ಮತ್ತೆ ಆಸ್ಪತ್ರೆ ಮುಖ ನೋಡಿದ ಕಮಲ್ ಹಾಸನ್

ಕನ್ಯಾಕುಮಾರಿ, ಅ.16: ಸಕಲಕಲಾವಲ್ಲಭ, ಯೂನಿವರ್ಸಲ್ ಸ್ಟಾರ್ ಕಮಲ್ ಹಾಸನ್ ಅವರ ಗ್ರಹಗತಿ ಚೆನ್ನಾಗಿಲ್ಲ ಎನ್ನಿಸುತ್ತದೆ. ಗುರುವಾರ ಮತ್ತೊಮ್ಮೆ ಕಮಲ್ ಹಾಸನ್ ಅವರು ಆಸ್ಪತ್ರೆ ಮುಖ ನೋಡುವಂತಾಗಿದೆ. ದೃಶ್ಯಂ ರಿಮೇಕ್ ಚಿತ್ರ'ಪಾಪನಾಶಂ' ಚಿತ್ರೀಕರಣ ಸಂದರ್ಭದಲ್ಲಿ ಕಮಲ್ ಗೆ ಉಸಿರಾಟದ ತೊಂದರೆ ಕಾಣಿಸಿಕೊಂಡಿದೆ.

ಉಸಿರಾಡಲು ಕಷ್ಟಪಡುತ್ತಿದ್ದ ಕಮಲ್ ಅವರನ್ನು ಕೂಡಲೇ ಕನ್ಯಾಕುಮಾರಿಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ನಮ್ಮ ಬಾತ್ಮೀದಾರರ ಪ್ರಕಾರ ಈಗ ಕಮಲ್ ಆರೋಗ್ಯ ಸುಧಾರಿಸಿದೆ. ಕಮಲ್ ಅವರಿಗೆ ವಿಶ್ರಾಂತಿ ಅಗತ್ಯವಿದ್ದು, ಚಿತ್ರೀಕರಣಕ್ಕೆ ಕೂಡಲೇ ಹಿಂತಿರುಗದಂತೆ ಚಿತ್ರ ತಂಡ ಮನವಿ ಮಾಡಿಕೊಂಡಿದೆ. ಆದರೆ, 'ಐಯಾಮ್ ಫೈನ್ ಶೂಟಿಂಗ್ ಮುಗಿಸೋಣ ಬನ್ನಿ' ಎಂದು ಕಮಲ್ ಆಸ್ಪತ್ರೆಯಿಂದ ಹೊರಡಲು ಮಂದಾದರಂತೆ.

ಶೂಟಿಂಗ್ ನಲ್ಲಿ ಏನಾಯ್ತು?: ಕನ್ನಡದಲ್ಲೂ ತೆರೆಕಂಡ ದೃಶ್ಯ ಚಿತ್ರದ ಒಂದು ಫೈಟಿಂಗ್ ಸೀನ್ ನೆನಪಿರಬಹುದು. ನಾಯಕ ರವಿಚಂದ್ರನ್ ಹಾಗೂ ಅವರ ಕುಟುಂಬವನ್ನು ವಿಚಾರಣೆ ನೆಪದಲ್ಲಿ ಕರೆಸಿಕೊಳ್ಳುವ ಪೊಲೀಸರು ನಾಯಕ ರವಿಗೆ ಹಿಗ್ಗಾ ಮುಗ್ಗಾ ಥಳಿಸುತ್ತಾರೆ. ಪೊಲೀಸ್ ಪಾತ್ರಧಾರಿ ಅಚ್ಯುತ್ ಕುಮಾರ್ ಅವರು ರವಿಚಂದ್ರನ್ ಗೆ ರಕ್ತಕಾರುವಂತೆ ಹೊಡೆಯುತ್ತಾರೆ.

Actor Kamal Haasan hospitalised Papanasam Shooting

ಇದೇ ಚಿತ್ರದ ತಮಿಳು ಆವೃತ್ತಿಯ ದೃಶ್ಯದ ಚಿತ್ರೀಕರಣ ನಡೆಯುತ್ತಿತ್ತು. ಪೊಲೀಸ್ ಪಾತ್ರಧಾರಿ ಕಲಾಭವನ್ ಮಣಿ ಅವರು ನಾಯಕ ಕಮಲ್ ಹಾಸನ್ ಅವರಿಗೆ ಹೊಡೆಯುತ್ತಾನೆ. ಕಮಲ್ ಮೂಗಿನಿಂದ ರಕ್ತ ಸೋರಬೇಕಿತ್ತು. ಇದಕ್ಕಾಗಿ ಒಂದು ವ್ಯವಸ್ಥೆ ಮಾಡಲಾಗಿತ್ತು. ಮೂಗಿನಲ್ಲಿ ಸಣ್ಣದಾದ ರಬ್ಬರ್ ತುಂಡನ್ನು ಇಡಲಾಗಿತ್ತು. ಅದರೆ, ಮಣಿ ಹೊಡೆದ ಏಟು ಯಾವ ಪರಿ ಇತ್ತೆಂದರೆ ಕಮಲ್ ಅವರ ಮೂಗಿನಲ್ಲಿದ್ದ ರಬ್ಬರ್ ತುಂಡು ಇನ್ನಷ್ಟು ಒಳಹೊಕ್ಕು ಅವರ ಉಸಿರಾಟಕ್ಕೆ ತೊಂದರೆ ಉಂಟು ಮಾಡಿದೆ.

ಕಮಲ್ ಅವರು ಉಸಿರಾಟದ ತೊಂದರೆ ಅನುಭವಿಸುತ್ತಿದ್ದರೂ ಆ ಬಗ್ಗೆ ಚಿತ್ರ ತಂಡಕ್ಕೆ ತಕ್ಷಣವೇ ಗೊತ್ತಾಗಲಿಲ್ಲ. ಕಮಲ್ ಅವರು ನಟನೆಯಲ್ಲಿ ತಲ್ಲೀನರಾಗಿದ್ದಾರೆ ಎಂದೇ ತಿಳಿದ ಮಣಿ ಕೂಡಾ ಇನ್ನಷ್ಟು ಜೋರಾಗಿ ಪೆಟ್ಟು ಕೊಟ್ಟಿದ್ದಾರೆ. ಆದರೆ, ಕೊನೆಗೆ ಕಮಲ್ ಅವರು ತೊಂದರೆ ಅನುಭವಿಸುವುದು ತಿಳಿದು ತಕ್ಷಣವೇ ಸಮೀಪದ ಅಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಅದೃಷ್ಟವಶಾತ್ ಕಮಲ್ ಅವರು ಅಪಾಯದಿಂದ ಪಾರಾಗಿದ್ದು, ಆತಂಕ ಪಡಬೇಕಾಗಿಲ್ಲ ಎಂದು ಅವರ ಮ್ಯಾನೇಜರ್ ನಿಖಿಲ್ ಮುರುಗನ್ ಹೇಳಿದ್ದಾರೆ.

ಸೆಪ್ಟೆಂಬರ್ ತಿಂಗಳಿನಲ್ಲಿ ಕೇರಳದಲ್ಲಿ ಇದೇ ಪಾಪನಾಶಂ ಚಿತ್ರೀಕರಣ ಮುಗಿಸಿಕೊಂಡು ತಮಿಳುನಾಡಿನಲ್ಲಿ ಶೂಟಿಂಗ್ ಮಾಡುವಾಗ ಕಮಲ್ ಅವರು ಅಸ್ವಸ್ಥರಾಗಿದ್ದರು. ವಿಷಾಹಾರ ಸೇವನೆಯಿಂದ ಅಪೊಲೊ ಆಸ್ಪತ್ರ್ರೆಗೆ ಸೇರಿಸಲಾಗಿತ್ತು ಮರುದಿನ ಗುಣಮುಖರಾಗಿ ಹೊರ ಬಂದಿದ್ದರು.

ಈಗ 59 ವರ್ಷ ವಯಸ್ಸಿನ ನಟ ಕಮಲ್ ಹಾಸನ್ ಅವರು ಮತ್ತೊಮ್ಮೆ ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಕಮಲ್ ಅವರ ಉತ್ತಮ ವಿಲನ್ ಚಿತ್ರ ತೆರೆಗೆ ಬರಲು ಸಿದ್ಧವಾಗಿದ್ದು, ಸದ್ಯ ಪಾಪನಾಶಂ ಚಿತ್ರದಲ್ಲಿ ತೊಡಗಿಕೊಂಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+