ಬುರೆವಿ ಚಂಡಮಾರುತ : ತಮಿಳುನಾಡಿನಲ್ಲಿ ಹೆಚ್ಚು ಮಳೆ ಸಾಧ್ಯತೆ

ಚೆನ್ನೈ, ಡಿಸೆಂಬರ್ 5: ತಮಿಳುನಾಡು ಹಾಗೂ ಕೇರಳಕ್ಕೆ ಭೀತಿ ಸೃಷ್ಟಿಸಿದ್ದ ಬುರೆವಿ ಚಂಡಮಾರುತ ಶುಕ್ರವಾರ ಅಪ್ಪಳಿಸುವುದಕ್ಕಿಂತ ಮುನ್ನವೇ ವಾಯುಭಾರ ಕುಸಿತವಾಗಿ ಬದಲಾಗಿದೆ.

ಆದರೆ ಕೇರಳದಲ್ಲಿ ಅಪಾಯ ಕಡಿಮೆಯಾಗಿದ್ದು, ತಮಿಳುನಾಡಿನಲ್ಲಿ ಇಂದು ಹೆಚ್ಚು ಮಳೆಯಾಗುವ ಸಾಧ್ಯತೆ ಇದೆ.

ತಮಿಳುನಾಡಿನ ರಾಮನಾಥಪುರಂ ಜಿಲ್ಲೆಯ ಮನ್ನಾರ್ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿದ್ದು, ಅದು ನಿಧಾನವಾಗಿ ನೈಋತ್ಯ ದಿಕ್ಕಿನತ್ತ ಚಲಿಸಿ ಇನ್ನಷ್ಟು ದುರ್ಬಲಗೊಳ್ಳಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

Burevi Cyclone: Chennai To Get More Rain Today

ವಾಯುಭಾರ ಕುಸಿತದ ಪರಿಣಾಮವಾಗಿ ತಮಿಳುನಾಡು, ಪುದುಚೇರಿ, ಕೇರಳದಲ್ಲಿ ಭಾರಿ ಮಳೆಯಾಗುತ್ತಿದೆ. ಕೇರಳದ 7 ಜಿಲ್ಲೆಗಳಿಗೆ ನೀಡಿದ್ದ ರೆಡ್ ಅಲರ್ಟ್ ಹಿಂಪಡೆಯಲಾಗಿದೆ.

ಪಂಬನ್ ಸಮೀಪದಲ್ಲಿರುವ ಬುರೆವಿ ಚಂಡಮಾರುತ ಗಂಟೆಗೆ 9 ಕಿಲೋ ಮೀಟರ್ ವೇಗದಲ್ಲಿ ಪಶ್ಚಿಮದತ್ತ ಚಲಿಸುತ್ತಿದ್ದು, ಪಂಬನ್‌ನಿಂದ ನೈರುತ್ಯಕ್ಕೆ 20 ಕಿ.ಮೀ ಮತ್ತು ಕನ್ಯಾಕುಮಾರಿಯ ಪೂರ್ವ-ಈಶಾನ್ಯಕ್ಕೆ 210 ಕಿ.ಮೀ ದೂರದಲ್ಲಿರುವ ರಾಮನಾಥಪುರಂ ಕರಾವಳಿಯ ಸಮೀಪದಲ್ಲಿದೆ.

ಶನಿವಾರ ಮುಂಜಾನೆ 50-60 ರಿಂದ 70 ಕಿಲೋ ಮೀಟರ್ ವೇಗದ ಗಾಳಿಯೊಂದಿಗೆ ರಾಮನಾಥಪುರಂ ಮತ್ತು ತುತುಕೂಡಿಯನ್ನು ದಾಟಲಿದೆ. ಭಾನುವಾ ಮುಂಜಾನೆಯಷ್ಟೊತ್ತಿಗೆ ಮುಂಜಾನೆ ಮತ್ತಷ್ಟು ದುರ್ಬಲಗೊಳ್ಳುವ ಸಾಧ್ಯತೆಯಿದೆ ಎಂದು ಪ್ರಾದೇಶಿಕ ಹವಾಮಾನ ಕೇಂದ್ರದ ಸೈಕ್ಲೋನ್ ವಾರ್ನಿಂಗ್ ಸೆಂಟರ್ ನಿರ್ದೇಶಕ ಎನ್. ಪುವಿಯಾರಸನ್ ಹೇಳಿದ್ದಾರೆ.

ರಾಮನಾಥಪುರಂ, ತುತುಕೂಡಿ, ತಿರುನೆಲ್ವೇಲಿ,ಕನ್ಯಾಕುಮಾರಿ, ತೆಂಕಸಿ, ವಿರುಧುನಗರ, ಮಧುರೈ, ಮತ್ತು ಶಿವಗಂಗೈ ಜಿಲ್ಲೆಗಳಲ್ಲಿ ಶನಿವಾರದವರೆಗೂ ಭಾರೀ ಮಳೆ ಮುಂದುವರೆಯಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+