ತಮಿಳುನಾಡಿನಲ್ಲಿ ಚಿನ್ನಮ್ಮ ಶಶಿಕಲಾರನ್ನು ಭೇಟಿ ಮಾಡಿದ ನಟ ಅಜಿತ್

Posted By:
Subscribe to Oneindia Kannada

ಚೆನ್ನೈ, ಡಿಸೆಂಬರ್ 27: ತಮಿಳುನಾಡಿನಲ್ಲಿ ಆಡಳಿತ ಯಂತ್ರಕ್ಕೆ ಚುರುಕು ನೀಡುವ ಪ್ರಯತ್ನ ಮತ್ತೊಮ್ಮೆ ನಡೆಯುತ್ತಿದೆ. ತಾತ್ಕಾಲಿಕ ವ್ಯವಸ್ಥೆಯಂತೆ ಓ ಪನ್ನೀರ್ ಸೆಲ್ವಂ ಅವರು ಮತ್ತೊಮ್ಮೆ ಸಿಎಂ ಪಟ್ಟಕ್ಕೇರಿದ್ದಾರೆ. ಆದರೆ, ಶಾಶ್ವತ ಪರಿಹಾರ ಕಂಡುಕೊಳ್ಳಲು ಜಯಲಲಿತಾ ಅವರ ಇಚ್ಛೆಯಂತೆ ಅಜಿತ್ ರನ್ನು ಮುಂದಿನ ಸಿಎಂ ಎಂದು ಘೋಷಿಸಲು ಎಐಎಡಿಎಂಕೆ ಸಿದ್ಧತೆ ನಡೆಸುತ್ತಿದೆಯೇ? ಮುಂದೆ ಓದಿ...

ಮುಂದಿನ ವಿಧಾನಸಭೆ ಚುನಾವಣೆಗೆ ಅಜಿತ್ ಅವರನ್ನು ಸಿಎಂ ಅಭ್ಯರ್ಥಿಯಾಗಿ ಘೋಷಿಸುವಂತೆ ಪಕ್ಷದಲ್ಲಿ ಒತ್ತಡ ಹೆಚ್ಚಾಗಿದ್ದು, ಅದರಂತೆ, ನಟ ಅಜಿತ್ ಅವರನ್ನು ಚಿನ್ನಮ್ಮ ಶಶಿಕಲಾ ನಟರಾಜನ್ ಅವರು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.[ಅಜಿತ್ -ತಮಿಳುನಾಡಿನ ಮುಂದಿನ ಸಿಎಂ: ಜಯಲಲಿತಾ ಆಸೆ]

ರಾಜಕೀಯದಿಂದ ಸದಾಕಾಲ ದೂರ ಉಳಿದಿರುವ ಅಜಿತ್ ಅವರು ಈ ಆಫರ್ ಒಪ್ಪಿಕೊಳ್ಳುವುದು ಕಷ್ಟ ಎಂದು ನಮ್ಮ ಚೆನ್ನೈ ಬಾತ್ಮೀದಾರರಿಂದ ತಿಳಿದು ಬಂದಿದೆ. ಆದರೆ, ಎಐಎಡಿಎಂಕೆ ಪರ ಪ್ರಚಾರಕ್ಕೆ ಇಳಿದರೆ ಅಚ್ಚರಿ ಪಡಬೇಕಾಗಿಲ್ಲ, ಡಿಎಂಕೆಯಂತೂ ಅಜಿತ್ ವಿರುದ್ಧ ತಿರುಗಿ ಬಿದ್ದ ಇತಿಹಾಸವೇ ಇದೆ..

ರಾಜಕೀಯವಾಗಿ ದೂರ ಉಳಿದು ಯಾವುದೇ ಪಕ್ಷದ ಜತೆ ಗುರುತಿಸಿಕೊಳ್ಳದ ಅಜಿತ್ ಅವರ ಮೇಲೆ ಡಿಎಂಕೆ ಪಕ್ಷ ಹಲವಾರು ಬಾರಿ ಕಿಡಿಕಾರಿತ್ತು. ಇದೇ ವಿಷಯವಾಗಿ ಜಯಲಲಿತಾ ಅವರು ಅಜಿತ್ ಜತೆ ಮಾತುಕತೆ ನಡೆಸಿ ಅವರ ಬೆನ್ನ ಹಿಂದೆ ನಿಂತಿದ್ದರು.

ಅಜಿತ್ ಫ್ಯಾನ್ಸ್ ಕ್ಲಬ್ ಏನು ಹೇಳುತ್ತಿದೆ

ಅಜಿತ್ ಫ್ಯಾನ್ಸ್ ಕ್ಲಬ್ ಏನು ಹೇಳುತ್ತಿದೆ

ಮುಂದಿನ ವಿಧಾನಸಭೆ ಚುನಾವಣೆಗೆ ಅಜಿತ್ ಅವರನ್ನು ಸಿಎಂ ಅಭ್ಯರ್ಥಿಯಾಗಿ ಘೋಷಿಸುವಂತೆ ಪಕ್ಷದಲ್ಲಿ ಒತ್ತಡ ಹೆಚ್ಚಾಗಿದ್ದು, ಅದರಂತೆ, ನಟ ಅಜಿತ್ ಅವರನ್ನು ಚಿನ್ನಮ್ಮ ಶಶಿಕಲಾ ನಟರಾಜನ್ ಅವರು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.ಆದರೆ, ಈ ಭೇಟಿ ಸುಳ್ಳು ಎಂದು ಅಜಿತ್ ಫ್ಯಾನ್ಸ್ ಕ್ಲಬ್ ಹೇಳಿದೆ. ಎಐಎಡಿಎಂಕೆ ಮಾತ್ರ ಭೇಟಿ ನಿಜ ಎಂದಿದೆ.

ಅಜಿತ್ ಆಯ್ಕೆ ಮಾಡುವುದು ಹೇಗೆ?

ಅಜಿತ್ ಆಯ್ಕೆ ಮಾಡುವುದು ಹೇಗೆ?

ಅಜಿತ್ ಅವರನ್ನು ವಿಧಾನಪರಿಷತ್ ಸದಸ್ಯರನ್ನಾಗಿ ನೇಮಕ ಮಾಡಿ ನಂತರ ಎಐಎಡಿಎಂಕೆ ಶಾಸಕಾಂಗ ಪಕ್ಷದ ನಾಯಕರಾಗಿ ಒಮ್ಮತದಿಂದ ಆಯ್ಕೆ ಮಾಡುವ ಸಾಧ್ಯತೆಯಿದೆ. ಈ ಮೂಲಕ ಜಯಾ ಅವರ ಉತ್ತರಾಧಿಕಾರಿಯಾಗಿ ನೇಮಿಸಲು ಸೂಚನೆಗಳು ಸಿಕ್ಕಿವೆಯಂತೆ. ಆದರೆ, ಮುಂದಿನ ಚುನಾವಣೆ ತನಕ ಈ ವಿಷಯ ತಣ್ಣಗಾಗಿಸಿ ಕೊನೆ ಕ್ಷಣದಲ್ಲಿ ಸಿಎಂ ಅಭ್ಯರ್ಥಿ ಹೆಸರನ್ನು ಘೋಷಿಸುವ ಸಾಧ್ಯತೆಯೂ ಇದೆ. ಆದರೆ, ಅಜಿತ್ ಎಲ್ಲಕೂ ಒಪ್ಪಬೇಕಷ್ಟೆ.

ಇಷ್ಟಕ್ಕೂ ಅಜಿತ್ ಕುಮಾರ್ ಆಯ್ಕೆ ಏಕೆ?

ಇಷ್ಟಕ್ಕೂ ಅಜಿತ್ ಕುಮಾರ್ ಆಯ್ಕೆ ಏಕೆ?

* ಫೋರ್ಬ್ಸ್ ಸೆಲೆಬ್ರಿಟಿಗಳ ಪಟ್ಟಿಯಲ್ಲಿ ಕಾಣಿಸಿಕೊಂಡಿರುವ ಅಜಿತ್ ಅವರು ಜನಪ್ರಿಯ ನಟ ಮಾತ್ರವಲ್ಲದೆ, ದಾನಿ, ಎಫ್ 3 ಕಾರು ಚಾಲಕರಾಗಿ ಆಗಿ ಜನಪ್ರಿಯತೆ ಗಳಿಸಿದ್ದಾರೆ.
* ಅಜಿತ್ ಅವರ ತಾಯಿ ಮೋಹಿನಿ ಕೋಲ್ಕತ್ತಾ ಮೂಲದ ಸಿಂಧಿ ಪರಿವಾರದವರು, ತಾಯಿ ಹೆಸರಿನಲ್ಲಿ ಮೋಹಿನಿ- ಮಣಿ ಫೌಂಡೇಶನ್ ಸ್ಥಾಪಿಸಿ ದಾನ ಧರ್ಮ ಮಾಡುತ್ತಿದ್ದಾರೆ.

ಅಜಿತ್ ಭೇಟಿ ಸುದ್ದಿ ಬಗ್ಗೆ

ಅಜಿತ್ ಭೇಟಿ ಸುದ್ದಿ ಬಗ್ಗೆ ಅಧಿಕೃತ ಮಾಹಿತಿ ಇಲ್ಲ ಎಂದು ಅಜಿತ್ ಫ್ಯಾನ್ ಕ್ಲಬ್

rn

ಭೇಟಿ ಮಾಡಿದ್ದು ನಿಜ

ಶಶಿಕಲಾರನ್ನು ಭೇಟಿ ಮಾಡಿದ ನಟ ಅಜಿತ್ ರನ್ನು ಭೇಟಿ ಮಾಡಿದ್ದು ನಿಜ ಆದರೆ, ರಾಜಕೀಯ ಭೇಟಿ ಅಲ್ಲ ಎಂಬ ಸುದ್ದಿಯಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Rumour has it that actor Ajith Kumar met late J Jayalalithaa's confidante VK Sasikala Natarajan at Poes Garden in Chennai.
Please Wait while comments are loading...