ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತ್ರಿವರ್ಣ ಧ್ವಜ ಖರೀದಿಸುವಂತೆ ಒತ್ತಾಯಿಸಿದ ನ್ಯಾಯಬೆಲೆ ಅಂಗಡಿ ಪರವಾನಗಿ ರದ್ದು

|
Google Oneindia Kannada News

ಚಂಡೀಗಢ, ಆಗಸ್ಟ್‌ 11: ಹರಿಯಾಣಣದ ಕರ್ನಾಲ್ ಜಿಲ್ಲೆಯ ಅಧಿಕಾರಿಗಳು 'ಹರ್ ಘರ್ ತಿರಂಗ' ಅಭಿಯಾನದ ಅಡಿಯಲ್ಲಿ ಪಡಿತರದೊಂದಿಗೆ ರಾಷ್ಟ್ರಧ್ವಜವನ್ನು ಖರೀದಿಸಲು ಜನರನ್ನು ಒತ್ತಾಯಿಸಿದ ಆರೋಪದ ಮೇಲೆ ಪಡಿತರ ಡಿಪೋ ಮಾಲೀಕರ ಪರವಾನಗಿಯನ್ನು ಅಮಾನತುಗೊಳಿಸಿದ್ದಾರೆ.

ಕರ್ನಾಲ್ ಜಿಲ್ಲೆಯ ಹೆಮ್ಡಾ ಗ್ರಾಮದ ನ್ಯಾಯಬೆಲೆ ಅಂಗಡಿಯೊಂದರಲ್ಲಿ ಜನರಿಗೆ 20 ರೂಪಾಯಿ ಕೊಟ್ಟ ತ್ರಿವರ್ಣ ಧ್ವಜಗಳನ್ನು ಖರೀದಿಸಬೇಕು. ಇಲ್ಲದಿದ್ದರೆ ಅವರಿಗೆ ಪಡಿತರ ಸಿಗುವುದಿಲ್ಲ ಎಂದು ಹೇಳಲಾಯಿತು. ಈ ವಿಷಯ ಜಿಲ್ಲಾಡಳಿತದ ಗಮನಕ್ಕೆ ಬಂದ ಕೂಡಲೇ ಅವರ ಪರವಾನಗಿಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಲಾಗಿದೆ ಎಂದು ಕರ್ನಾಲ್‌ನ ಉಪ ಆಯುಕ್ತ ಅನೀಶ್ ಯಾದವ್ ತಿಳಿಸಿದ್ದಾರೆ.

ಧ್ವಜ ಖರೀದಿಸದಿದ್ದರೆ ಪಡಿತರವಿಲ್ಲ ವಿಡಿಯೋ: ವರುಣ್‌ ಗಾಂಧಿ ಆಕ್ರೋಶ?ಧ್ವಜ ಖರೀದಿಸದಿದ್ದರೆ ಪಡಿತರವಿಲ್ಲ ವಿಡಿಯೋ: ವರುಣ್‌ ಗಾಂಧಿ ಆಕ್ರೋಶ?

ತ್ರಿವರ್ಣ ಧ್ವಜವನ್ನು ಖರೀದಿಸಲು ಇಚ್ಛಿಸುವವರಿಗೆ ನ್ಯಾಯಬೆಲೆ ಅಂಗಡಿಗಳ ಮೂಲಕ 20 ರೂ.ಗೆ ನೀಡುತ್ತಿದ್ದೇವೆ. ಪಡಿತರ ಚೀಟಿದಾರರು ಬಲವಂತವಾಗಿ ಧ್ವಜಗಳನ್ನು ಖರೀದಿಸುವಂತೆ ಡಿಪೋದಾರರೊಬ್ಬರು ಮಾಡಿರುವುದು ನಮಗೆ ತಿಳಿದು ಬಂದಿದೆ. ಅದರ ಮಾಲೀಕರ ವಿರುದ್ಧ ಕಠಿಣ ಕ್ರಮವನ್ನು ಕೈಗೊಳ್ಳಲಾಗಿದ್ದು, ಅವರ ಪರವಾನಗಿಯನ್ನು ಅಮಾನತುಗೊಳಿಸಲಾಗಿದೆ ಅನೀಶ್ ಎಂದು ಯಾದವ್ ಹೇಳಿದರು.

ಬಳಿಕ ಮಾತನಾಡಿ, ಸಾರ್ವಜನಿಕರ ಅನುಕೂಲಕ್ಕಾಗಿ ಜಿಲ್ಲಾಡಳಿತ ಪಡಿತರ ಡಿಪೋದಾರರಿಗೆ ಧ್ವಜಗಳನ್ನು ನೀಡಿದ್ದು, ಇಚ್ಛೆಯುಳ್ಳವರು 20 ರೂ. ಕೊಟ್ಟು ಖರೀದಿಸಬಹುದು. ಆಜಾದಿ ಕಾ ಅಮೃತ್ ಮಹೋತ್ಸವದ ಅಡಿಯಲ್ಲಿ ನಾವು ಕರ್ನಾಲ್ ಜಿಲ್ಲೆಯಲ್ಲಿ ಹರ್ ಘರ್ ತಿರಂಗ ಕಾರ್ಯಕ್ರಮವನ್ನು ಆಚರಿಸುತ್ತಿದ್ದೇವೆ. ಇದರ ಅಡಿಯಲ್ಲಿ ಜಿಲ್ಲಾಡಳಿತವು 600ಕ್ಕೂ ಹೆಚ್ಚು ಪಡಿತರ ಡಿಪೋದಾರರಿಗೆ ಧ್ವಜಗಳನ್ನು ಒದಗಿಸಿದೆ. ಇಚ್ಛೆ ಇದ್ದಲ್ಲಿ ಯಾರು ಬೇಕಾದರೂ 20 ರೂ. ದರದಲ್ಲಿ ಧ್ವಜವನ್ನು ತೆಗೆದುಕೊಳ್ಳಬಹುದು ಎಂದರು.

 ತ್ರಿವರ್ಣ ಧ್ವಜವನ್ನು ಖರೀದಿಸಲು ಒತ್ತಾಯ

ತ್ರಿವರ್ಣ ಧ್ವಜವನ್ನು ಖರೀದಿಸಲು ಒತ್ತಾಯ

ಬುಧವಾರ ಭಾರತೀಯ ಜನತಾ ಪಕ್ಷದ (ಬಿಜೆಪಿ) ಸಂಸದ ವರುಣ್ ಗಾಂಧಿ ಕೂಡ ಈ ವಿಡಿಯೋವನ್ನು ಟ್ವೀಟ್ ಮಾಡಿ, ಸ್ವಾತಂತ್ರ್ಯದ 75ನೇ ವಾರ್ಷಿಕೋತ್ಸವದ ಆಚರಣೆಯು ಬಡವರ ಮೇಲೆ ಹೊರೆಯಾದರೆ ಅದು ದುರದೃಷ್ಟಕರ. ಪಡಿತರ ಚೀಟಿದಾರರು ತ್ರಿವರ್ಣ ಧ್ವಜವನ್ನು ಖರೀದಿಸಲು ಒತ್ತಾಯಿಸುತ್ತಿದ್ದಾರೆ. ಖರೀದಿಸದಿದ್ದರೆ ಅವರ ಪಡಿತರ ಪಾಲನ್ನು ಕಡಿತಗೊಳಿಸಲಾಗುತ್ತಿದೆ ಎಂದು ಆರೋಪಿಸಿದ್ದರು.

ಹರ್ ಘರ್ ತಿರಂಗಾ' ಅಭಿಯಾನದ ಹಿಂದೆ ಕರುನಾಡ ಕುವರ!ಹರ್ ಘರ್ ತಿರಂಗಾ' ಅಭಿಯಾನದ ಹಿಂದೆ ಕರುನಾಡ ಕುವರ!

 ಯಾರಾದರೂ ಧ್ವಜವನ್ನು ಖರೀದಿಸಬೇಕು

ಯಾರಾದರೂ ಧ್ವಜವನ್ನು ಖರೀದಿಸಬೇಕು

ಜನರಿಗೆ ಪಡಿತರವನ್ನು ಏಕೆ ನಿರಾಕರಿಸಲಾಗುತ್ತಿದೆ ಎಂದು ಕೇಳಿದಾಗ, ವಿತರಕರು ಪಡಿತರವನ್ನು ತೆಗೆದುಕೊಳ್ಳುವ ಯಾರಾದರೂ ಧ್ವಜವನ್ನು ಖರೀದಿಸಬೇಕು ಇಲ್ಲದಿದ್ದರೆ ಪಡಿತರ ಕೊಡುವುದಿಲ್ಲ ಎಂದು ಮೇಲಿನಿಂದ ಆದೇಶವಿದೆ ಎಂದು ವೀಡಿಯೊದಲ್ಲಿ ಹೇಳಲಾಗುತ್ತದೆ. ಮಹಿಳೆಯರು ಸಹ ಧ್ವಜಗಳನ್ನು ಖರೀದಿಸಲು ಬಲವಂತಪಡಿಸುತ್ತಿರುವ ಬಗ್ಗೆ ಅವರು ದೂರಿದರು.

 ಸ್ವಾತಂತ್ರ್ಯದ ವರ್ಷಾಚರಣೆ ಆಚರಿಸಲು ಕರೆ

ಸ್ವಾತಂತ್ರ್ಯದ ವರ್ಷಾಚರಣೆ ಆಚರಿಸಲು ಕರೆ

ಪ್ರತಿಯೊಬ್ಬ ಭಾರತೀಯನ ಹೃದಯದಲ್ಲಿ ನೆಲೆಸಿರುವ ತ್ರಿವರ್ಣ ಧ್ವಜಕ್ಕೆ ಬೆಲೆ ಕಟ್ಟಿ ಬಡವರ ದುಡ್ಡನ್ನು ಕಸಿದುಕೊಳ್ಳುವುದು ನಾಚಿಕೆಗೇಡಿನ ಸಂಗತಿ ಎಂದು ಅವರು ಹೇಳಿದರು. ಹರ್ ಘರ್ ತಿರಂಗ ಎಂಬುದು ಆಜಾದಿ ಕಾ ಅಮೃತ್ ಮಹೋತ್ಸವದ ಅಡಿಯಲ್ಲಿ ತಿರಂಗವನ್ನು ಮನೆಗೆ ತರಲು ಮತ್ತು ಭಾರತದ 75ನೇ ಸ್ವಾತಂತ್ರ್ಯದ ವರ್ಷವನ್ನು ಆಚರಿಸಲು ಅದನ್ನು ಹಾರಿಸಲು ಜನರನ್ನು ಪ್ರೋತ್ಸಾಹಿಸಲು ಒಂದು ಅಭಿಯಾನವಾಗಿದೆ. ಆಜಾದಿ ಕಾ ಅಮೃತ್ ಮಹೋತ್ಸವವು 75 ವರ್ಷಗಳ ಸ್ವಾತಂತ್ರ್ಯ ಮತ್ತು ಅದರ ಜನರು, ಸಂಸ್ಕೃತಿ ಮತ್ತು ಸಾಧನೆಗಳ ವೈಭವದ ಇತಿಹಾಸವನ್ನು ಆಚರಿಸಲು ಮತ್ತು ಸ್ಮರಿಸಲು ಭಾರತ ಸರ್ಕಾರದ ನಿರ್ಧಾರವಾಗಿದೆ.

 ಹರ್‌ ಘರ್‌ ತಿರಂಗಕ್ಕೆ ಚಾಲನೆ

ಹರ್‌ ಘರ್‌ ತಿರಂಗಕ್ಕೆ ಚಾಲನೆ

'ಹರ್ ಘರ್ ತಿರಂಗ' ಕಾರ್ಯಕ್ರಮವು ಎಲ್ಲೆಡೆ ಭಾರತೀಯರನ್ನು ತಮ್ಮ ಮನೆಯಲ್ಲಿ ರಾಷ್ಟ್ರಧ್ವಜವನ್ನು ಹಾರಿಸಲು ಪ್ರೇರೇಪಿಸುತ್ತದೆ. ಕಾರ್ಯಕ್ರಮದ ಉದ್ದೇಶವು ರಾಷ್ಟ್ರಧ್ವಜದೊಂದಿಗಿನ ಸಂಬಂಧವನ್ನು ಕೇವಲ ಔಪಚಾರಿಕ ಅಥವಾ ಸಾಂಸ್ಥಿಕವಾಗಿ ಇಟ್ಟುಕೊಳ್ಳುವುದಕ್ಕಿಂತ ಹೆಚ್ಚಾಗಿ ವೈಯಕ್ತಿಕವಾಗಿ ಮಾಡುವುದಾಗಿದೆ. ಇದಕ್ಕಾಗಿಯೇ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಎಲ್ಲ ಸಂಪುಟ ಸಚಿವರು ಹರ್‌ ಘರ್‌ ತಿರಂಗಕ್ಕೆ ಚಾಲನೆ ನೀಡಿ ಧ್ವಜ ಹಾರಿಸಲು ಕೋರಿದ್ದರು.

Recommended Video

ಇವರೇನಾ ಪ್ರವೀಣ್ ಗೆ ಹತ್ಯೆ ಮಾಡಿದ ಆ 3 ಕೊಲೆಗಡುಕರು | *Karnataka | OneIndia Kannada

English summary
Authorities in Haryana's Karnal district have suspended the license of a ration depot owner for allegedly forcing people to buy the national flag with rations under the 'Har Ghar Tiranga' campaign.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X