• search
  • Live TV
ಚಂಡೀಗಢ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮಹಿಳಾ ಪಿಜಿಯಲ್ಲಿ ಅಗ್ನಿ ಅವಘಡ, ಮೂವರು ಸಾವು

|

ಚಂಡೀಗಢ, ಫೆಬ್ರವರಿ 23: ಚಂಡೀಗಢದ ಸೆಕ್ಟರ್ 32ಡಿಯಲ್ಲಿರುವ ಪೇಯಿಂಗ್ ಗೆಸ್ಟ್ ಹಾಸ್ಟೆಲ್ ವೊಂದರಲ್ಲಿ ಅಗ್ನಿ ಆಕಸ್ಮಿಕ ಸಂಭವಿಸಿದ್ದು, ಈ ದುರ್ಘಟನೆಯಲ್ಲಿ ಮೂವರು ಮೃತಪಟ್ಟಿರುವ ಘಟನೆ ಶನಿವಾರ ರಾತ್ರಿ ನಡೆದಿದೆ.

ಪಿಜಿಯಲ್ಲಿ ಬೆಂಕಿ ತಗುಲಿದಾಗ 20ಕ್ಕೂ ಅಧಿಕ ಮಂದಿ ವಿದ್ಯಾರ್ಥಿನಿಯರಿದ್ದರು. ಈ ಘಟನೆಯಲ್ಲಿ ಮೃತಪಟ್ಟ ಯುವರಿಯರು 19 ರಿಂದ 22 ವರ್ಷ ವಯಸ್ಸಿನವರು ಎಂದು ತಿಳಿದು ಬಂದಿದೆ. ಮೃತರ ಪೈಕಿ ಇಬ್ಬರು ಪಂಜಾಬ್ ಹಾಗೂ ಒಬ್ಬರು ಹರ್ಯಾಣ ಮೂಲದವರು. ಬೆಂಕಿ ಅನಾಹುತದಲ್ಲಿ ಗಾಯಗೊಂಡವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕೊಡಿಸಲಾಗಿದೆ.

ಘಟನೆ ಬಗ್ಗೆ ಮಾಹಿತಿ ಸಿಗುತ್ತಿದ್ದಂತೆ ಅಗ್ನಿಶಾಮಕದಳ ಸಿಬ್ಬಂದಿ ಧಾವಿಸಿ ಬಂದಿದ್ದಾರೆ. ಪಿಜಿ ಹಾಸ್ಟೆಲ್ ನಡೆಸಲು ಅನುಮತಿ ಪಡೆದಿರಲಿಲ್ಲ ಎಂದು ತಿಳಿದು ಬಂದಿದೆ. ಬೆಂಕಿ ತಗುಲಿದಾಗ ಜೀವ ಉಳಿಸಿಕೊಳ್ಳಲು ಪಿಜಿ ಮೇಲ್ಛಾವಣಿಯಿಂದ ನೆಗೆಯಲು ಯತ್ನಿಸಿದ ವಿದ್ಯಾರ್ಥಿನಿಯೊಬ್ಬರು ತೀವ್ರವಾಗಿ ಗಾಯಗೊಂಡಿದ್ದಾರೆ.

English summary
Fire broke out at a paying guest hostel on Saturday in Chandigarh. The fire incident happened at Chandigarh's Sector 32D.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X