ಪಂಜಾಬ್‌ ಚುನಾವಣೆ: ನೀತಿ ಸಂಹಿತೆ ಉಲ್ಲಂಘಿಸಿದ ಎಎಪಿಗೆ ನೋಟಿಸ್‌

ಚಂಡೀಗಢ, ಜನವರಿ 13: ಮುಂದಿನ ತಿಂಗಳು ಪಂಜಾಬ್‌ನಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಈ ನಿಟ್ಟಿನಲ್ಲಿ ಎಲ್ಲಾ ಪಕ್ಷಗಳು ಚುನಾವಣಾ ಪ್ರಚಾರ ಕಾರ್ಯದಲ್ಲಿ ತೊಡಗಿದೆ. ಈ ಮಧ್ಯೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ನೇತೃತ್ವದಲ್ಲಿ ಮನೆ-ಮನೆ ಪ್ರಚಾರದ ಸಂದರ್ಭದಲ್ಲಿ ನೀತಿ ಸಂಹಿತೆ ಉಲ್ಲಂಘನೆ ಮಾಡಲಾಗಿದೆ ಎಂಬ ಆರೋಪದಲ್ಲಿ ಎಎಪಿಗೆ ನೋಟಿಸ್‌ ನೀಡಲಾಗಿದೆ.

ಆಮ್ ಆದ್ಮಿ ಪಕ್ಷಕ್ಕೆ (ಎಎಪಿ)ವು ಅರವಿಂದ್ ಕೇಜ್ರಿವಾಲ್ ನೇತೃತ್ವದಲ್ಲಿ ಮನೆ-ಮನೆ ಪ್ರಚಾರದ ಸಂದರ್ಭದಲ್ಲಿ ನೀತಿ ಸಂಹಿತೆ ಉಲ್ಲಂಘನೆ ಮಾಡಿದೆ ಎಂದು ಖರಾರ್ ಚುನಾವಣಾಧಿಕಾರಿ (ಆರ್‌ಒ) ಬುಧವಾರ ಎಎಪಿಗೆ ನೋಟಿಸ್ ಜಾರಿ ಮಾಡಿದ್ದಾರೆ. ಹಾಗೆಯೇ ಚುನಾವಣಾಧಿಕಾರಿ ಎಎಪಿಯಿಂದ 24 ಗಂಟೆಗಳ ಒಳಗೆ ಉತ್ತರ ಕೇಳಿದ್ದಾರೆ.

ಪಂಜಾಬ್‌ ವಿಧಾನಸಭೆ ಚುನಾವಣೆ 2022ಕ್ಕೆ ಮುಂಚಿತವಾಗಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮೊಹಾಲಿ ಜಿಲ್ಲೆಯ ಖರಾರ್ ವಿಧಾನಸಭೆಯಲ್ಲಿ ಮನೆ-ಮನೆಗೆ ಚುನಾವಣಾ ಪ್ರಚಾರವನ್ನು ಪ್ರಾರಂಭಿಸಿದರು. ಆದರೆ ಈ ಸಂದರ್ಭದಲ್ಲಿ ಚುನಾವಣಾ ನೀತಿ ಸಂಹಿತೆಯನ್ನು ಉಲ್ಲಂಘನೆ ಮಾಡಲಾಗಿದೆ ಎಂದು ಆರೋಪ ಮಾಡಲಾಗಿದೆ.

 ಲಿಖಿತ ಉತ್ತರ ನೀಡದಿದ್ದರೆ ಕ್ರಮ

ಲಿಖಿತ ಉತ್ತರ ನೀಡದಿದ್ದರೆ ಕ್ರಮ

24 ಗಂಟೆಗಳ ಒಳಗೆ ಲಿಖಿತವಾಗಿ ಉತ್ತರವನ್ನು ಸಲ್ಲಿಸಲು ಎಎಪಿ ವಿಫಲವಾದಲ್ಲಿ, ಭಾರತೀಯ ಚುನಾವಣಾ ಆಯೋಗದ (ಇಸಿಐ) ಸೂಚನೆಗಳ ಪ್ರಕಾರ ಕ್ರಮ ಕೈಗೊಳ್ಳಲಾಗುವುದು ಎಂದು ಚುನಾವಣಾಧಿಕಾರಿ ನೋಟಿಸ್‌ನಲ್ಲಿ ಸ್ಪಷ್ಟಪಡಿಸಿದ್ದಾರೆ. ಫೆಬ್ರವರಿ 14 ರಂದು ನಡೆಯಲಿರುವ ಪಂಜಾಬ್ ವಿಧಾನಸಭಾ ಚುನಾವಣೆಗೆ ಮೊಹಾಲಿ ಜಿಲ್ಲೆಯ ಖರಾರ್ ವಿಧಾನಸಭಾ ಕ್ಷೇತ್ರದಿಂದ ಗಾಯಕ ಅನ್ಮೋಲ್ ಗಗನ್ ಮಾನ್‌ ಅವರನ್ನು ಎಎಪಿ ತನ್ನ ಅಭ್ಯರ್ಥಿಯಾಗಿ ನಿಲ್ಲಿಸಿದೆ. ಪಕ್ಷದ ಅಭ್ಯರ್ಥಿ ಮತ್ತು ಪಂಜಾಬ್ ಎಎಪಿ ಅಧ್ಯಕ್ಷ ಭಗವಂತ್ ಮಾನ್ ಅವರೊಂದಿಗೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್‌ ಮುಂಜಾನೆ ಖಾರಾರ್ ವಿಧಾನಸಭಾ ಕ್ಷೇತ್ರದಲ್ಲಿ ಮನೆ-ಮನೆಗೆ ತೆರಳಿ ಚುನಾವಣಾ ಪ್ರಚಾರವನ್ನು ಪ್ರಾರಂಭಿಸಿದರು.

 ನೋಟಿಸ್‌ನಲ್ಲಿ ಏನಿದೆ?

ನೋಟಿಸ್‌ನಲ್ಲಿ ಏನಿದೆ?

ಮನೆ-ಮನೆಗೆಗೆ ಭೇಟಿ ನೀಡಿ ಪ್ರಚಾರ ಸೇರಿದಂತೆ ರ್‍ಯಾಲಿಗಳು ಹಾಗೂ ಪ್ರದರ್ಶನಗಳನ್ನು ಸಂಪೂರ್ಣ ನಿಷೇಧ ಮಾಡಲಾಗಿದೆ. ಈ ಬಗ್ಗೆ ಭಾರತೀಯ ಚುನಾವಣಾ ಆಯೋಗ (ಇಸಿಐ) ವಿಧಿಸಿರುವ ವಿವಿಧ ನಿರ್ಬಂಧಗಳ ಕುರಿತು ಜನವರಿ 9 ರಂದು ಎಲ್ಲಾ ರಾಜಕೀಯ ಪಕ್ಷಗಳೊಂದಿಗೆ ಸಭೆ ನಡೆಸಲಾಗಿದೆ ಎಂದು ಚುನಾವಣಾಧಿಕಾರಿ ನೋಟಿಸ್‌ನಲ್ಲಿ ತಿಳಿಸಿದ್ದಾರೆ. ಈ ನೀತಿ ಸಂಹಿತೆ ಪ್ರಕಾರ ಐದಕ್ಕಿಂತ ಅಧಿಕ ಮಂದಿ ಮನೆ ಮನೆ ಪ್ರಚಾರವನ್ನು ನಡೆಸುವಂತಿಲ್ಲ ಎಂದಿ ನೋಟಿಸ್‌ನಲ್ಲಿ ಉಲ್ಲೇಖ ಮಾಡಲಾಗಿದೆ.

 ಕೇಜ್ರಿವಾಲ್‌ರ ಪಂಜಾಬ್‌ ಮಾದರಿ

ಕೇಜ್ರಿವಾಲ್‌ರ ಪಂಜಾಬ್‌ ಮಾದರಿ

ಈ ಮಧ್ಯೆ, ವಿಧಾನಸಭಾ ಚುನಾವಣೆಗೆ ಮುನ್ನ ತಮ್ಮ ಪಕ್ಷದ "ಪಂಜಾಬ್‌ ಮಾದರಿ" ಯನ್ನು ಅನಾವರಣಗೊಳಿಸಿದ ಕೇಜ್ರಿವಾಲ್ ಅವರು ಬುಧವಾರ ನ್ಯಾಯ, ಯುವಕರಿಗೆ ಉದ್ಯೋಗ, ಭ್ರಷ್ಟಾಚಾರ ಮುಕ್ತ ಆಡಳಿತದ ಭರವಸೆ ನೀಡಿದರು. ಸೌಹಾರ್ದವನ್ನು ಮುರಿಯಲು ಜನರು ತಮ್ಮ ಪಕ್ಷವನ್ನು ಅಧಿಕಾರಕ್ಕೆ ತರಲು ಬಯಸುತ್ತಾರೆ ಎಂದು ಪ್ರತಿಪಾದಿಸಿದರು. "ಪಂಜಾಬ್ ಮಾದರಿಯಲ್ಲಿ ಹತ್ತು ಅಂಕಗಳ ಅಜೆಂಡಾ ಇರಲಿದೆ. ಇದರಲ್ಲಿ ಜನರಿಗೆ 300 ಯುನಿಟ್‌ಗಳವರೆಗೆ ಉಚಿತ ವಿದ್ಯುತ್ ಒದಗಿಸುವುದು ಕೂಡಾ ಸೇರಿದೆ. ಮಾದಕ ದ್ರವ್ಯಗಳ ಹಾವಳಿಯನ್ನು ನಿಯಂತ್ರಿಸುವುದು ಕೂಡಾ ಇದರಲ್ಲಿ ಒಳಗೊಂಡಿದೆ," ಎಂದು ಅರವಿಂದ್ ಕೇಜ್ರಿವಾಲ್‌ ತಿಳಿಸಿದರು.

Recommended Video

    mekedatu padayatra ಕೊನೆಗೊಳಿಸಿದ್ದಕ್ಕೆ ಕಾರಣ ತಿಳಿಸಿದ Siddaramaiah | Oneindia Kannada
     ಕಾಂಗ್ರೆಸ್‌-ಬಾದಲ್‌ ಪಾಲುದಾರಿಕೆ ಆಡಳಿತ

    ಕಾಂಗ್ರೆಸ್‌-ಬಾದಲ್‌ ಪಾಲುದಾರಿಕೆ ಆಡಳಿತ

    "1966 ರಲ್ಲಿ ಪಂಜಾಬ್ ಪ್ರತ್ಯೇಕ ರಾಜ್ಯವಾಯಿತು. ಅಂದಿನಿಂದ ಇಂದಿನವರೆಗೆ 25 ವರ್ಷಗಳ ಕಾಲ ಕಾಂಗ್ರೆಸ್ ರಾಜ್ಯವನ್ನು ಆಳಿದರೆ, 19 ವರ್ಷಗಳ ಕಾಲ ಬಾದಲ್ ಕುಟುಂಬ ಆಳ್ವಿಕೆ ನಡೆಸಿತು. ಇಬ್ಬರೂ ಒಂದು ರೀತಿಯ ಪಾಲುದಾರಿಕೆಯಲ್ಲಿ ರಾಜ್ಯವನ್ನು ಆಳಿದರು. ಬಾದಲ್ ಪಕ್ಷ ಅಧಿಕಾರಕ್ಕೆ ಬಂದಿರಲಿ ಅಥವಾ ಕಾಂಗ್ರೆಸ್ ಅಧಿಕಾರಕ್ಕೆ ಬಂದಿರಲಿ, ಅವರು ತಮ್ಮ ಸರ್ಕಾರಗಳನ್ನು ಪಾಲುದಾರಿಕೆಯಲ್ಲಿ ನಡೆಸುತ್ತಿದ್ದರು. ಅವರ ಸರ್ಕಾರ ಅಧಿಕಾರಕ್ಕೆ ಬಂದಾಗ, ಎಂದಿಗೂ ಪರಸ್ಪರರ ವಿರುದ್ಧ ಕ್ರಮ ತೆಗೆದುಕೊಳ್ಳುತ್ತಿರಲಿಲ್ಲ," ಎಂದು ಅರವಿಂದ್ ಕೇಜ್ರಿವಾಲ್‌ ಮೊಹಾಲಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು. (ಒನ್‌ಇಂಡಿಯಾ ಸುದ್ದಿ)

    Notifications
    Settings
    Clear Notifications
    Notifications
    Use the toggle to switch on notifications
    • Block for 8 hours
    • Block for 12 hours
    • Block for 24 hours
    • Don't block
    Gender
    Select your Gender
    • Male
    • Female
    • Others
    Age
    Select your Age Range
    • Under 18
    • 18 to 25
    • 26 to 35
    • 36 to 45
    • 45 to 55
    • 55+