ಅಂದು ಕರುಣಾನಿಧಿಯ ಬಂಧಿಸಿದ್ದ ಪೊಲೀಸ್ ಇಂದು DGP

chennai-ips-muthukaruppan-who-held-karunanidhi-become-dgp
ಚೆನ್ನೈ, ನ.21: 'ಕೊಲೈ ಪಂಡಿಟ್ರಾಂಗಾ, ಕೊಲೈ ಪಂಡಿಟ್ರಾಂಗಾ' ಎಂದು ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಕರುಣಾನಿಧಿ ಅಂದು ನಡುರಾತ್ರಿ ಅರಚಿಕೊಂಡಿದ್ದು ನಿಮ್ಮ ಕಿವಿಯಲ್ಲಿ ಈಗಲೂ ರಿಂಗಣಿಸುತ್ತಿರಬಹುದಲ್ವೇ!?

ಯಾಕಪ್ಪಾ ಆ ವಿಷಯ ಈವಾಗ ಯಾಕಪ್ಪಾ ಅಂದರೆ, ಅಂದಿನ ಮುಖ್ಯಮಂತ್ರಿಯಿಂದ 'arrest warrant' ಪಡೆದು ಕರುಣಾನಿಧಿಯಂತಹ ಕರುಣಾನಿಧಿಯನ್ನೇ ಆತನ ಮನೆಯಲ್ಲೇ ಬಂಧಿಸಿದ್ದ ಪೊಲೀಸ್ ಅಧಿಕಾರಿ ಇಂದು DGP ಆಗಿದ್ದಾರೆ. ಅಂದಹಾಗೆ ಮುತ್ತುಕರುಪ್ಪನ್ ಎಂಬ ದಲಿತ ಅಧಿಕಾರಿಯನ್ನು ಬೆಳೆಸಿದ್ದು ಇದೇ ಕರುಣಾನಿಧಿ! ಆದರೆ ಕಾಲಾಂತರದಲ್ಲಿ ಮುತ್ತುಕರುಪ್ಪನ್ ತಮ್ಮ ನಿಷ್ಠೆಯನ್ನು ಜಯಾ ಪಾದ ತಲದಲ್ಲಿಡುತ್ತಾರೆ.

ಸದರಿ ಪೊಲೀಸಪ್ಪ ಕೆ ಮುತ್ತುಕರುಪ್ಪನ್ ಅಂದು ಚೆನ್ನೈನ ಪೊಲೀಸ್ ಆಯುಕ್ತರಾಗಿ ತಮ್ಮ ಕರ್ತವ್ಯವನ್ನು ಶಿರಸಾವಹಿಸಿ ಪಾಲಿಸಿದ್ದರು. ಇಂತಿಪ್ಪ ಮುತ್ತುಕರುಪ್ಪನ್ ಅವರಿಗಾಗಿ ಈಗ ವಿಶೇಷವಾಗಿ ಹೊಸ ಹುದ್ದೆ ಸೃಷ್ಟಿಸಿ, ಗೃಹರಕ್ಷಕ ದಳದ ಮುಖ್ಯಸ್ಥರನ್ನಾಗಿಸಲಾಗಿದೆ. ಅಂದಹಾಗೆ 1980ರ ಐಪಿಎಸ್ ಅಧಿಕಾರಿ ಮುತ್ತುಕರುಪ್ಪನ್ ಅವರ ಸಹಪಾಠಿಗಳು ಒಂದು ವರ್ಷದ ಹಿಂದೆಯೇ ಭಡ್ತಿ ಪಡೆದಿದ್ದಾರೆ.

2001ರ ಜೂನ್ 21ರ ಮಧ್ಯರಾತ್ರಿ ಕರುಣಾನಿಧಿ ಬಂಧನ ಪ್ರಹಸನ ನಡೆದಿತ್ತು. ಮತ್ತು ಅದಷ್ಟೂ ಅಂದು ಬೆರಳೆಣಿಕೆಯಷ್ಟು ಸಂಖ್ಯೆಯಲ್ಲಿದ್ದ ಮಾಧ್ಯಮಗಳಲ್ಲಿ ಪ್ರಸಾರವಾಗುವ ಮೂಕ ಜನಮನದಲ್ಲಿ ಶಾಶ್ವತವಾಗಿ ಉಳಿಯುವಂತಾಯಿತು. 2003ರಲ್ಲಿ ಅದೇ ಅಧಿಕಾರಿಯ ವಿರುದ್ಧ ಭ್ರಷ್ಟಾಚಾರ ಸಂಬಂಧಿ ತನಿಖೆ ಶಾಸ್ತ್ರ ನಡೆದು ಸೇವೆಯಿಂದ ಅಮಾನತ್ತುಮಾಡಲಾಗಿತ್ತು.

ಹಾಗೆ ಅಮಾನತ್ತುಗೊಂಡಿದ್ದ IPS ಮುತ್ತುಕರುಪ್ಪನ್ 2007ರ ವೇಳೆಗೆ ತಿರುಚ್ಚಿ ಸಶಸ್ತ್ತ್ರ ಪಡೆಯ ಮಹಾನಿರೀಕ್ಷಕರಾಗಿ ಪ್ರತಿಷ್ಠಾಪನೆಗೊಂಡಿದ್ದರು! ಇದೀಗ DGP ಆಗಿ ಸೇವಾ ಭಡ್ತಿ ಹೊಂದಿದ್ದಾರೆ!

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+