ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೋದಿ-ಪನ್ನೀರ್ ಸೆಲ್ವಂ ಭೇಟಿ; ಜಲ್ಲಿಕಟ್ಟು ನಿಷೇಧ ವಾಪಸ್ಗೆ ಆಗ್ರಹ

By Sachhidananda Acharya
|
Google Oneindia Kannada News

ಚೆನ್ನೈ, ಜನವರಿ 19: ಜಲ್ಲಿಕಟ್ಟಿಗೆ ಒತ್ತಾಯಿಸಿ ಮರೀನಾ ಬೀಚಿನಲ್ಲಿ ನಡೆಯುತ್ತಿರುವ ಪ್ರತಿಭಟನೆ ಮೂರನೇ ದಿನಕ್ಕೆ ಕಾಲಿಟ್ಟಿದೆ. ಮಹತ್ವದ ಬೆಳವಣಿಗೆಯಲ್ಲಿ ಇಂದು ತಮಿಳುನಾಡು ಮುಖ್ಯಮಂತ್ರಿ ಒ. ಪನ್ನೀರ್ ಸೆಲ್ವಂ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.

ಪ್ರತಿಭಟನೆ ಆರಂಭವಾಗಿ ಮೂರು ದಿನಗಳಾದರೂ ವಿದ್ಯಾರ್ಥಿಗಳು ಮತ್ತು ಟೆಕ್ಕಿಗಳು ಚೆನ್ನೈನ ಮರೀನಾ ಬೀಚಿನಿಂದ ಕದಲುತ್ತಿಲ್ಲ. ಇಲ್ಲಿ ಜಲ್ಲಿಕಟ್ಟು ನಡೆಯಬೇಕು ಎಂದು ಒತ್ತಾಯಿಸಿ ಸಾವಿರಾರು ಜನ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದು, ಜಲ್ಲಿಕಟ್ಟು ನಿಷೇಧಿಸಬಾರದು ಎಂದು ಒತ್ತಾಯಿಸಿದ್ದಾರೆ.[ಜಲ್ಲಿಕಟ್ಟು ಕ್ರೀಡೆಗೆ ಪಟ್ಟು ಬಿಡದ ವಿದ್ಯಾರ್ಥಿಗಳು, ಗುರುವಾರ ಕಾಲೇಜು ರಜಾ]

3 Days And Counting. Thousands At Chennai's Marina Beach Against Jallikattu Ban

ಪ್ರತಿಭಟನೆಗೆ ಸಿನಿಮಾ ತಾರೆಯರು ಕ್ರಿಕೆಟ್ ಆಟಗಾರರೂ ಬೆಂಬಲ ಸೂಚಿಸಿದ್ದಾರೆ. ಕ್ರಿಕೆಟಿಗ ರವಿಚಂದ್ರನ್ ಅಶ್ವಿನ್, ಸಿನಿಮಾ ತಾರೆಯರಾದ ನಯನತಾರಾ, ವಿಜಯ್ ಮೊದಲಾದವರು ಪ್ರತಿಭಟನೆಗೆ ಬಂಬಲ ಸೂಚಿಸಿದ್ದಾರೆ.[ಏರುತ್ತಿದೆ ಜಲ್ಲುಕಟ್ಟು ಬಿಕ್ಕಟ್ಟು! ಎಲ್ಲೆಲ್ಲೂ ಪ್ರತಿಭಟನೆಯ ಬಿಸಿ]

ಪ್ರತಿಭಟನೆಯನ್ನು ರಾಜ್ಯವ್ಯಾಪಿ ಕೊಂಡೊಯ್ಯಲು ವಿಶೇಷ ಫೇಸ್ಬುಕ್ ಪೇಜುಗಳು ರಚನೆಯಾಗಿದ್ದು, ಕ್ಷಣಕ್ಷಣದ ಬೆಳವಣಿಗೆಗಳನ್ನು ಅಪ್ಡೇಟ್ ಮಾಡಲಾಗುತ್ತಿದೆ. ಮುಖ್ಯವಾಗಿ ಪ್ರಾಣಿದಯಾ ಸಂಘಟನೆ ಪೇಟಾ ವಿರುದ್ಧ ತಮಿಳುನಾಡಿಗರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.[ಜಲ್ಲಿಕಟ್ಟು: ಪ್ರತಿಭಟನೆ ತಡೆಗೆ ಸರಕಾರ ಮಧ್ಯಪ್ರವೇಶ]

ಆದರೆ ಇದಕ್ಕೆ ಪೇಟಾ ತಿರುಗೇಟು ನೀಡಿದ್ದು ಜಲ್ಲಿಕಟ್ಟು ನಡೆಯುವ ಸಂದರ್ಭ ಎತ್ತಿಗೆ ಕಿಚ್ಚೆಬ್ಬಿಸಲು ಸಾರಾಯಿ ಕುಡಿಸುತ್ತಾರೆ ಮತ್ತು ಮೆಣಸಿನ ಪುಡಿಯನ್ನು ಮುಖದ ಮೇಲೆ ಎರಚುತ್ತಾರೆ ಎಂದು ಹೇಳಿ, ವೀಡಿಯೋ ಒಂದನ್ನು ಬಿಡುಗಡೆ ಮಾಡಿದೆ.[ಜಲ್ಲಿಕಟ್ಟು: ಮಧ್ಯಪ್ರವೇಶಕ್ಕೆ ಮದ್ರಾಸ್ ಹೈಕೋರ್ಟ್ ನಕಾರ]

3 Days And Counting. Thousands At Chennai's Marina Beach Against Jallikattu Ban

ದೆಹಲಿ ತಲುಪಿದ ಜಲ್ಲಿಕಟ್ಟು ವಿವಾದ
ರಾಜ್ಯದಲ್ಲಿ ಪ್ರತಿಭಟನೆಗಳು ಜೋರಾಗಿರುವಂತೆ ಕೇಂದ್ರ ಸರಕಾರ ಮಧ್ಯ ಪ್ರವೇಶಿಸಬೇಕು ಎಂಬ ಕೂಗು ಬಲವಾಗಿ ಕೇಳಿ ಬರುತ್ತಿದೆ. ಇಂದು ತಮಿಳುನಾಡು ಮುಖ್ಯಮಂತ್ರಿ ಒ. ಪನ್ನೀರ್ ಸೆಲ್ವಂ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಈ ವೇಳೆ ಜಲ್ಲಿಕಟ್ಟು ನಿಷೇಧ ವಾಪಸ್ ಪಡೆಯುವಂತೆ ಪ್ರಧಾನಿಯವರನ್ನು ಆಗ್ರಹಿಸಿದ್ದಾರೆ.

ಪ್ರತಿಭಟನಾಕಾರರು ತಮ್ಮ ಪ್ರತಿಭಟನೆ ನಿಲ್ಲಿಸಬೇಕು ಎಂದು ಮುಖ್ಯಮಂತ್ರಿ ಪನ್ನೀರ್ ಸೆಲ್ವಂ ಜನರಲ್ಲಿ ಕೇಳಿಕೊಂಡಿದ್ದಾರೆ. ಆದರೆ ಜನರು ಮಾತ್ರ ತಮ್ಮ ಉಗ್ರ ಪ್ರತಿಭಟನೆ ಮುಂದುವರಿಸಿದ್ದಾರೆ.

ಮಧ್ಯಪ್ರವೇಶಕ್ಕೆ ಸುಪ್ರಿಂ ಕೋರ್ಟ್ ನಕಾರ
ಮರೀನಾ ಬೀಚಿನಲ್ಲಿ ನಡೆಯುತ್ತಿರುವ ಪ್ರತಿಭಟನೆ ಹಿನ್ನಲೆಯಲ್ಲಿ ಸುಪ್ರಿಂ ಕೋರ್ಟ್ ಮಧ್ಯಪ್ರವೇಶಿಸಬೇಕು ಎಂದು ಕೋರಿ ವಕೀಲರೊಬ್ಬರು ಗುರುವಾರ ಪಿಟಿಷನ್ ಸಲ್ಲಿಸಿದ್ದರು. ಆದರೆ ಸುಪ್ರಿಂ ಕೋರ್ಟ್ ಮಧ್ಯಪ್ರವೇಶಕ್ಕೆ ನಿರಾಕರಿಸಿದ್ದು ಸಂಬಂಧಿತ ಕೋರ್ಟಿನಲ್ಲೇ ಇದನ್ನು ಪ್ರಶ್ನಿಸುವಂತೆ ಅರ್ಜಿದಾರರಿಗೆ ಸೂಚಿಸಿದೆ.

English summary
The Chief Minister of Tamilnadu O Paneerselvam is likely to meet Prime Minister Narendra Modi and President Pranab Mukherjee in New Delhi today to discuss the issue of jallikattu.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X