• search
  • Live TV
ಚೆನ್ನೈ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಬಿಜೆಪಿಗೆ 'ನೋ', ಕಾಂಗ್ರೆಸ್ಸಿಗೆ 'ಎಸ್' ಎಂದ ಖುಷ್ಬೂ

By Mahesh
|

ಚೆನ್ನೈ, ನ.26: 'ನಾನು ಯಾವ ಪಕ್ಷಕ್ಕೂ ಸೇರುತ್ತಿಲ್ಲ, ಬಿಜೆಪಿಗಂತೂ ಸೇರುವ ಸಾಧ್ಯತೆಯೇ ಇಲ್ಲ' ಎಂದು ಹೇಳುತ್ತಿದ್ದ ನಟಿ ಕಮ್ ರಾಜಕಾರಣಿ ಖುಷ್ಬೂ ಅವರು ಬುಧವಾರ ಸಂಜೆ ದೇಶದ ಪುರಾತನ ಪಕ್ಷದ ಕೈ ಹಿಡಿದಿದ್ದಾರೆ. ಖುಷ್ಬೂ ಸುಂದರ್ ಅವರು ಕಾಂಗ್ರೆಸ್ ಪಕ್ಷವನ್ನು ಅಧಿಕೃತವಾಗಿ ಸೇರಿದ್ದಾರೆ ಎಂದು ತಮಿಳು ನಾಡು ಕಾಂಗ್ರೆಸ್ ಘಟಕ ದೃಢಪಡಿಸಿದೆ.

ನವದೆಹಲಿಯಲ್ಲಿ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಖುಷ್ಬೂ ಅವರು ಬುಧವಾರ ಭೇಟಿ ಮಾಡಿ ಮಾತುಕತೆ ನಡೆಸಿದ್ದರು. ದೆಹಲಿಯಲ್ಲಿ ಅವರು ಸೋನಿಯಾ ಗಾಂಧಿ ಅವರ ಸಮ್ಮುಖದಲ್ಲಿ ಪಕ್ಷಕ್ಕೆ ಸೇರಿದ್ದಾರೆ ಎಂದು ತಮಿಳುನಾಡಿನ ಕಾಂಗ್ರೆಸ್ ಅಧ್ಯಕ್ಷ ಇವಿಕೆಎಸ್ ಇಳಂಗೋವನ್ ಅವರು ಪಿಟಿಐಗೆ ತಿಳಿಸಿದ್ದಾರೆ.

ಮಂಗಳವಾರದಂದು ಖುಷ್ಬೂ ಅವರು ಸಾಮಾಜಿಕ ಜಾಲ ತಾಣ ಟ್ವಿಟ್ಟರ್ ನಲ್ಲಿ "Wow..sum prove 2 b absolutely jobless n dumb yet agn..i m not joining any political party..news making rounds r baseless..pls dnt pay heed." ಎಂದು ಸಂದೇಶ ಹಾಕಿದ್ದರು. ಅದರೆ, ಈಗ ಕಾಂಗ್ರೆಸ್ ಗೆ ಜೈ ಎಂದಿದ್ದಾರೆ.ಬಿಜೆಪಿ ಸೇರುವಂತೆ ಕೇಂದ್ರ ಸಚಿವೆಯರಾದ ಸ್ಮೃತಿ ಇರಾನಿ ಹಾಗೂ ನಜ್ಮಾ ಹೆಫ್ತುಲ್ಲಾ ಅವರು ಖುಷ್ಬೂಗೆ ಮನವಿ ಮಾಡಿಕೊಂಡಿದ್ದರು ಎಂಬ ಸುದ್ದಿ ಹಬ್ಬಿತ್ತು. [ಡಿಎಂಕೆ ತೊರೆದು 'ಕಮಲ' ಪರವಾದ ಖುಷ್ಬೂ?]

ಬಾಲನಟಿಯಾಗಿ ಚಿತ್ರರಂಗಕ್ಕೆ ಕಾಲಿರಿಸಿದ ಖುಷ್ಬೂ 2010ರಲ್ಲಿ ಡಿಎಂಕೆ ಸೇರಿದ್ದರು. ಚುನಾವಣೆಯಲ್ಲಿ ಸ್ಪರ್ಧಿಸದೇ ಇದ್ದರೂ, ಡಿಎಂಕೆಯ ಸ್ಟಾರ್ ಪ್ರಚಾರಕರಾಗಿದ್ದರು. ಕಳೆದ ಲೋಕಸಭೆ ಚುನಾವಣೆ 2014 ರಲ್ಲಿ ದ್ರಾವಿಡ ಮುನ್ನೇತ್ರ ಕಳಗಂ ಪಕ್ಷ ಹೀನಾಯ ಸೋಲು ಕಂಡಿತ್ತು. [ರಾಜಕೀಯಕ್ಕೆ ರಜನಿಕಾಂತ್ ಬರುವುದು ಬೇಡ]

ಜಯಲಲಿತಾ ನೇತೃತ್ವದ ಎಐಎಡಿಎಂಕೆ ಪಕ್ಷ 39 ಸೀಟುಗಳ 37 ಸೀಟು ಗೆದ್ದು ಭರ್ಜರಿ ವಿಜಯ ದಾಖಲಿಸಿ ಅಧಿಕಾರ ಚುಕ್ಕಾಣಿ ಹಿಡಿದಿತ್ತು. ಕಾಂಗ್ರೆಸ್ ಕೇವಲ 5 ಸೀಟು ಗಳಿಸಿದ್ದೇ ಸಾಧನೆ. ಜಿಕೆ ವಾಸನ್ ಈಗ ಪಕ್ಷ ತೊರೆದಿದ್ದು, ಹೊಸ ಚೈತನ್ಯ ನೀಡಲು ಖುಷ್ಬೂ ಸೇರ್ಪಡೆ ಮಾಡಿಕೊಳ್ಳಲಾಗಿದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Actor-politician Khushboo from Tamil Nadu will become a member of the Congress party today(Nov.26). My focus is for the good of the country, won’t focus on TN alone but entire country: Khushboo Sundar on joining Congress
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more