ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಡಿಎಂಕೆ ತೊರೆದು 'ಕಮಲ' ಪರವಾದ ಖುಷ್ಬೂ?

By Mahesh
|
Google Oneindia Kannada News

ಚೆನ್ನೈ, ಜೂ.17: ನಟಿ, ರಾಜಕಾರಣಿ ಖುಷ್ಬೂ ಡಿಎಂಕೆ ಪಕ್ಷ ತೊರೆದಿದ್ದಾರೆ. 'ನನ್ನ ಶ್ರಮಕ್ಕೆ ಸರಿಯಾದ ಮನ್ನಣೆ ಸಿಕ್ಕಿಲ್ಲ. ಇದರಿಂದ ನಾನು ತುಂಬಾ ಒತ್ತಡ ಅನುಭವಿಸಬೇಕಾಗಿ ಬಂತು ಎಂದು ಡಿಎಂಕೆ ಮುಖ್ಯಸ್ಥ ಎಂ.ಕರುಣಾನಿಧಿ ಅವರಿಗೆ ಖುಷ್ಬೂ ಬರೆದ ಪತ್ರದಲ್ಲಿ ಹೇಳಿದ್ದಾರೆ.

ಬಾಲನಟಿಯಾಗಿ ಚಿತ್ರರಂಗಕ್ಕೆ ಕಾಲಿರಿಸಿದ ಖುಷ್ಬೂ 2010ರಲ್ಲಿ ಡಿಎಂಕೆ ಸೇರಿದ್ದರು. ಚುನಾವಣೆಯಲ್ಲಿ ಸ್ಪರ್ಧಿಸದೇ ಇದ್ದರೂ, ಡಿಎಂಕೆಯ ಸ್ಟಾರ್ ಪ್ರಚಾರಕರಾಗಿದ್ದರು ಅವರು. ಪಕ್ಷ ತೊರೆಯುವುದ ಕಷ್ಟ ಅಂತ ಗೊತ್ತಿದೆ. ಆದರೆ ಇದೀಗ ಸಮಯ ಬಂದಿದೆ. ನಗುಮುಖದಿಂದಲೇ ಹೊರ ಹೋಗುತ್ತಿದ್ದೇನೆ ಎಂದು ಟ್ವೀಟ್ ಮಾಡುವ ಮೂಲಕ ಖುಷ್ಬೂ ತನ್ನ ರಾಜಿನಾಮೆ ವಿಷಯವನ್ನು ಬಹಿರಂಗ ಪಡಿಸಿದ್ದಾರೆ.

ಕಳೆದ ಲೋಕಸಭೆ ಚುನಾವಣೆ 2014 ರಲ್ಲಿ ದ್ರಾವಿಡ ಮುನ್ನೇತ್ರ ಕಳಗಂ ಪಕ್ಷ ಹೀನಾಯ ಸೋಲು ಕಂಡಿತ್ತು. ಜಯಲಲಿತಾ ನೇತೃತ್ವದ ಎಐಎಡಿಎಂಕೆ ಪಕ್ಷ 39 ಸೀಟುಗಳ 37 ಸೀಟು ಗೆದ್ದು ಭರ್ಜರಿ ವಿಜಯ ದಾಖಲಿಸಿ ಅಧಿಕಾರ ಚುಕ್ಕಾಣಿ ಹಿಡಿದಿದೆ.

ಹೊಸ ಮುಂಜಾನೆಯನ್ನು ಕಾಣುತ್ತಿದ್ದೇನೆ ಎಂದು ಟ್ವೀಟ್ ಮಾಡಿರುವ ಖುಷ್ಬೂ ಅವರು ಯಾವ ಪಕ್ಷ ಸೇರುತ್ತಾರೆ ಎಂಬ ಕುತೂಹಲ ಅಭಿಮಾನಿಗಳಲ್ಲಿದೆ.. ಖುಷ್ಬೂ ಟ್ವೀಟ್ ಸಂಗ್ರಹ ಮುಂದೆ ಓದಿ...

ಕರುಣಾನಿಧಿಗೆ ಖುಷ್ಬೂ ಬರೆದ ಪತ್ರ

ಕರುಣಾನಿಧಿಗೆ ಖುಷ್ಬೂ ಬರೆದ ಪತ್ರ

'ನನ್ನ ಶ್ರಮಕ್ಕೆ ಸರಿಯಾದ ಮನ್ನಣೆ ಸಿಕ್ಕಿಲ್ಲ. ಇದರಿಂದ ನಾನು ತುಂಬಾ ಒತ್ತಡ ಅನುಭವಿಸಬೇಕಾಗಿ ಬಂತು ಎಂದು ಡಿಎಂಕೆ ಮುಖ್ಯಸ್ಥ ಎಂ.ಕರುಣಾನಿಧಿ ಅವರಿಗೆ ಖುಷ್ಬೂ ಬರೆದ ಪತ್ರದಲ್ಲಿ ಹೇಳಿದ್ದಾರೆ.

ಖುಷ್ಬೂ ಮುಂದಿನ ಹಾದಿ ಏನು?

ಖುಷ್ಬೂ ಮುಂದಿನ ಹಾದಿ ಏನು?

ಖುಷ್ಬೂ ಅವರು ಬಿಜೆಪಿ ಸ್ವಾಗತಕ್ಕೆ ವೇದಿಕೆ ಸಿದ್ಧವಾಗಿದೆ ಎಂಬ ಸುದ್ದಿಗಳು ದಟ್ಟವಾಗಿ ಕೇಳಿ ಬಂದಿದೆ. ಸದ್ಯಕ್ಕಂತೂ ತಮಿಳುನಾಡಿನಲ್ಲಿ ಚುನಾವಣೆ ನಡೆಯುವುದಿಲ್ಲ ಇನ್ನೆರಡು ವರ್ಷಗಳ ಕಾಲ ತಮಿಳುನಾಡಿನಲ್ಲಿ ಬಿಜೆಪಿ ಬೆಳೆಸಲು ಖುಷ್ಬೂ ನೆರವನ್ನು ಬಿಜೆಪಿ ಕೇಳಿದೆ ಎಂಬ ಸುದ್ದಿಯಿದೆ.

ಅಭಿಮಾನಿಗಳಿಗೆ ಧನ್ಯವಾದ ಆರ್ಪಿಸಿದ ಖುಷ್ಬೂ

ಅಭಿಮಾನಿಗಳಿಗೆ ಟ್ವೀಟ್ ಮಾಡಿ ಧನ್ಯವಾದ ಆರ್ಪಿಸಿದ ಖುಷ್ಬೂ ನನಗೆ ನೀಡಿದ ಬೆಂಬಲಕ್ಕೆ ನಾನು ಚಿರಋಣಿ ಎಂದಿದ್ದಾರೆ.

ಕಾಂಗ್ರೆಸ್ ಬದಲು ಬಿಜೆಪಿ ಸೇರ್ಪಡೆ ಏಕೆ?

ಕಾಂಗ್ರೆಸ್ ಬದಲು ಬಿಜೆಪಿ ಸೇರ್ಪಡೆ ಏಕೆ?

ತಮಿಳುನಾಡಿನಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಎರಡೂ ಕೂಡಾ ಪ್ರಾದೇಶಿಕ ಪಕ್ಷಗಳ ಪ್ರಾಬಲ್ಯ ಮುರಿಯಲು ಸಾಧ್ಯವಾಗದೆ ಹೆಣಗಾಡುತ್ತಿವೆ. ಸದ್ಯ ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದು ಬಿಜೆಪಿ ಸೇರಲು ಖುಷ್ಬೂ ಬಯಸಿದ್ದಾರೆ ಎನ್ನಲಾಗಿದೆ.

ಬಿಜೆಪಿ ಸೇರುವಂತೆ ಕೇಂದ್ರ ಸಚಿವೆಯರಾದ ಸ್ಮೃತಿ ಇರಾನಿ ಹಾಗೂ ನಜ್ಮಾ ಹೆಫ್ತುಲ್ಲಾ ಅವರು ಖುಷ್ಬೂಗೆ ಮನವಿ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

ಸ್ಮೃತಿ ಇರಾನಿ ಖುಷ್ಬೂ ಟ್ವೀಟ್ ಫ್ರೆಂಡ್

ಸ್ಮೃತಿ ಇರಾನಿ ಖುಷ್ಬೂ ಟ್ವೀಟ್ ಫ್ರೆಂಡ್

ಸ್ಮೃತಿ ಇರಾನಿ ಅವರ ವಿದ್ಯಾರ್ಹತೆ ಪ್ರಶ್ನೆ ಎದ್ದಾಗ ಖುಷ್ಬೂ ಅವರು ಸ್ಮೃತಿ ಪರ ನಿಂತು ವಾದಿಸಿದ್ದರು. ಮಹಿಳಾ ಮತ್ತು ಮಕ್ಕಳ ಪರ ದನಿ ಎತ್ತುವವರ ಪರ ಸದಾ ಕಾಲ ಖುಷ್ಬೂ ನಿಲ್ಲುವುದು ಆಕೆಯನ್ನು ರಾಷ್ಟ್ರೀಯ ಮಟ್ಟದಲ್ಲಿ ಜನಪ್ರಿಯಗೊಳಿಸಿದೆ.

ಆರೋಪ ತಳ್ಳಿ ಹಾಕಿದ ಖುಷ್ಬೂ

ನಾನು @kalaignar89 (ಡಿಎಂಕೆ ಮುಖ್ಯಸ್ಥರ ಟ್ವೀಟ್ ಐಡಿ) ಟ್ವೀಟ್ ಐಡಿ ಅನ್ ಫಾಲೋ ಮಾಡಿದ್ದೇನೆ ಎಂಬುದು ಸುಳ್ಳು, ಸುಮ್ಮನೆ ಕಿಡಿ ಹಚ್ಚಬೇಡಿಎ ಎಂದು ಆರೋಪ ತಳ್ಳಿ ಹಾಕಿದ ಖುಷ್ಬೂ

ಖುಷ್ಬೂ ಯಾವ ಪಕ್ಷ ಸೇರಬಹುದು?

ಖುಷ್ಬೂ ಸುಂದರ್ ಯಾವ ಪಕ್ಷ ಸೇರಬಹುದು? ಎಂಬುದರ ಬಗ್ಗೆ ಸಾರ್ವಜನಿಕರಿಂದ ಟ್ವೀಟ್

English summary
Actor Kushboo Sundar, a prominent face of DMK, on Monday quit the party sulking over being “sidelined,” saying her hard work continued to be an “one-way path”.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X