Get Updates
Get notified of breaking news, exclusive insights, and must-see stories!

ಮತ್ತೆ ಅಭಿಮಾನಿಗಳ ಭೇಟಿಯಾಗಲಿರುವ ರಜನಿ, ರಾಜಕೀಯ ಹಕ್ಕಿಗೆ ರೆಕ್ಕೆ

ಚೆನ್ನೈ, ಜೂನ್ 8: ತಮಿಳು ನಟ ರಜನೀಕಾಂತ್ ಅವರ ಸಹೋದರ ತಿಳಿಸಿದ್ದ ವಿಚಾರದ ಪೈಕಿ ಮೊದಲಾರ್ಧ ನಿಜವಾಗುತ್ತಿದೆ. ರಜನೀಕಾಂತ್ ತಮ್ಮ ಅಭಿಮಾನಿಗಳನ್ನು ಮತ್ತೊಮ್ಮೆ ಭೇಟಿ ಅಗಲು ನಿರ್ಧರಿಸಿದ್ದಾರೆ ಎಂಬ ಸುದ್ದಿ ಬರುತ್ತಿದೆ. ಇದೇ ವಿಚಾರವನ್ನು ರಜನಿ ಸಹೋದರ ಸತ್ಯನಾರಾಯಣ ರಾವ್ ತಿಳಿಸಿದ್ದರು.

ಸದ್ಯಕ್ಕೆ ರಜನೀಕಾಂತ್ ಕಾಳ ಕರಿಕಾಳನ್ ಚಿತ್ರದ ಚಿತ್ರೀಕರಣ ಮುಗಿಸಿ, ಮುಂಬೈನಿಂದ ಚೆನ್ನೈಗೆ ವಾಪಸ್ ಬಂದಿದ್ದಾರೆ. ಹಾಗೆ ವಾಪಸ್ ಬರುವಾಗ ಚೆನ್ನೈ ವಿಮಾನ ನಿಲ್ದಾಣದಲ್ಲಿ ಪತ್ರಕರ್ತರ ಜತೆಗೆ ಮಾತನಾಡಿದ ರಜನಿ, ಕರಿಕಾಳನ್ ಸಿನಿಮಾದ ಎರಡನೇ ಹಂತದ ಚಿತ್ರೀಕರಣ ಸದ್ಯದಲ್ಲೇ ಶುರುವಾಗುತ್ತದೆ ಎಂದು ತಿಳಿಸಿದ್ದಾರೆ.[ಖಾಮೋಶ್, ಬೇರೆ ಪಕ್ಷಗಳೇ ರಜನಿ ಪಕ್ಷವನ್ನು ಸೇರಲಿ!]

Actor Rajini will again meet their fans

ಸುಮಾರು ಎಂಟು ವರ್ಷಗಳ ಬಳಿಕ ರಜನೀಕಾಂತ್ ತಮ್ಮ ಅಭಿಮಾನಿಗಳನ್ನು ಭೇಟಿ ಮಾಡಿದ್ದರು. ಮತ್ತೆ ಯಾವಾಗ ಭೇಟಿ ಆಗುತ್ತೇನೆ ಎಂದು ತಿಳಿಸುವುದಾಗಿ ಕೂಡ ಹೇಳಿದ್ದರು. ಮತ್ತೆ ಅಭಿಮಾನಿಗಳನ್ನು ಭೇಟಿ ಮಾಡಲು ರಜನಿ ಮುಂದಾಗಿರುವುದು ಸಹಜವಾಗಿಯೇ ಕುತೂಹಲಕ್ಕೆ ಕಾರಣವಾಗಿದೆ.[ರಜನೀಕಾಂತ್ ರಾಜಕೀಯ ಅರಂಗೇಟ್ರಂಗೆ ಬೆಂಗಳೂರಿನ ಏಜೆನ್ಸಿ ನೆರವು]

ರಜನಿ ರಾಜಕೀಯ ಪ್ರವೇಶ ಹಾಗೂ ಅದರ ಸುತ್ತ ಹರಿದಾಡುತ್ತಿರುವ ಸುದ್ದಿ, ಬೆಳವಣಿಗೆಗಳು ಅಭಿಮಾನಿಗಳಲ್ಲಿ ನಿರೀಕ್ಷೆಯನ್ನು ಹುಟ್ಟುಹಾಕಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+