ದುರ್ಬಲ ಮುಖ್ಯಮಂತ್ರಿಯನ್ನು ವರಿಷ್ಠರು ಬಯಸುತ್ತಿದ್ದಾರೆ: ಸಿಧು

ಚಂಡೀಗಢ, ಫೆಬ್ರವರಿ 4: ವರಿಷ್ಠರು ದುರ್ಬಲ ಮುಖ್ಯಮಂತ್ರಿಯನ್ನು ಬಯಸುತ್ತಿದ್ದಾರೆ ಎಂದು ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ನವಜೋತ್ ಸಿಂಗ್ ಸಿಧು ಹೇಳಿದ್ದಾರೆ.

ಪಂಜಾಬ್ ಚುನಾವಣೆಗಾಗಿ ಕಾಂಗ್ರೆಸ್ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿ ಆಯ್ಕೆಯ ಊಹಾಪೋಹಗಳ ನಡುವೆ, ತಮ್ಮ ಪತಿ ಹಿರೋ, ಚುನಾವಣೆಗಾಗಿ ವರಿಷ್ಠರು ಯಾರನ್ನು ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಘೋಷಿಸಲಿದ್ದಾರೆ ಎಂಬುದು ವಿಷಯವಲ್ಲ ಎಂದು ನವಜೋತ್ ಸಿಧು ಪತ್ನಿ ನವಜೋತ್ ಕೌರ್ ಸಿಧು ಹೇಳಿದ್ದಾರೆ.

ಫೆಬ್ರವರಿ 6 ರಂದು ಕಾಂಗ್ರೆಸ್ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿ ಹೆಸರು ಹೊರಬೀಳಲಿದೆ ಎಂದು ಛನ್ನಿ ಗುರುವಾರ ಹೇಳಿದ್ದರು. ಪಂಜಾಬ್ ನಲ್ಲಿ ಫೆಬ್ರವರಿ 20 ರಂದು ವಿಧಾನಸಭಾ ಚುನಾವಣೆ ನಡೆಯಲಿದ್ದು, ಮಾರ್ಚ್ 10 ರಂದು ಮತ ಎಣಿಕೆ ನಡೆದು ಅಂದೇ ಫಲಿತಾಂಶ ಪ್ರಕಟವಾಗಲಿದೆ.

Sidhu

ಪಂಜಾಬ್ ನಲ್ಲಿ ನಾಳಿದ್ದು ಮುಖ್ಯಮಂತ್ರಿ ಅಭ್ಯರ್ಥಿಯನ್ನು ಕಾಂಗ್ರೆಸ್ ಪಕ್ಷ ಘೋಷಿಸಲು ಅಣಿಯಾಗಿರುವಂತೆಯೇ ಸಿಧು ಈ ರೀತಿಯ ಹೇಳಿಕೆ ನೀಡಿರುವುದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ.

ಮುಂದುವರೆದು, ಉತ್ತಮ ಮುಖ್ಯಮಂತ್ರಿಯನ್ನು ಆಯ್ಕೆ ಮಾಡುವ ಅವಕಾಶ ಪಂಜಾಬ್ ಮತದಾರರ ಕೈಯಲಿದೆ ಎಂದು ಸಿಧು ಹೇಳಿದ್ದಾರೆ.

ಒಂದು ವೇಳೆ ಹೊಸ ಪಂಜಾಬ್ ಮಾಡಬೇಕಾದರೆ, ಅದು ಮುಖ್ಯಮಂತ್ರಿ ಕೈಯಲಿ ಇರಲಿದೆ. ಈ ಬಾರಿ ಮುಖ್ಯಮಂತ್ರಿಯನ್ನು ನೀವು ಆಯ್ಕೆ ಮಾಡಿದರೆ, ಪಕ್ಷದ ವರಿಷ್ಠರು ತಮ್ಮ ತಾಳಕ್ಕೆ ತಕ್ಕಂತೆ ಕುಣಿಯುವ ದುರ್ಬಲ ಮುಖ್ಯಮಂತ್ರಿಯನ್ನು ಬಯಸುತ್ತಾರೆ. ನಿಮಗೆ ಅಂತಹ ಸಿಎಂ ಬೇಕಾ? ಎಂದು ಬೆಂಬಲಿಗರಿಂದ ಜಯ ಘೋಷಣೆಗಳ ಮಧ್ಯೆ ಹೇಳಿದರು.

ನವಜೋತ್ ಸಿಂಗ್ ಸಿಧು ಮುಖ್ಯಮಂತ್ರಿ ಹುದ್ದೆಗೇರಬೇಕೆಂದು ಬಹುಕಾಲದಿಂದ ಆಸೆ ಪಟ್ಟಿದ್ದಾರೆ. ಸೆಪ್ಟೆಂಬರ್‌ನಲ್ಲಿ ಕಾಂಗ್ರೆಸ್ ಪಕ್ಷವು ಅವರ ಪ್ರತಿಸ್ಪರ್ಧಿ ಅಮರಿಂದರ್ ಸಿಂಗ್ ಅವರನ್ನು ವಜಾಗೊಳಿಸಿದಾಗ ತಾವೇ ಸಿಎಂ ಆಗಬೇಕೆಂದು ಬಯಸಿದ್ದರು. ಆದರೆ, ಚರಣ್​ಜಿತ್ ಸಿಂಗ್ ಚನ್ನಿ ಅವರನ್ನು ಸಿಎಂ ಆಗಿ ಮಾಡಲಾಗಿತ್ತು.

ಇದೀಗ ಸಾರ್ವಜನಿಕ ಪೈಪೋಟಿಯಲ್ಲಿ ಸಿಎಂ ಚರಣ್​ಜಿತ್ ಸಿಂಗ್ ಚನ್ನಿ ಕಾಂಗ್ರೆಸ್ ಅಧ್ಯಕ್ಷ ನವಜೋತ್ ಸಿಂಗ್ ಸಿಧು ಅವರನ್ನು ಹಿಂದಿಕ್ಕಿದ್ದಾರೆ. ಫೆಬ್ರವರಿ 20ರಂದು ನಡೆಯಲಿರುವ ಪಂಜಾಬ್ ಚುನಾವಣೆಗೆ ಕಾಂಗ್ರೆಸ್ ಚರಣ್​ಜಿತ್ ಸಿಂಗ್ ಚನ್ನಿ ಎರಡು ಕ್ಷೇತ್ರಗಳಿಂದ ಸ್ಪರ್ಧಿಸಲಿದ್ದಾರೆ.

ಅವರು ಮುಖ್ಯಮಂತ್ರಿ ಹುದ್ದೆಗೆ ಪಕ್ಷದ ಆಯ್ಕೆಯಾಗಬಹುದು ಎನ್ನಲಾಗಿದೆ. ಇದೇ ಕಾರಣಕ್ಕೆ ಅವರು ಒಂದು ಕ್ಷೇತ್ರದಲ್ಲಿ ಸೋಲನ್ನು ಅನುಭವಿಸಿದರೆ ಇನ್ನೊಂದು ಕ್ಷೇತ್ರದಿಂದ ಗೆಲ್ಲಬಹುದು ಎಂಬ ಅಂದಾಜಿನಿಂದ ಈ ನಿರ್ಧಾರ ಮಾಡಲಾಗಿದೆ ಎನ್ನಲಾಗಿದೆ.

Recommended Video

      ಅಧಿಕ ಮೊತ್ತಕ್ಕೆ ಸೇಲ್ ಆಗೋ ವಿಕೆಟ್ ಕೀಪರ್ ಯಾರು? | Oneindia Kannada

      ಭಾನುವಾರ ಲೂಧಿಯಾನದಲ್ಲಿ ರಾಹುಲ್ ಗಾಂಧಿ ಪಂಜಾಬ್ ಮುಖ್ಯಮಂತ್ರಿ ಅಭ್ಯರ್ಥಿಯ ಹೆಸರನ್ನು ಘೋಷಿಸುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ. ಕಳೆದ ವಾರ, ಪಂಜಾಬ್‌ಗೆ ರಾಹುಲ್ ಗಾಂಧಿ ಭೇಟಿ ನೀಡಿದ ಸಂದರ್ಭದಲ್ಲಿ ಚರಣ್​ಜಿತ್ ಸಿಂಗ್ ಚನ್ನಿ ಮತ್ತು ನವಜೋತ್ ಸಿಂಗ್ ಸಿಧು ಇಬ್ಬರೂ ವೇದಿಕೆಯಲ್ಲಿ ಏಕತೆಯನ್ನು ಪ್ರದರ್ಶಿಸಿದ್ದರು.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+