ಮರ್ಯಾದಾ ಹತ್ಯೆಯಿಂದ ಪ್ರೇಯಸಿ ಉಳಿಸಲು ತಾನೇ ಬೆಂಕಿ ಹಚ್ಚಿಕೊಂಡ ಪ್ರಿಯಕರ
ಚೆನ್ನೈ, ಮೇ 25: ತನ್ನ ಪ್ರೇಯಸಿಯನ್ನು ಉಳಿಸಲು ತಾನೇ ಬೆಂಕಿ ಹಚ್ಚಿಕೊಂಡು ಪ್ರಿಯಕರನೊಬ್ಬ ಆಸ್ಪತ್ರೆ ಸೇರಿರುವ ಘಟನೆ ತಮಿಳುನಾಡಿನಲ್ಲಿ ನಡೆದಿದೆ.
ವಿಜಯ್ ಹಾಗೂ ಅಪರ್ಣಶ್ರೀ ಇಬ್ಬರೂ ಎಂಜಿನಿಯರಿಂಗ್ ಪೂರೈಸಿದ್ದು, ಪರಸ್ಪರ ಪ್ರೀತಿಸುತ್ತಿದ್ದರು. ವಿಜಯ್ ಉದ್ಯೋಗವರಸಿ ಚೆನ್ನೈಗೆ ಹೋಗಿದ್ದ.
ಈ ಸಂದರ್ಭದಲ್ಲಿ ಅಪರ್ಣಶ್ರೀ ಹಾಗೂ ವಿಜಯ್ ಬಗ್ಗೆ ಅಪರ್ಣ ಅವರ ಮನೆಯವರಿಗೆ ಗೊತ್ತಾಗಿತ್ತು, ಆಕೆಯ ಮೊಬೈಲ್‌ನ್ನು ಕಿತ್ತಿಟ್ಟುಕೊಂಡಿದ್ದರು. ಅಷ್ಟೇ ಅಲ್ಲದೆ ಆಕೆಯ ಕೈಗಳನ್ನು ಕೂಡ ಕಟ್ಟಿ ಹಾಕಿದ್ದರು.

ವಿಜಯ್ ಕುಟುಂಬಸ್ಥರು ಅಪರ್ಣಶ್ರೀ ಮನೆಗೆ ತೆರಳಿ ಮಗಳನ್ನು ಮದುವೆ ಮಾಡಿಕೊಡುವಂತೆ ಮನವಿ ಮಾಡಿದ್ದರು. ಆದರೆ ಅಪರ್ಣ ಮನೆಯವರು ವಿಜಯ್ ವಿರುದ್ಧ ದೂರು ದಾಖಲಿಸಿದ್ದರು.
ವಿಜಯ್ ಮತ್ತೆ ಅಪರ್ಣ ಮನೆಗೆ ಹೋಗಿ ಅವರ ಪೋಷಕರ ಬಳಿ ಮದುವೆ ಮಾಡಿಕೊಡಿ ಎಂದು ಮನವಿ ಮಾಡಿದ್ದ, ಆಗ ಆಕೆಯ ಪೋಷಕರು ಅಪರ್ಣ ಸತ್ತಾಗಲೇ ಈ ವಿಷಯಕ್ಕೆ ಅಂತ್ಯ ಎಂದು ಹೇಳಿದ್ದರು.
ಅದಕ್ಕೆ ಗಾಬರಿಗೊಂಡ ವಿಜಯ್ ಪ್ರೇಯಸಿಯನ್ನು ಉಳಿಸಲು ಆಕೆಯ ಮನೆಯ ಮುಂದೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿಕೊಂಡಿದ್ದಾನೆ, ಬಳಿಕ ಆತನನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಈ ಕುರಿತು ತನಿಖೆ ನಡೆಯುತ್ತಿದೆ.












Click it and Unblock the Notifications