ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಮಾನದ ಟಾಯ್ಲೆಟ್ ನಲ್ಲಿ ಸಿಕ್ತು 32 ಕೆಜಿ ಚಿನ್ನ

|
Google Oneindia Kannada News

ಚೆನ್ನೈ, ಅ.7 : ಏರ್ ಇಂಡಿಯಾ ವಿಮಾನದ ಟಾಯ್ಲೆಟ್ ನಲ್ಲಿಟ್ಟಿದ್ದ 32 ಕೆಜಿ ಚಿನ್ನದ ಬಿಸ್ಕೆಟ್ ಗಳನ್ನು ಚೆನ್ನೈ ವಿಮಾನ ನಿಲ್ದಾಣದಲ್ಲಿ ವಶಪಡಿಸಿಕೊಳ್ಳಲಾಗಿದೆ. ಘಟನೆಗೆ ಸಂಬಂಧಿಸಿದಂತೆ ನಾಲ್ವರನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ.

ಸೋಮವಾರ ಬೆಳಗ್ಗೆ 5.30ಕ್ಕೆ ದುಬೈ ನಿಂದ ಬಂದಿಳಿದ ವಿಮಾನದಲ್ಲಿ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸುಮಾರು 15 ಕೋಟಿ ಬೆಲೆಬಾಳುವ ಚಿನ್ನವನ್ನು ಸಾಗಣೆ ಮಾಡಲಾಗುತ್ತಿತ್ತು ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ಹೇಳಿದ್ದಾರೆ.

gold

ಕಂದಾಯ ಇಲಾಖೆ ಅಧಿಕಾರಿಗಳು ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ 32 ಕೆಜಿ ಚಿನ್ನದ ಬಿಸ್ಕೆಟ್ ಗಳನ್ನು ವಶಪಡಿಸಿಕೊಂಡಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಕೇರಳ ಮೂಲದ ನಾಲ್ವರನ್ನು ಬಂಧಿಸಲಾಗಿದೆ ಎಂದು ಹೇಳಿದ್ದಾರೆ.

ಅಬ್ದುಲ್ ಗಫಾರ್, ಮಹಮದ್ ಹುಸೇನ್ ಬಂಧಿತ ಆರೋಪಿಗಳು, ಇವರು ಚಿನ್ನದ ಸಮೇತ ಏರ್ ಇಂಡಿಯಾ ವಿಮಾನದಲ್ಲಿ ದುಬೈ ನಿಂದ ಸೋಮವಾರ ಬೆಳಗ್ಗೆ ಚೆನ್ನೈ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದರು.

ಮಹಮದ್ ಯೂಸೂಫ್ ಮತ್ತು ಮಹಮದ್ ಯಾಸಿನ್ ಅಬ್ದುಲ್ ಎಂಬ ಇನ್ನಿಬ್ಬರನ್ನು ಪೊಲೀಸರು ಬಂಧಿಸಿದ್ದು, ಇವರು ವಿಮಾನ ನಿಲ್ದಾಣದ ಹೊರಗೆ ವಿಮಾನದಲ್ಲಿ ಬಂದವರಿಗಾಗಿ ಕಾಯುತ್ತಿದ್ದರು ಎಂದು ಪೊಲೀಸರು ಹೇಳಿದ್ದಾರೆ.

ಅಬ್ದುಲ್ ಗಫಾರ್ ಮತ್ತು ಮಹಮದ್ ಹುಸೇನ್ ವಿಮಾನದ ಟಾಯ್ಲೆಟ್ ನಲ್ಲಿ 32 ಕೆಜಿ ಚಿನ್ನವನ್ನು ಬಚ್ಚಿಟ್ಟಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬಂಧಿತರ ವಿಚಾರಣೆ ಮುಂದುವರೆದಿದ್ದು, ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ. (ಫ್ಯಾನಿನೊಳಗೆ ಸಿಕ್ತು 45 ಲಕ್ಷ ಮೌಲ್ಯದ ಚಿನ್ನ)

English summary
Thirty-two kg of gold biscuits, worth Rs 15 crore in the international market, were recovered on Monday, October 7 from the lavatory of an Air India flight and four persons arrested in this connection at Chennai airport.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X