ರೈತರಾಯಿತು, ಈಗ ರಜನಿಯಿಂದ ಹಿಂದೂ ಸಂಘಟನೆಗಳ ಭೇಟಿ

By: ಅನುಷಾ ರವಿ
Subscribe to Oneindia Kannada

ಚೆನ್ನೈ, ಜೂನ್ 19: ತಮಿಳು ನಟ ರಜನೀಕಾಂತ್ ಇಷ್ಟು ಬಾರಿ ಸಾರ್ವಜನಿಕವಾಗಿ ಕಾಣಿಸಿಕೊಂಡ ಉದಾಹರಣೆ ಕಡಿಮೆ. ಅದೂ ಇತ್ತೀಚಿನ ವರ್ಷಗಳಲ್ಲಿ ಸಾರ್ವಜನಿಕ ಜೀವನದಲ್ಲಿ ಈ ಪರಿಯ ಚಟುವಟಿಕೆಯಿಂದ ಇರಲಿಲ್ಲ. ಆದರೆ ನಾಲ್ಕೈದು ತಿಂಗಳಿಂದ ವಿಪರೀತ ಸುದ್ದಿಯಲ್ಲಿದ್ದಾರೆ.

ರೈತರಿಗೆ 1 ಕೋಟಿ ರು ನೀಡಿದ ಸೂಪರ್ ಸ್ಟಾರ್ ರಜನಿಕಾಂತ್

ಭಾನುವಾರವಷ್ಟೇ ರೈತರಿಗೆ ಒಂದು ಕೋಟಿ ರುಪಾಯಿ ನೀಡುವ ಮೂಲಕ ಸುದ್ದಿಯಲ್ಲಿದ್ದ ರಜನಿ, ಹಿಂದೂಪರ ಸಂಘಟನೆಯ ಭೇಟಿಗೆ ಸಿದ್ಧತೆ ನಡೆಸಿದ್ದಾರೆ. ಸದ್ಯದಲ್ಲೇ ತಮಿಳುನಾಡಿನ ಹಿಂದೂ ಮಕ್ಕಳ್ ಕಚ್ಚಿಯ ಸದಸ್ಯರನ್ನು ಭೇಟಿ ಮಾಡಲಿದ್ದಾರೆ. ಈ ವರಸೆಗಳೆಲ್ಲ ಯಥಾಪ್ರಕಾರ ರಜನಿ ರಾಜಕೀಯ ಅರಂಗೇಟ್ರಂ ಕಡೆಗೆ ಬೊಟ್ಟು ಮಾಡುತ್ತದೆ.

After farmers, Rajinikanth to meet members of pro-Hindu organisation

ಹಿಂದೂ ಮುನ್ನಣಿಯಿಂದ ಬೇರ್ಪಟ್ಟು, ರಾಷ್ಟ್ರೀಯತಾವಾದಿ ಹಿಂದೂ ಪಕ್ಷ ಎಂದು ಹಿಂದೂ ಮಕ್ಕಳ್ ಕಚ್ಚಿ ಕರೆದುಕೊಳ್ಳುತ್ತದೆ. ಅಂದಹಾಗೆ ರಜನಿ ಇತ್ತೀಚೆಗೆ ತಮ್ಮ ಅಭಿಮಾನಿಗಳನ್ನು ಭೇಟಿ ಮಾಡಿದ್ದ ಸಂದರ್ಭದಲ್ಲಿ, ಸರಿಯಾದ ಸಮಯಕ್ಕೆ ರಾಜಕೀಯ ಪ್ರವೇಶ ಮಾಡುವ ಸುಳಿವು ನೀಡಿದ್ದರು.

ಆ ನಂತರ ಸರಣಿಯಾಗಿ ಭೇಟಿಗಳನ್ನು ಶುರು ಮಾಡಿದ್ದ ರಜನಿ, ಊಹೆಗಳಿಗೆ ಒಂದಿಷ್ಟು ತುಪ್ಪ ಸುರಿದರು. ಸೋಮವಾರ ಮಧ್ಯಾಹ್ನ ಹಿಂದೂ ಮಕ್ಕಳ ಕಚ್ಚಿಯ ಸದಸ್ಯರು ರಜನಿಯನ್ನು ಭೇಟಿ ಮಾಡಲು ಎಲ್ಲ ಸಿದ್ಧತೆ ನಡೆದಿದೆ. ಭೇಟಿಯ ಉದ್ದೇಶ ಏನು ಎಂಬುದು ಸ್ಪಷ್ಟವಿಲ್ಲದಿದ್ದರೂ ಇದರ ಸಂದೇಶ ಏನು ಎಂಬುದು ಸ್ಪಷ್ಟವಾಗಿದೆ.

ಮತ್ತೆ ಅಭಿಮಾನಿಗಳ ಭೇಟಿಯಾಗಲಿರುವ ರಜನಿ, ರಾಜಕೀಯ ಹಕ್ಕಿಗೆ ರೆಕ್ಕೆ

ರಜನೀಕಾಂತ್ ನಿಧಾನವಾಗಿ ಸಾರ್ವಜನಿಕವಾಗಿ ಹೆಚ್ಚಿನ ಪ್ರಮಾಣದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಮತ್ತು ಸದಾ ಸುದ್ದಿಯಲ್ಲಿರುವಂತೆ ನೋಡಿಕೊಳ್ಳುತ್ತಿದ್ದಾರೆ. ಈ ಹಿಂದೆ ಯಾವತ್ತಿಗೂ ನಡೆದುಕೊಳ್ಳದ ರೀತಿಯಲ್ಲಿ ಭಾನುವಾರ ರೈತರ ನಿಯೋಗವನ್ನು ಭೇಟಿ ಮಾಡಿ ಸಹಾಯದ ಭರವಸೆ ನೀಡಿದ್ದಾರೆ.

ಹಣಕಾಸಿನ ನೆರವು ನೀಡುವ ಬಗ್ಗೆ ಕೂಡ ಹೇಳಿ, ನದಿ ಜೋಡಣೆ ಸಂಬಂಧ ಪ್ರಧಾನಿ ಮೋದಿ ಜತೆ ಮಾತುಕತೆ ನಡೆಸುವುದಾಗಿ ತಿಳಿಸಿದ್ದಾರೆ.

ಒನ್ಇಂಡಿಯಾ ನ್ಯೂಸ್

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
A day after he met farmers, Tamil superstar Rajinikanth is all set to meet members of Hindu Makkal Katchi. The meeting between Rajinikanth and the Hindu outfit has only added fuel to speculations of the actor taking the political plunge.
Please Wait while comments are loading...