ಪಂಜಾಬ್‌ನಲ್ಲಿ ಶಾಲಾ-ಕಾಲೇಜು ಮತ್ತು ಎಲ್ಲಾ ಶಿಕ್ಷಣ ಸಂಸ್ಥೆಗಳು ಬಂದ್
ಚಂಡೀಗಢ, ಜನವರಿ 4: ದೇಶದಲ್ಲಿ ಕೊರೊನಾದೊಂದಿಗೆ ಓಮಿಕ್ರಾನ್ ಕೂಡ ವೇಗವಾಗಿ ಹರಡುತ್ತಿದ್ದು ಈ ಗಾಳಿ ಸದ್ಯ ಪಂಜಾಬ್‌ನತ್ತ ಬೀಸುತ್ತಿದೆ. ಪಂಜಾಬ್‌ನಲ್ಲಿ ಏಕಾಏಕಿ ಹೆಚ್ಚುತ್ತಿರುವ ಕೊರೊನಾವನ್ನು ಗಮನದಲ್ಲಿಟ್ಟುಕೊಂಡು ರಾಜ್ಯ ಸರ್ಕಾರ ರಾತ್ರಿ ಕರ್ಫ್ಯೂ ಜಾರಿಗೊಳಿಸಿದೆ. ಇಂದಿನಿಂದ ಜನವರಿ 15 ರವರೆಗೆ ರಾತ್ರಿ 10 ರಿಂದ ಬೆಳಗ್ಗೆ 5 ರವರೆಗೆ ರಾಜ್ಯದಲ್ಲಿ ಸಂಚಾರ ನಿಷೇಧಿಸಲಾಗಿದೆ. ಆದಾಗ್ಯೂ ಇದರಲ್ಲಿ ಕೆಲವು ವಿನಾಯಿತಿಗಳನ್ನು ಸಹ ನೀಡಲಾಗಿದೆ. ಇದರೊಂದಿಗೆ ಇಂದಿನಿಂದಲೇ ಶಾಲಾ-ಕಾಲೇಜುಗಳು ಮತ್ತು ಇತರ ಎಲ್ಲ ಶಿಕ್ಷಣ ಸಂಸ್ಥೆಗಳನ್ನು ಮುಚ್ಚಲು ನಿರ್ಧರಿಸಲಾಗಿದೆ. ಜೊತೆಗೆ ಬಾರ್‌ಗಳು, ಸಿನಿಮಾ ಹಾಲ್‌ಗಳು, ಮಾಲ್‌ಗಳು, ರೆಸ್ಟೋರೆಂಟ್‌ಗಳು ಮತ್ತು ಸ್ಪಾಗಳನ್ನು ಶೇಕಡಾ 50 ರಷ್ಟು ಸಾಮರ್ಥ್ಯದೊಂದಿಗೆ ಕಾರ್ಯನಿರ್ವಹಿಸುವಂತೆ ರಾಜ್ಯ ಸರ್ಕಾರ ನಿರ್ದೇಶಿಸಿದೆ.
ಶೇಕಡಾ 50 ರಷ್ಟು ಸಾಮರ್ಥ್ಯ ಹೊಂದಿನ ಸ್ಥಳಗಳಲ್ಲಿ ಕೆಲಸ ಮಾಡುವ ಉದ್ಯೋಗಿಗಳಿಗೆ ಸಂಪೂರ್ಣ ಲಸಿಕೆ ಹಾಕಿಸಿರುವುದು ಅಗತ್ಯ ಎಂದು ಹೇಳಲಾಗಿದೆ. ಇದರೊಂದಿಗೆ ಜಿಮ್ ಮುಚ್ಚುವಂತೆ ಸೂಚನೆ ನೀಡಲಾಗಿದೆ. ಲಸಿಕೆಯ ಎರಡೂ ಡೋಸ್ ತೆಗೆದುಕೊಂಡ ಉದ್ಯೋಗಿಗಳಿಗೆ ಮಾತ್ರ ಸರ್ಕಾರಿ ಮತ್ತು ಖಾಸಗಿ ಕಚೇರಿಗಳಿಗೆ ಹೋಗಲು ಅವಕಾಶವಿರುತ್ತದೆ. 10 ದಿನಗಳಲ್ಲಿ ಪಂಜಾಬ್‌ನಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 1394 ರಷ್ಟು ಹೆಚ್ಚಾಗಿದ್ದು, ಡಿಸೆಂಬರ್ 25ರಂದು ಕೇವಲ 347 ಪ್ರಕರಣಗಳು ದಾಖಲಾಗಿದ್ದವು. ಆದರೀಗ ಸೋಂಕಿತರ ಸಂಖ್ಯೆ ಗಣನೀಯ ಏರಿಕೆಗೊಂಡಿದೆ.
ರಾಜ್ಯದ ಪರಿಸ್ಥಿತಿಯನ್ನು ಅವಲೋಕಿಸಲು ಮುಖ್ಯಮಂತ್ರಿ ಚರಂಜಿತ್ ಸಿಂಗ್ ಚನ್ನಿ ಅವರ ಅಧ್ಯಕ್ಷತೆಯಲ್ಲಿ ನಡೆದ ಪರಿಶೀಲನಾ ಸಭೆಯ ನಂತರ ನಿರ್ಬಂಧಗಳನ್ನು ಘೋಷಿಸಲಾಯಿತು. ಶಾಲೆಗಳು, ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳು ಸೇರಿದಂತೆ ಎಲ್ಲಾ ಶಿಕ್ಷಣ ಸಂಸ್ಥೆಗಳು ಆಫ್‌ಲೈನ್ ತರಗತಿಗಳಿಗೆ ಅವಕಾಶ ನೀಡಿ ಮುಚ್ಚಲ್ಪಡುತ್ತವೆ ಎಂದು ಆದೇಶವು ಹೇಳುತ್ತದೆ. ಆದಾಗ್ಯೂ ವರ್ಚುವಲ್ ತರಗತಿಗಳು ಮುಂದುವರಿಯುತ್ತದೆ. ವೈದ್ಯಕೀಯ ಮತ್ತು ನರ್ಸಿಂಗ್ ಕಾಲೇಜುಗಳು ಎಂದಿನಂತೆ ಕಾರ್ಯನಿರ್ವಹಿಸಲಿವೆ. ರಾತ್ರಿ ಕರ್ಫ್ಯೂ ಪ್ರತಿದಿನ ರಾತ್ರಿ 10 ರಿಂದ ಬೆಳಿಗ್ಗೆ 5 ರವರೆಗೆ ಇರುತ್ತದೆ.

ಬಾರ್‌ಗಳು, ಮಲ್ಟಿಪ್ಲೆಕ್ಸ್‌ಗಳು, ಮಾಲ್‌ಗಳು, ಸ್ಪಾಗಳು, ಮ್ಯೂಸಿಯಂಗಳು, ಮೃಗಾಲಯಗಳು ಮತ್ತು ರೆಸ್ಟೋರೆಂಟ್‌ಗಳು ಶೇಕಡಾ 50 ರಷ್ಟು ಸಾಮರ್ಥ್ಯದಲ್ಲಿ ಕಾರ್ಯನಿರ್ವಹಿಸುತ್ತವೆ. ಇದು ಸಿಬ್ಬಂದಿಗೆ ಸಂಪೂರ್ಣವಾಗಿ ಲಸಿಕೆಯನ್ನು ನೀಡುವುದಕ್ಕೆ ಒಳಪಟ್ಟಿರುತ್ತದೆ. ಕ್ರೀಡೆ, ಈಜುಕೊಳಗಳು, ಕ್ರೀಡಾಂಗಣ ಮತ್ತು ಜಿಮ್‌ಗಳನ್ನು ಮುಚ್ಚಲಾಗಿದೆ. ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ತರಬೇತಿ ಪಡೆಯುವ ಕ್ರೀಡಾಪಟುಗಳಿಗೆ ಮಾತ್ರ ಅನುಮತಿಸಲಾಗುವುದು. ಆದರೆ ರ್‍ಯಾಲಿಗಳಿಗೆ ಯಾವುದೇ ನಿರ್ಬಂಧಗಳಿಲ್ಲ.

ಸೋಮವಾರದಂದು ಸೋಂಕಿತರ ಸಂಖ್ಯೆ 1741ಕ್ಕೆ ಏರಿಕೆಯಾಗಿದೆ. ಇದಲ್ಲದೇ ಸೋಂಕಿನ ಪ್ರಮಾಣವೂ ಹೆಚ್ಚಾಗಿದೆ. ಆರೋಗ್ಯ ಇಲಾಖೆಯ ವರದಿಯ ಪ್ರಕಾರ, ರಾಜ್ಯದಲ್ಲಿ ಇದುವರೆಗೆ 1,68,66,118 ಜನರ ಮಾದರಿಯನ್ನು ತೆಗೆದುಕೊಳ್ಳಲಾಗಿದ್ದು, ಇದರಲ್ಲಿ 6,5,922 ಜನರಿಗೆ ಸೋಂಕು ದೃಢಪಟ್ಟಿದೆ. ಈ ಸಮಯದಲ್ಲಿ ರಾಜ್ಯದಲ್ಲಿ ಕೊರೊನಾದಿಂದ 16,651 ಜನರು ಸಾವನ್ನಪ್ಪಿದ್ದಾರೆ.
#Omicron: Punjab Govt imposes night curfew in municipal areas with certain exceptions
— ANI (@ANI) January 4, 2022
Bars, cinemas halls, malls, restaurants, spas to operate at 50% capacity subject to staff being fully vaccinated
Gyms to remain closed
Only fully vaccinated staff to attend Govt, pvt offices pic.twitter.com/UXwg2wUB4H
ಸೋಮವಾರ ಪಂಜಾಬ್‌ನಲ್ಲಿ 419 ಸೋಂಕಿತರು ಪತ್ತೆಯಾಗಿದ್ದಾರೆ. ಜೊತೆಗೆ ಲುಧಿಯಾನದಲ್ಲಿ ಸೋಂಕಿತರೊಬ್ಬರು ಸಾವನ್ನಪ್ಪಿದ್ದಾರೆ. ಪಠಾಣ್‌ಕೋಟ್‌ನಲ್ಲಿ 58, ಲುಧಿಯಾನದಲ್ಲಿ 57, ಮೊಹಾಲಿಯಲ್ಲಿ 30, ಜಲಂಧರ್‌ನಲ್ಲಿ 24, ಅಮೃತಸರದಲ್ಲಿ 20, ಬಟಿಂಡಾದಲ್ಲಿ 16, ಹೊಶಿಯಾರ್‌ಪುರದಲ್ಲಿ 13, ಕಪುರ್ತಲಾದಲ್ಲಿ 12, ಗುರುದಾಸ್‌ಪುರದಲ್ಲಿ 10, ಫತೇಘರ್ ಸಾಹಿಬ್‌ನಲ್ಲಿ 9, ತಪುರ್ರಾನ್‌ನಲ್ಲಿ 4, ತಪುರ್ರಾನ್‌ನಲ್ಲಿ 3 , ಮುಕ್ತಸರದಲ್ಲಿ 2, ಮೂರು ಜಿಲ್ಲೆಗಳಲ್ಲಿ 5-5 ಮತ್ತು ಮೂರು ಜಿಲ್ಲೆಗಳಲ್ಲಿ 1-1 ಸೋಂಕಿತರು ಪತ್ತೆಯಾಗಿದ್ದಾರೆ. ಕೊರೋನಾ ವೈರಸ್‌ನ ಮೂರನೇ ಅಲೆಯನ್ನು ಗಮನದಲ್ಲಿಟ್ಟುಕೊಂಡು ಪಂಜಾಬ್ ಸರ್ಕಾರವು ಮಹತ್ವದ ಸಭೆಯನ್ನು ಕರೆದಿದೆ.












Click it and Unblock the Notifications