• search
  • Live TV
ಚೆನ್ನೈ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಚೆನ್ನೈನಲ್ಲಿ ಏಕಾಏಕಿ ಏರಿದ ಕೊರೊನಾ ಸೋಂಕಿತರ ಸಂಖ್ಯೆ

|

ಚೆನ್ನೈ, ಅಕ್ಟೋಬರ್ 05: ಚೆನ್ನೈನಲ್ಲಿ ಏಕಾಏಕಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗಿದೆ. ಕಳೆದ ಒಂದು ವಾರದಿಂದ ನಿತ್ಯ 1200ಕ್ಕೂ ಹೆಚ್ಚು ಪ್ರಕರಣಗಳು ಪತ್ತೆಯಾಗುತ್ತಿವೆ.

ನಗರದಲ್ಲಿ ಒಟ್ಟು 15 ಕಾರ್ಪೊರೇಷನ್ ಜೋನ್‌ಗಳಿದ್ದು 12 ಜೋನ್‌ಗಳಲ್ಲಿ ಪಾಸಿಟೀವ್ ಪ್ರಕರಣಗಳು ಹೆಚ್ಚಾಗಿವೆ.

ಭಾನುವಾರ ತಮಿಳುನಾಡಿನಲ್ಲಿ 1348 ಹೊಸ ಪ್ರಕರಣಗಳು ಪತ್ತೆಯಾಗಿದ್ದವು.ಸೆಪ್ಟೆಂಬರ್‌ನಲ್ಲಿ ಚೆನ್ನೈನಲ್ಲಿ 1 ಸಾವಿರಕ್ಕಿಂತಲೂ ಕಡಿಮೆ ಪ್ರಕರಣಗಳು ದಾಖಲಾಗುತ್ತಿದ್ದವು. ಕಳೆದ ತಿಂಗಳ ಅಂತ್ಯದಲ್ಲಿ 1 ಸಾವಿರ ಪ್ರಕರಣ ಪತ್ತೆಯಾಗಿತ್ತು.

ಕರ್ನಾಟಕ; 7 ದಿನದಲ್ಲಿ 65,185 ಹೊಸ ಕೋವಿಡ್ ಪ್ರಕರಣ ದಾಖಲು!

ಲಾಕ್‌ಡೌನ್ ಮಾರ್ಗಸೂಚಿಗಳನ್ನು ಸಡಿಲಗೊಳಿಸಿದ ಬಳಿಕ ಅತಿ ಹೆಚ್ಚು ಪ್ರಕರಣಗಳು ಬೆಳಕಿಗೆ ಬರುತ್ತಿವೆ. ದೇವಸ್ಥಾನ ಇನ್ನಿತರೆ ಪುಣ್ಯ ಕ್ಷೇತ್ರಗಳ ಬಾಗಿಲು ತೆರೆದಿರುವುದು ಹಾಗೂ ಬಸ್‌ಗಳ ಸಂಚಾರ ಆರಂಭವಾದ ಬಳಿಕ ಇದೀಗ ಕೊರೊನಾ ಸೋಂಕಿತರ ಸಂಖ್ಯೆಯೂ ಹೆಚ್ಚಾಗುತ್ತಿದೆ.

ಇಡೀ ನಗರದಲ್ಲಿ ಎಲ್ಲಾ ಆರ್ಥಿಕ ಚಟುವಟಿಕೆಗಳಿಗೆ ಅವಕಾಶ ನೀಡಲಾಗಿದೆ. ರೆಸ್ಟೋರೆಂಟ್‌ಗಳು ತೆರೆದಿವೆ. ಇದೀಗ ಸೋಂಕು ಯಾರಿಂದ ತಗುಲಿದೆ ಎಂದು ಹೇಳುವುದು ಕಷ್ಟವಾಗಿದೆ. ಯಾಕೆಂದರೆ ಓರ್ವ ಮುನುಷ್ಯರ ಹಲವಾರು ಮಂದಿಯನ್ನು ಸಂಪರ್ಕಿಸಿರುತ್ತಾನೆ.

ಚೆನ್ನೈನಲ್ಲಿ ಶೇ.91ರಷ್ಟು ಮಂದಿ ಗುಣಮುಖರಾಗಿದ್ದಾರೆ ಶೇ.7ರಷ್ಟು ಸಕ್ರಿಯ ಪ್ರಕರಣಗಳಿವೆ. ಚೆನ್ನೈನಲ್ಲಿ ಒಟ್ಟು 1,72,773 ಪ್ರಕರಣಗಳಿವೆ, ಒಟ್ಟು 6.19 ಲಕ್ಷ ಪಾಸಿಟಿವ್ ಪ್ರಕರಣಗಳಿವೆ.

ಭಾನುವಾರ ವಿವಿಧ ಆಸ್ಪತ್ರೆಗಳಿಂದ 5558 ರೋಗಿಗಳು ಡಿಸ್ಚಾರ್ಜ್ ಆಗಿದ್ದಾರೆ. 9784 ಮಂದಿ ಸಾವನ್ನಪ್ಪಿದ್ದಾರೆ. ಒಟ್ಟು 46120 ಸಕ್ರಿಯ ಪ್ರಕರಣಗಳಿದ್ದು,5,64,092 ಮಂದಿ ಗುಣಮುಖರಾಗಿದ್ದಾರೆ.

English summary
Chennai witnessed a sudden spike in the case of coronavirus cases as the city has been recording over 1,200 cases daily for more than one week. Of the 15 corporation zones in the city, 12 have reported a surge in positive cases.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X