ಮುಂದಿನ ಪ್ರಧಾನಿ ತಮಿಳ್ನಾಡಿಂದಲೇ: AIADMK ಘೋಷಣೆ

aiadmk-takes-resolution-to-send-next-prime-minister-from-tamil-nadu
ಚೆನ್ನೈ, ಡಿ. 20: ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಪ್ರಧಾನಿ ಹುದ್ದೆಗೆ ಸೂಕ್ತ ವ್ಯಕ್ತಿ, ಅವರ ಪಕ್ಷ ಸಹ ಜಯಲಲಿತಾ ಅವರನ್ನು ಪ್ರಧಾನಿ ಸ್ಥಾನದಲ್ಲಿ ಕೂರಿಸಲು ಶ್ರಮವಹಿಸಿ ಕೆಲಸ ಮಾಡುವ ಶಕ್ತಿ ಹೊಂದಿದೆ ಎಂದು ಮಾಜಿ ಪ್ರಧಾನಿ, ಜೆಡಿಎಸ್ ರಾಷ್ಟ್ರಾಧ್ಯಕ್ಷ ಎಚ್ಡಿ ದೇವೇಗೌಡರು ಮೊನ್ನೆಯಷ್ಟೇ ಫರ್ಮಾನು ಹೊರಡಿಸಿದ್ದರು.

ಎಐಎಡಿಎಂಕೆ ಪಕ್ಷವು ದೊಡ್ಡ ಗೌಡರ ಈ ಮಾತುಗಳಿಂದ ಪ್ರೇರಣೆ ಪಡೆಯಿತೋ ಅಥವಾ ಇಲ್ಲವೋ ಗೊತ್ತಿಲ್ಲ. ಆದರೆ, ಮುಂದಿನ ಪ್ರಧಾನಿ ತಮಿಳುನಾಡಿನಿಂದಲೇ ಆಯ್ಕೆಯಾಗುತ್ತಾರೆ. ಅರ್ಥಾತ್ ನಮ್ಮ ಪಕ್ಷದ ಅಧಿನಾಯಕಿ ಜಯಲಲಿತಾ ಅವರು ಪ್ರಧಾನಿ ಪಟ್ಟಕ್ಕೆ ಏರುವುದು ಖಚಿತ ಎಂದು ಅಣ್ಣಾ ಡಿಎಂಕೆ ಘೋಷಿಸಿದೆ. (ಮೋದಿ-ಗಾಂಧಿ ಇಬ್ರೂ ಬೇಡ, ಜಯಾ ಪ್ರಧಾನಿಯಾಗಲಿ)

ಸದ್ಯಕ್ಕೆ ತೃತೀಯ ರಂಗದ ಕನಸಿನ ಬೆನ್ನೇರಿರುವ AIADMK, ಮುಂದಿನ ಲೋಕಸಭೆ ಚುನಾಣೆಯಲ್ಲಿ ಹೆಚ್ಚು ಸ್ಥಾನಗಳನ್ನು ಗಳಿಸುವ ಮೂಲಕ ಜಯಲಲಿತಾ ಅವರನ್ನೇ ಪ್ರಧಾನಿಯಾಗಿಸಬೇಕು ಎಂದು ದೃಢ ಸಂಕಲ್ಪ ತೊಟ್ಟಿದೆ.

ಒಂದು ವೇಳೆ AIADMK ಕನಸು ನನಸಾಗುವುದಾದರೆ ಪಿವಿ ನರಸಿಂಹ ರಾವ್ ಮತ್ತು ದೇವೇಗೌಡರ ನಂತರ ದಕ್ಷಿಣ ಭಾರತದ ಮತ್ತೊಬ್ಬರು ಪ್ರಧಾನಿ ಪಟ್ಟಕ್ಕೆ ಏರಿದಂತಾಗುತ್ತದೆ. (ಕಾವೇರಿ ತಣ್ಣಿಗಾಗಿ '40 ಜಯ' ತಂದುಕೊಡಿ ಸಾಕು)

ಅಣ್ಣಾ ಡಿಎಂಕೆ ಪಕ್ಷದ ಸಾಮಾನ್ಯ ಸಭೆಯು ಈ ಸಂಬಂಧ ನಿರ್ಣಯವೊಂದನ್ನು ಅಂಗೀಕರಿಸಿದ್ದು, ಪ್ರಧಾನಿ ಹುದ್ದೆಗೆ ಜಯಲಲಿತಾರ ಹೆಸರನ್ನು ನೇರವಾಗಿ ಸೂಚಿಸಿಲ್ಲವಾದರೂ ತಮಿಳುನಾಡಿನವರೇ ಮುಂದಿನ ಪ್ರಧಾನಿಯಾಗಬೇಕು ಎಂದು ಬಯಸಿದೆ. ಅಂದಹಾಗೆ, ಜಯಲಲಿತಾ ಅವರು ಪಕ್ಷದ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿದ್ದರು.

ಪುದುಚೇರಿಯ ಒಂದು ಸ್ಥಾನ ಸೇರಿದಂತೆ ಒಟ್ಟು 40 ಸಂಸದೀಯ ಸ್ಥಾನಗಳನ್ನು ತಮ್ಮ ಪಕ್ಷವೇ (AIADMK) ಜಯಿಸಬೇಕು. ತನ್ಮೂಲಕ ಜಯಲಲಿತಾ ಅವರು ಪ್ರಧಾನಿ ಗದ್ದುಗೆಗೇರುವುದು ಸುಲಲಿತವಾಗಬೇಕು ಎಂದು ಪಕ್ಷ ಅಭಿಪ್ರಾಯಪಟ್ಟಿದೆ. (ಮೋದಿ ಜತೆ ಗುರುತಿಸಿಕೊಳ್ಳದ ರಜನಿಕಾಂತ್ ಜಯಲಲಿತಾ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+