ತಮಿಳುನಾಡು: ಕುಟುಂಬದ ಮೂವರನ್ನು ಕೊಂದು, ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ

ಚೆನ್ನೈ, ಫೆಬ್ರವರಿ 18: ಮಗಳು ಅಂತರ್ಜಾತಿ ವಿವಾಹ ಮಾಡಿಕೊಂಡಿದ್ದಾಳೆ ಎಂಬ ಬೇಸರಕ್ಕೆ ಕುಟುಂಬದ ಮೂವರನ್ನು ಕೊಂದು ತಂದೆಯೊಬ್ಬರು ತಾವೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಮಿಳುನಾಡಿನಲ್ಲಿ ನಡೆದಿದೆ.

ತನ್ನ ಪತ್ನಿ, ಇಬ್ಬರು ಹೆಣ್ಣುಮಕ್ಕಳನ್ನು ಹತ್ಯೆ ಮಾಡಿ ತಾನು ಆತ್ಮಹತ್ಯೆಗೆ ಶರಣಾಗಿದ್ದಾನೆ, ಪತಿ ಜತೆಗಿದ್ದ ಮತ್ತೊಬ್ಬ ಮಗಳು ಸುರಕ್ಷಿತವಾಗಿದ್ದಾಳೆ, ಇದು ತಮಿಳುನಾಡಿನ ನಾಗಪಟ್ಟಿಣಂ ಜಿಲ್ಲೆಯಲ್ಲಿ ನಡೆದ ಘಟನೆಯಾಗಿದೆ.

ಲಕ್ಷ್ಮಣನಂ ಎಂಬಾತ ಟೀ ಅಂಗಡಿ ನಡೆಸುತ್ತಿದ್ದ, ಅವರ ಹಿರಿಯ ಪುತ್ರಿ ಪರಿಶಿಷ್ಟ ಜಾತಿಗೆ ಸೇರಿದ್ದ ವ್ಯಕ್ತಿಯನ್ನು ಮದುವೆಯಾಗಿದ್ದಳು, ಆ ವಿಷಯದಲ್ಲಿ ತುಂಬಾ ನೊಂದಿದ್ದರು.
ಮಗಳ ಮೇಲಿನ ಸೇಡನ್ನು ಇಡೀ ಕುಟುಂಬದವರ ಮೇಲೆ ತೀರಿಸಿಕೊಂಡಿದ್ದಾರೆ, ಅಪ್ರಾಪ್ತ ವಯಸ್ಸಿನ ಮಗಳು ಸೇರಿದಂತೆ ಮೂವರನ್ನು ಕೊಂದು ತಾನೂ ಆತ್ಮಹತ್ಯೆಗೆ ಶರಣಾಗಿದ್ದಾನೆ.

After Daughters Inter-caste Marriage: Man Kills 3 In Family, Dies By Suicide

2016ರಲ್ಲಿ ಇಂಥದ್ದೇ ಒಂದು ಘಟನೆ ನಡೆದಿತ್ತು: ತಮಿಳುನಾಡಿನ ತಿರುಪ್ಪೂರ್ ಜಿಲ್ಲೆಯಲ್ಲಿನ ಉದುಮಲ್ಪೇಟೆ ಎಂಬ ಪ್ರದೇಶದಲ್ಲಿ, ಮೇಲ್ವರ್ಗದ ಯುವತಿಯನ್ನು ಪ್ರೀತಿಸಿ ಮದುವೆಯಾಗಿದ್ದ ಕಾರಣಕ್ಕೆ ಪರಿಶಿಷ್ಟ ಜಾತಿಗೆ ಸೇರಿದ ಯುವಕನನ್ನು ದುಷ್ಕರ್ಮಿಗಳು ಹತ್ಯೆ ಮಾಡಿದ್ದರು. ಎಂಜಿನಿಯರಿಂಗ್ ವಿದ್ಯಾರ್ಥಿಯಾಗಿದ್ದ 23 ವರ್ಷದ ವಿ. ಶಂಕರ್ ಎಂಬಾತನನ್ನು, ಪತ್ನಿಯ ಕುಟುಂಬದವರು ಸುಪಾರಿ ನೀಡಿದ್ದ ಗೂಂಡಾಗಳು ಹತ್ಯೆ ಮಾಡಿದ್ದರು.

ಆತನ ಪತ್ನಿ ಕೌಸಲ್ಯಾ ಮೇಲೆ ಕೂಡ ದಾಳಿ ನಡೆದಿದ್ದು, ಆಕೆ ತೀವ್ರವಾಗಿ ಗಾಯಗೊಂಡಿದ್ದಳು. ಕೌಸಲ್ಯಾ ತಂದೆ ಚಿನ್ನಸ್ವಾಮಿ ಸೇರಿದಂತೆ ಆರು ಮಂದಿಗೆ ಸೆಷನ್ಸ್ ನ್ಯಾಯಾಲಯ ಗಲ್ಲು ಶಿಕ್ಷೆ ವಿಧಿಸಿತ್ತು.

2020ರಲ್ಲಿ ಮಹಿಳೆಯ ತಂದೆಯನ್ನು ಖುಲಾಸೆಗೊಳಿಸಿದ್ದ ಮದ್ರಾಸ್ ಹೈಕೋರ್ಟ್, ಉಳಿದ ಅಪರಾಧಿಗಳ ಗಲ್ಲು ಶಿಕ್ಷೆಯನ್ನು ಜೀವಾವಧಿ ಶಿಕ್ಷೆಯನ್ನಾಗಿ ಪರಿವರ್ತನೆ ಮಾಡಿತ್ತು. ಇನ್ನೆರಡು ಪ್ರಕರಣಗಳಲ್ಲಿ ಮೇಲ್ಜಾತಿಯ ಹೆಣ್ಣುಮಕ್ಕಳನ್ನು ಮದುವೆಯಾಗಿದ್ದ ಕಾರಣಕ್ಕೆ ಪರಿಶಿಷ್ಟ ಜಾತಿಗೆ ಸೇರಿದ ವ್ಯಕ್ತಿಗಳನ್ನು ಹತ್ಯೆ ಮಾಡಿ ಶವಗಳನ್ನು ರೈಲ್ವೆ ಹಳಿ ಮೇಲೆ ಎಸೆಯಲಾಗಿತ್ತು.


ನಿಮ್ಹಾನ್ಸ್, ರೋಟರಿ ಸಂಸ್ಥೆ ಹಾಗೂ ಮೆಡಿಕೊ ಪ್ಯಾಸ್ಟೊರಾಲ್ ಅಸೋಸಿಯೇಷನ್ ನೆರವಿನಿಂದ ಬೆಂಗಳೂರಿನಲ್ಲಿ ಆತ್ಮಹತ್ಯೆ ತಡೆಗಟ್ಟಲು, ಮಾನಸಿಕ ಖಿನ್ನತೆಯಿಂದ ಬಳಲುವವರಿಗಾಗಿ SAHAI ಸಹಾಯವಾಣಿ ಇಂತಿದೆ: 080 - 25497777

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+