

7 ಮಹಡಿಗಳ ಕಟ್ಟಡ ಚೆನ್ನೈ ಸಿಲ್ಕ್ಸ್ ಟಿ ನಗರದ ಹೆಗ್ಗುರುತಾಗಿತ್ತು. ಇದರ ನೆಲ ಮಹಡಿಯಲ್ಲಿ ಶ್ರೀ ಕುಮಾರನ್ ತಂಗಮಾಳೈ ಜ್ಯುವೆಲ್ಲರಿ ಅಂಗಡಿ ಇತ್ತು. ಇದೇ ಮಹಡಿಯ ಲಾಕರುಗಳಲ್ಲಿ ಚಿನ್ನವನ್ನು ಇಡಲಾಗಿತ್ತು. ಆದರೆ ಕಟ್ಟಡದಲ್ಲಿ ಬೆಂಕಿ ಕಾಣಿಸಿಕೊಂಡು ನೆಲಸಮವಾಗಿರುವುದರಿಂದ ಇದೆಲ್ಲಾ ಅವಶೇಷಗಳಡಿಯಲ್ಲಿ ಮುಚ್ಚಿ ಹೋಗಿವೆ.

ಸಾಮಾನ್ಯವಾಗಿ ಲಾಕರುಗಳು ಸಾಧಾರಣಮಟ್ಟದ ಬೆಂಕಿಯನ್ನು ತಡೆದುಕೊಳ್ಳುತ್ತವೆ. ಹೀಗಾಗಿ ಈ ಲಾಕರುಗಳಲ್ಲಿ ಇನ್ನೂ ಚಿನ್ನ ಮತ್ತು ವಜ್ರಗಳು ಇರಬಹುದು ಎಂದು ಮಾಲಿಕರು ಅಂದುಕೊಂಡಿದ್ದಾರೆ. ಆದರೆ ಈ ಲಾಕರುಗಳು ಎಷ್ಟರಮಟ್ಟಿಗೆ ಬೆಂಕಿಯನ್ನು ತಡೆದುಕೊಳ್ಳುತ್ತವೆ ಎಂದು ತಿಳಿಯಬೇಕಾಗಿದೆ.

Chennai silks fire: Hunt on for 400 kg gold, Rs 20 crore diamonds stuck in building

ಇನ್ನು ಚೆನ್ನೈ ಸಿಲ್ಕ್ಸ್ ಕಟ್ಟಡಕ್ಕೆ ಬೆಂಕಿ ಬಿದ್ದಿದ್ದರಿಂದ ಅಪಾರ ಪ್ರಮಾಣದ ನಷ್ಟ ಉಂಟಾಗಿದೆ. ಮಾಲಿಕರು ಕಟ್ಟಡವನ್ನು ಕಳೆದುಕೊಂಡಿದ್ದಲ್ಲದೆ, ಕಟ್ಟಡದಲ್ಲಿದ್ದ ಸುಮಾರು 80 ಕೋಟಿ ಮೌಲ್ಯದ ಬಟ್ಟೆಗಳೂ ಬೆಂಕಿಗೆ ಆಹುತಿಯಾಗಿವೆ. ಇದೀಗ ಚಿನ್ನ ಮತ್ತು ವಜ್ರವನ್ನೂ ಕಳೆದುಕೊಳ್ಳುವ ಅಪಾಯದಲ್ಲಿದ್ದಾರೆ.

Chennai silks fire: Hunt on for 400 kg gold, Rs 20 crore diamonds stuck in building

ಬುಧವಾರ ಚೆನ್ನೈ ಸಿಲ್ಕ್ಸ್ ಕಟ್ಟಡಕ್ಕೆ ಬೆಂಕಿ ಬಿದ್ದಿತ್ತು. ಇದನ್ನು ನಂದಿಸಲು ಅಗ್ನಿ ಶಾಮಕದಳದವರಿಗೆ ಒಂದು ದಿನಕ್ಕಿಂತಲೂ ಹೆಚ್ಚು ಸಮಯ ಹಿಡಿದಿತ್ತು. ಇನ್ನು ಕಟ್ಟಡವನ್ನು ಅಕ್ರಮವಾಗಿ ಕಟ್ಟಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಅಗ್ನಿ ದುರಂತದಿಂದ ಯಾವುದೇ ಜೀವ ಹಾನಿ ಆಗಿಲ್ಲವಾದರೂ ಅಕ್ರಮವಾಗಿ ಕಟ್ಟಿದ ಕಟ್ಟಡಗಳಿಗೆ ಅನುಮತಿ ನೀಡಿರುವ ಸ್ಥಳೀಯ ಸಂಸ್ಥೆಗಳಿಗೆ ಇದೊಂದು ಎಚ್ಚರಿಕೆಯ ಗಂಟೆಯಾಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+