56 ಇಂಚಿನ ಬಾಕ್ಸರ್ ಗುದ್ದಿದ್ದು ಕೋಚ್ ಅಡ್ವಾಣಿ ಮುಖಕ್ಕೆ: ರಾಹುಲ್ ವ್ಯಂಗ್ಯ

ಭಿವಾನಿ, ಮೇ 6: ಹರಿಯಾಣದ ಭಿವಾನಿಯಲ್ಲಿ ಸೋಮವಾರ ಲೋಕಸಭಾ ಚುನಾವಣೆಯ ಪ್ರಚಾರ ನಡೆಸಿದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಪ್ರಧಾನಿ ನರೇಂದ್ರ ಮೋದಿ ಅವರನ್ನು ಕಟುವಾಗಿ ಟೀಕಿಸಿದರು.

ಲೋಕಸಭಾ ಚುನಾವಣೆ ವಿಶೇಷ ಪುಟ

ಮೋದಿ ಅವರನ್ನು 56 ಇಂಚಿನ ಅಳತೆಯ ಬಾಕ್ಸರ್ ಎಂದು ರಾಹುಲ್ ಗಾಂಧಿ ವ್ಯಂಗ್ಯವಾಡಿದರು. ಭಿವಾನಿ ಜಿಲ್ಲೆಯ ನಾಲ್ವರು ಬಾಕ್ಸರ್‌ಗಳು 2008ರ ಬೀಜಿಂಗ್ ಒಲಿಂಪಿಕ್ಸ್‌ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು. ಈ ಕಾರಣಕ್ಕಾಗಿ ಬಾಕ್ಸರ್‌ಗಳನ್ನು ಉಲ್ಲೇಖಿಸಿದ ರಾಹುಲ್, ಎನ್‌ಡಿಎ ಸರ್ಕಾರದ ವಿರುದ್ಧ ಹರಿಹಾಯ್ದರು.

ಮೋದಿ ಅವರನ್ನು ಬಾಕ್ಸರ್‌ಗೆ ಹೋಲಿಸಿದ ರಾಹುಲ್ ಗಾಂಧಿ, ತಮ್ಮ ಎದುರಾಳಿಗಳಾಗಿದ್ದ ಸಮಸ್ಯೆಗಳ ವಿರುದ್ಧ ಹೋರಾಟ ಮಾಡುವ ಬದಲು ಮೋದಿ, ತಮ್ಮದೇ ಪಕ್ಷದ ನಾಯಕರಾದ ಎಲ್‌ಕೆ ಅಡ್ವಾಣಿ, ನಿತಿನ್ ಗಡ್ಕರಿ, ಅರುಣ್ ಜೇಟ್ಲಿ ಮುಂತಾದವರಿಗೆ ಬಾರಿಸಿದರು ಎಂದು ಟೀಕಿಸಿದರು.

ಅಖಾಡದೊಳಗೆ ಹೋರಾಟ ಮಾಡದೆ ಓಡಿಹೋದ ಬಾಕ್ಸರ್ ಕಂಡು ಎಲ್ಲರೂ ಅಚ್ಚರಿಪಟ್ಟುಕೊಂಡರು. ಬಾಕ್ಸರ್ ಜನರ ನಡುವೆ ನುಗ್ಗಿ ಸಣ್ಣ ಅಂಗಡಿ ಮಾಲೀಕರು, ರೈತರಿಗೆ ಬಾರಿಸಿದರು ಎಂದು ನೋಟು ನಿಷೇಧ, ಜಿಎಸ್‌ಟಿಗಳನ್ನು ಉಲ್ಲೇಖಿಸಿ ರಾಹುಲ್ ವ್ಯಂಗ್ಯವಾಡಿರು.

ರಾಹುಲ್ ಗಾಂಧಿ ಕಥೆಯ ರೂಪದಲ್ಲಿ ಮೋದಿ ಅವರನ್ನು ಟೀಕಿಸಿದ್ದು ಹೀಗೆ...

Array

ರಿಂಗಿನೊಳಗೆ 56 ಇಂಚ್‌ ಎದೆ

'ಕಳೆದ ಚುನಾವಣೆಯಲ್ಲಿ ಹಿಂದೂಸ್ತಾನವು ಹೊಸ ಬಾಕ್ಸರ್‌ ನರೇಂದ್ರ ಮೋದಿ ಅವರನ್ನು ರಿಂಗ್‌ನೊಳಗೆ ಇಳಿಸಿತು. 56 ಇಂಚ್‌ ಎದೆಯು ರಿಂಗ್‌ನೊಳಗೆ ಬಂದಿತು. ಬಡತನ, ರೈತರ ಸಮಸ್ಯೆಗಳು, ಭ್ರಷ್ಟಾಚಾರದ ಎದುರು ಬಾಕ್ಸರ್ ಆಗಿ ನಿಂತಿದ್ದರು.

ಇಡೀ ದೇಶದ ಜನ ಪ್ರೇಕ್ಷಕರು

ಇಡೀ ದೇಶದ ಜನ ಪ್ರೇಕ್ಷಕರು

ಈ ದೇಶದ ಜನರು ಪ್ರೇಕ್ಷಕರಾಗಿದ್ದರು. ಅವರ ಜತೆಗೆ ನರೇಂದ್ರ ಮೋದಿಜಿ ಅವರ ಕೋಚ್ ಎಲ್‌ಕೆ ಅಡ್ವಾಣಿಜಿ ಹಾಗೂ ನಿತಿನ್ ಗಡ್ಕರಿಜಿ ಸೇರಿದಂತೆ ಇಡೀ ತಂಡ ಹಾಜರಿತ್ತು. ಆಗ ದೇಶವು ಸರಿ, ಈ ಬಾಕ್ಸರ್ ಬಡತನದ ವಿರುದ್ಧ ಹೋರಾಡುತ್ತಾರೆ, ರೈತರ ಸಮಸ್ಯೆಗಳನ್ನು ಬಗೆಹರಿಸುತ್ತಾರೆ, ಭ್ರಷ್ಟಾಚಾರವನ್ನು ಅಂತ್ಯಗೊಳಿಸುತ್ತಾರೆ ಮತ್ತು 15 ಲಕ್ಷ ರೂಪಾಯಿಯನ್ನು ಜನರ ಖಾತೆಗಳಿಗೆ ವರ್ಗಾಯಿಸಲು ಹೋರಾಡುತ್ತಾರೆ ಎಂದು ಹೇಳಿತ್ತು.

ಅಡ್ವಾಣಿಜಿ ಮುಖಕ್ಕೆ ಗುದ್ದಿದರು

ಅಡ್ವಾಣಿಜಿ ಮುಖಕ್ಕೆ ಗುದ್ದಿದರು

'ಆ ಬಾಕ್ಸರ್ ಭಾರಿ ಅಭಿಮಾನಿಗಳ ನಡುವೆ ತಮ್ಮ ಮೇಲೆ ಬೀಳುತ್ತಿದ್ದ ಪ್ರಜ್ವಲಿಸುವ ಬೆಳಕಿನೊಂದಿಗೆ ಬಂದರು. ಅವರು ಮಾಡಿದ ಮೊದಲ ಕೆಲಸವೆಂದರೆ, ತನ್ನ ಕೋಚ್‌ನತ್ತ ನೋಡಿದ್ದು ಮತ್ತು ಅಡ್ವಾಣಿಜಿ ಅವರ ಮುಖಕ್ಕೆ ಗುದ್ದಿದ್ದು. ಅಡ್ವಾಣಿಜಿ ಆಘಾತಗೊಂಡರು. ಅವರು ಅಲ್ಲಿಂದ ತಮ್ಮ ತಂಡದೊಂದಿಗೆ ಓಡಿದರು. ಒಬ್ಬರ ಬಳಿಕ ಒಬ್ಬರು, ಗಡ್ಕರಿಜಿಗೆ, ಅರುಣ್ ಜೈಟ್ಲಿಜಿ...

ಅಂಗಡಿ ಮಾಲೀಕರಿಗೆ ಗುದ್ದು

ಅಂಗಡಿ ಮಾಲೀಕರಿಗೆ ಗುದ್ದು

ಜನರು ನೋಡುತ್ತಲೇ ಇದ್ದರು. ಬಳಿಕ ಅವರು ರಿಂಗ್‌ನಿಂದ ಹೊರಕ್ಕೆ ಜಿಗಿದರು. ಸಮಸ್ಯೆಗಳೊಂದಿಗೆ ಹೋರಾಡಬೇಕಿದ್ದ ಅವರು ರಿಂಗ್‌ನಿಂದ ಹೊರಗೆ ಏಕೆ ಓಡಿಹೋಗುತ್ತಿದ್ದಾರೆ ಎಂದು ಜನರು ಕೇಳಿದರು. ಆದರೆ, ಅವರು ಜನರ ಗುಂಪಿನ ಮಧ್ಯೆ ನುಗ್ಗಿ ಸಣ್ಣ ಅಂಗಡಿ ಮಾಲೀಕರಿಗೆ ಎರಡು ಗುದ್ದು ನೀಡಿದರು. ಒಂದು ಅಪನಗದೀಕರಣ ಮತ್ತೊಂದು ಗಬ್ಬರ್ ಸಿಂಗ್ ಟ್ಯಾಕ್ಸ್ (ಜಿಎಸ್‌ಟಿ).

ರೈತರಿಗೂ ಬಾರಿಸಿದರು

ರೈತರಿಗೂ ಬಾರಿಸಿದರು

ಬಳಿಕ ಅವರು ರೈತರತ್ತ ಓಡಿದರು. 'ಬಾಕ್ಸರ್ ಸಾಬ್ ದಯವಿಟ್ಟು ರಿಂಗ್ ಒಳಗೆ ಹೋಗಿ. ನಮ್ಮ ಸಾಲವನ್ನು ಮನ್ನಾಮಾಡಿ' ಎಂದು ರೈತರು ಹೇಳಿದರು. ಆದರೆ, 'ಧರ್ ಧರ್' ಎಂದು ಅವರು ರೈತರಿಗೂ ಬಾರಿಸಿದರು. ಏನಾಗುತ್ತಿದೆ? ಬಾಕ್ಸರ್‌ಗೆ ತಾನು ರಿಂಗ್‌ನ ಒಳಗಿದ್ದು ಹೋರಾಟ ಮಾಡಬೇಕೆಂದು ತಿಳಿದಿಲ್ಲವೇ?

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+