ಬಿಜೆಪಿ ಸೇರಿ ಕೆಲವೇ ದಿನಗಳಲ್ಲಿ ಮತ್ತೆ ಕಾಂಗ್ರೆಸ್ ಸೇರಿದ ಶಾಸಕ
ಚಂಡಿಗಢ್ ಜನವರಿ 3: ಬಿಜೆಪಿ ಸೇರಿದ ಕೆಲವೇ ದಿನಗಳಲ್ಲಿ ಪಂಜಾಬ್ ಹರಗೋಬಿಂದಪುರ ಶಾಸಕ ಬಲ್ವಿಂದರ್ ಲಡ್ಡಿ ಮತ್ತೆ ಕಾಂಗ್ರೆಸ್‌ಗೆ ಸೇರ್ಪಡೆಯಾಗಿದ್ದಾರೆ. ಭಾನುವಾರ ರಾತ್ರಿ ಪಂಜಾಬ್ ವ್ಯವಹಾರಗಳ ಉಸ್ತುವಾರಿ ಹರೀಶ್ ಚೌಧರಿ ಮತ್ತು ಉಪ ಮುಖ್ಯಮಂತ್ರಿ ಸುಖಜೀಂದರ್ ರಾಂಧವಾ ಅವರ ಸಮ್ಮುಖದಲ್ಲಿ ಲಡ್ಡಿ ಪಕ್ಷಕ್ಕೆ ಮರು ಸೇರ್ಪಡೆಗೊಂಡಿದ್ದಾರೆ.
ಪಂಜಾಬ್ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ರಾಜಕೀಯ ಪಕ್ಷಗಳಲ್ಲಿ ಹಲವಾರು ಬದಲಾವಣೆಗಳಾಗುತ್ತಿವೆ. ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ ಮತ್ತು ಬಿಜೆಪಿಗೆ ಉತ್ತರಪ್ರದೇಶ ಹಾಗೂ ಪಂಜಾಬ್ ಪ್ರತಿಷ್ಠೆಯ ಕಣಗಳಾಗಿವೆ. ಆಮ್‌ಆದ್ಮಿ ಪ್ರವೇಶದಿಂದ ಚುನಾವಣೆಗೂ ಮುನ್ನವೇ ಅಖಾಡ ರಂಗೇರಿತ್ತಿದೆ. ಹರ್ಗೋಬಿಂದಪುರ್ ಶಾಸಕ ಬಿಲ್ವಂದರ್ ಸಿಂಗ್‌ಲಡ್ಡಿ ಕಳೆದ ಆರು ದಿನಗಳ ಹಿಂದೆ ಬಿಜೆಪಿ ಸೇರ್ಪಡೆಯಾಘಿದ್ದರು. ಭಾನುವಾರ ರಾತ್ರಿ ಪಂಜಾಬ್‌ನ ಉಸ್ತುವಾರಿ ನಾಯಕ ಹರೀಶ್ ಚೌದರಿ ಮತ್ತು ಮುಖ್ಯಮಂತ್ರಿ ಚರಣ್‌ಜಿತ್‌ಸಿಂಗ್ ಚನ್ನಿ ಅವರನ್ನು ಭೇಟಿ ಮಾಡಿದ ಶಾಸಕ ಬೆಳಗ್ಗೆ ಮತ್ತೆ ಕಾಂಗ್ರೆಸ್‌ಗೆ ಮರಳಿದ್ದಾರೆ.
ಬಿಜೆಪಿ ಸೇರ್ಪಡೆಗೊಂಡ ಮಾಜಿ ಕ್ರಿಕೆಟರ್ ದಿನೇಶ್ ಮೊಂಗಿಯಾ
ಚಂಡಿಗಢ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಎಎಪಿ ಎದುರು ಹೀನಾಯ ಸೋಲಿನ ಹೊಡೆತ ಅನುಭವಿಸಿದ್ದ ಕಾಂಗ್ರೆಸ್‌ಗೆ ಮರುದಿನವೇ ಗಾಯದ ಮೇಲೆ ಬರೆ ಎಳೆದಂತೆ ಇಬ್ಬರು ಪ್ರಮುಖ ಶಾಸಕರು ಪಕ್ಷ ತೊರೆದು ಬಿಜೆಪಿ ಸೇರಿಕೊಂಡಿದ್ದರು. ಇವರಲ್ಲಿ ಪಕ್ಷದ ಹಿರಿಯ ನಾಯಕ ಮತ್ತು ಸಂಸದ ಪ್ರತಾಪ್ ಬಾಜ್ವಾ ಅವರ ಸಹೋದರ ಫತೇಹ್ ಜುಂಗ್ ಸಿಂಗ್ ಬಾಜ್ವಾ ಮತ್ತು ಹರಗೋಬಿಂದಪುರ ಶಾಸಕ ಬಲ್ವಿಂದರ್ ಲಡ್ಡಿ ಬಿಜೆಪಿ ಸೇರ್ಪಡೆಗೊಂಡಿದ್ದರು.

ಚಂಡಿಗಢ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಎಎಪಿ ಎದುರು ಹೀನಾಯ ಸೋಲಿನ ಹೊಡೆತ ಅನುಭವಿಸಿದ್ದ ಕಾಂಗ್ರೆಸ್‌ಗೆ ಮರುದಿನವೇ ಗಾಯದ ಮೇಲೆ ಬರೆ ಎಳೆದಂತೆ ಇಬ್ಬರು ಪ್ರಮುಖ ಶಾಸಕರು ಪಕ್ಷ ತೊರೆದು ಬಿಜೆಪಿ ಸೇರಿಕೊಂಡಿದ್ದರು. ಪಕ್ಷದ ಹಿರಿಯ ನಾಯಕ ಮತ್ತು ಸಂಸದ ಪ್ರತಾಪ್ ಬಾಜ್ವಾ ಅವರ ಸಹೋದರ ಫತೇಹ್ ಜುಂಗ್ ಸಿಂಗ್ ಬಾಜ್ವಾ ಮತ್ತು ಹರ್‌ಗೋವಿಂದ್‌ಪುರದ ಶಾಸಕ ಬಲ್ವಿಂದರ್ ಸಿಂಗ್ ಲಡ್ಡಿ ಕಾಂಗ್ರೆಸ್‌ಗೆ ಕೈ ಕೊಟ್ಟು ಬಿಜೆಪಿ ಸೇರಿದ್ದು ಕಾಂಗ್ರೆಸ್‌ಗೆ ಭಾರೀ ಬೇಸರವನ್ನುಂಟುಮಾಡಿತ್ತು. ಇದಲ್ಲದೇ ಇದಕ್ಕೂ ಮುನ್ನ ಕಳೆದ ವಾರ ಕಾಂಗ್ರೆಸ್ ಶಾಸಕ ರಾಣಾ ಗುರ್ಮೀತ್ ಸೋಧಿ ಅವರು ಬಿಜೆಪಿ ಸೇರ್ಪಡೆಯಾಗಿದ್ದರು. ಈ ಮೂವರೂ ಶಾಸಕರು ಪಂಜಾಬ್ ಮಾಜಿ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಅವರ ನಿಷ್ಠರಾಗಿದ್ದಾರೆ. ಅಮರಿಂದರ್ ಸಿಂಗ್ ಅವರು ಕಳೆದ ತಿಂಗಳು ಕಾಂಗ್ರೆಸ್ ತೊರೆದು ಹೊಸ ಪಕ್ಷ ಸ್ಥಾಪಿಸಿದ್ದರು.
ಆದರೆ, ಅಮರಿಂದರ್ ಅವರ ಅನುಯಾಯಿಗಳು ಅವರ ಪಂಜಾಬ್ ಲೋಕ್ ಕಾಂಗ್ರೆಸ್ ಪಕ್ಷವನ್ನು ಸೇರಿಕೊಳ್ಳದೆ ಬಿಜೆಪಿ ಸೇರ್ಪಡೆಯಾಗಿರುವುದು ಕುತೂಹಲ ಮೂಡಿಸಿತ್ತು. ಅಮರಿಂದರ್ ಮತ್ತು ಬಿಜೆಪಿ ಈಗಾಗಲೇ ಮೈತ್ರಿ ಮಾಡಿಕೊಂಡಿದ್ದು, ಸೀಟು ಹಂಚಿಕೆ ವಿಚಾರವಾಗಿ ಮಾತುಕತೆ ನಡೆಸಿದ್ದಾರೆ. ಅಮರಿಂದರ್ ಹಾಗೂ ಇತರೆ ಪಕ್ಷಗಳೊಂದಿಗೆ ಬಿಜೆಪಿ ಮೈತ್ರಿಕೂಟ ರೂಪಿಸುವ ಸಾಧ್ಯತೆ ಇದೆ. ಆದರೆ ಒಟ್ಟು ಸೀಟುಗಳಲ್ಲಿ ಬಿಜೆಪಿಯೇ ಸಿಂಹಪಾಲು ಕ್ಷೇತ್ರಗಳಲ್ಲಿ ಸ್ಪರ್ಧಿಸಲಿದೆ. ಚುನಾವಣೆಗೂ ಮುನ್ನ ಕಾಂಗ್ರೆಸ್ ಹಾಗೂ ಶಿರೋಮಣಿ ಅಕಾಲಿದಳದ ಅನೇಕ ಮುಖಂಡರು ಬಿಜೆಪಿಗೆ ಸೇರುತ್ತಾರೆ ಎನ್ನಲಾಗಿದೆ.
ಆದರೆ ಬಿಜೆಪಿ ಸೇರಿ ಆರು ದಿನಗಳಲ್ಲಿ ಮತ್ತೆ ತವರು ಮನೆಗೆ ಹರಗೋಬಿಂದಪುರ ಶಾಸಕ ಬಲ್ವಿಂದರ್ ಲಡ್ಡಿ ಬಂದಿದ್ದಾರೆ. ಇದಿನ್ನೂ ಕುತೂಹಲಕ್ಕೆ ಕಾರಣವಾಗಿದೆ. ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ ಶಾಸಕರು ಮತ್ತೆ ಕಾಂಗ್ರೆಸ್ ಸೇರುತ್ತಿರುವುದು ಮತ್ತಿನ್ನೂ ಶಾಸಕರು ಕೈ ಹಿಡಿಯುವ ಮುನ್ಸೂಚನೆಯನ್ನು ನೀಡಿದೆ. ಒಂದು ವೇಳೆ ಬಿಜೆಪಿ ಪಕ್ಷದಲ್ಲಿ ಸ್ಥಾನ ಹಂಚಿಕೆಯಲ್ಲಿ ಕೊಂಚ ಏರುಪೇರಾದರು ಸ್ವಪಕ್ಷದವರೂ ಪಕ್ಷ ಬದಲಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಇನ್ನೂ ಯಾವೆಲ್ಲಾ ಬದಲಾವಣೆಗಳು ಪಂಜಾಬ್ ನಲ್ಲಿ ನಡೆಯಲಿವೆ ಎನ್ನುವುದನ್ನ ಕಾದು ನೋಡಬೇಕಿದೆ.












Click it and Unblock the Notifications