ಸಿಧು ಮನವೊಲಿಕೆ ನಡುವೆ ಪಂಜಾಬ್‌ನಲ್ಲಿ ಕಾಂಗ್ರೆಸ್‌ನಿಂದ ಪ್ಲ್ಯಾನ್ ಬಿ, ಏನಿದು?
ಚಂಡೀಗಢ, ಸೆಪ್ಟೆಂಬರ್ 29: ಪಂಜಾಬ್ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ನವಜೋತ್ ಸಿಂಗ್ ಸಿಧು ರಾಜೀನಾಮೆ ನೀಡಿದ ಬಳಿಕ ಪಂಜಾಬ್ ರಾಜಕೀಯ ವಲಯದಲ್ಲಿ ಹಲವಾರು ಗೊಂದಲಗಳು ಎದ್ದಿದೆ. ವಿಧಾನಸಭೆ ಚುನಾವಣೆಗೆ ಇನ್ನು ಕೆಲವೇ ತಿಂಗಳುಗಳು ಇರುವಾಗ ಉಂಟಾದ ಈ ರಾಜಕೀಯ ಬೆಳವಣಿಗೆಯಿಂದಾಗಿ ಕಾಂಗ್ರೆಸ್ ಮುಂದೆ ಪಂಜಾಬ್‌ನಲ್ಲಿ ತನ್ನ ಸರ್ಕಾರವನ್ನು ಉಳಿಸಿಕೊಳ್ಳಲಿದೆಯೇ ಎಂಬ ಪ್ರಶ್ನೆಯೂ ಮೂಡಿದೆ.
ಈ ನಡುವೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ ಸಿ ವೇಣುಗೋಪಾಲ್ ಮಾತ್ರ ಇದು ಒಂದು ಭಾವನಾತ್ಮಕ ಪ್ರತಿಕ್ರಿಯೆ ಎಂದಿದ್ದಾರೆ. ಅಷ್ಟೇ ಅಲ್ಲದೇ ಎಲ್ಲವೂ ಸರಿಯಾಗಲಿದೆ ಎಂದು ಕೂಡಾ ಕೆ ಸಿ ವೇಣುಗೋಪಾಲ್ ಹೇಳಿಕೊಂಡಿದ್ದಾರೆ. ಆದರೆ ಇತ್ತ ನವಜೋತ್ ಸಿಂಗ್ ಸಿಧು ಮನವೊಲಿಕೆ ಮಾಡುವ ಕಾರ್ಯವನ್ನು ಕೂಡಾ ಕಾಂಗ್ರೆಸ್ ನಾಯಕರುಗಳು ಮಾಡುತ್ತಿದ್ದಾರೆ. ಹಾಗೆಯೇ ನವಜೋತ್ ಸಿಂಗ್ ಸಿಧು ರಾಜೀನಾಮೆಯನ್ನು ಹೈಕಮಾಂಡ್ ನಾಯಕರು ತಿರಸ್ಕರಿಸಿದ್ದಾರೆ ಎಂದು ಕೂಡಾ ಹೇಳಲಾಗಿದೆ.
ಇನ್ನು ಪಂಜಾಬ್‌ನಲ್ಲಿ ಸತ್ಯಕ್ಕಾಗಿ, ನ್ಯಾಯಕ್ಕಾಗಿ ನನ್ನ ಹೋರಾಟ ಮುಂದುವರಿಯುತ್ತದೆ ಎಂದು ನವಜೋತ್ ಸಿಂಗ್ ಸಿಧು ವಿಡಿಯೋವೊಂದನ್ನು ಮಾಡಿ ಹರಿಬಿಟ್ಟಿದ್ದಾರೆ. "ನನ್ನ ಕೊನೆಯ ಉಸಿರು ಇರುವವರೆಗೂ ನಾನು ಸತ್ಯ ಹಾಗೂ ನ್ಯಾಯಕ್ಕಾಗಿ ಹೋರಾಟ ಮಾಡುತ್ತೇನೆ," ಎಂದು ನವಜೋತ್ ಸಿಂಗ್ ಸಿಧು ವಿಡಿಯೋದಲ್ಲಿ ತಿಳಿಸಿದ್ದಾರೆ. ಇತ್ತ ಸಿದ್ದು ರಾಜೀನಾಮೆಗೆ ಹಲವಾರು ಕಾರಣಗಳು ಕಂಡು ಬರುತ್ತಿದೆ. ಈ ನಡುವೆ ಪಂಜಾಬ್‌ನಲ್ಲಿ ತನ್ನ ರಾಜಕೀಯ ಬಿಕ್ಕಟ್ಟನ್ನು ಸರಿಪಡಿಸಿಕೊಳ್ಳಲು ಕಾಂಗ್ರೆಸ್ ಪ್ಲ್ಯಾನ್ ಬಿ ಯನ್ನು ಮಾಡಿಕೊಂಡಿದೆ ಎಂದು ಹೇಳಲಾಗುತ್ತಿದೆ.

ಪಂಜಾಬ್‌ನಲ್ಲಿ ಕಾಂಗ್ರೆಸ್‌ನ ಪ್ಲ್ಯಾನ್ ಬಿ
* ನವಜೋತ್ ಸಿಂಗ್ ಸಿಧು ಮನವೊಲಿಕೆ ಮಾಡಲು ಕಾಂಗ್ರೆಸ್ ನಾಯಕರು ಪ್ರಯತ್ನವನ್ನು ಮಾಡುತ್ತಿದ್ದಾರೆ. ಆದರೆ ಈ ಕಾಂಗ್ರೆಸ್‌ನ ಪ್ಲ್ಯಾನ್ ಬಿ ಅತ್ತ ಮುಖ ಮಾಡಿದೆ ಎಂದು ಹೇಳಲಾಗುತ್ತಿದೆ. ಪಂಜಾಬ್‌ಗೆ ಹೊಸ ಮುಖ್ಯಸ್ಥರ ಹುಡುಕಾಟದಲ್ಲಿ ಕಾಂಗ್ರೆಸ್ ಇದೆ ಎಂದು ಹೇಳಲಾಗುತ್ತಿದೆ. ಈ ಹೊಸ ನಾಯಕತ್ವಕ್ಕೆ ಎರಡು ಬಾರಿ ಶಾಸಕರಾದ ಕುಲ್‌ಜೀತ್ ಸಿಂಗ್ ನಾಗ್ರಾ ಅಥವಾ ಪಕ್ಷದ ಸಂಸದ ರವ್ನೀತ್ ಸಿಂಗ್ ಬಿಟ್ಟು ಕಾಂಗ್ರೆಸ್‌ನ ಲೀಸ್ಟ್‌ನಲ್ಲಿ ಇದ್ದಾರೆ ಎನ್ನಲಾಗಿದೆ.
* ಕಾಂಗ್ರೆಸ್‌ನ ಶಾಸಕರು ಹಾಗೂ ಸಚಿವರುಗಳು ಇಂದು ಬೆಳಿಗ್ಗೆ ನವಜೋತ್ ಸಿಂಗ್ ಸಿಧು ಮನೆಯಲ್ಲಿ ಕಾಣಿಸಿಕೊಂಡಿದ್ದಾರೆ. ನವಜೋತ್ ಸಿಂಗ್ ಸಿಧುರ ಮನವೊಲಿಸುವ ಪ್ರಯತ್ನವನ್ನು ಮಾಡಿದ್ದಾರೆ. ರಾಜೀನಾಮೆ ಹಿಂದಕ್ಕೆ ಪಡೆಯುವಂತೆ ಒತ್ತಾಯವನ್ನು ಮಾಡಿದ್ದಾರೆ. ಆದರೆ ಈ ಎಲ್ಲಾ ಪ್ರಯತ್ನಗಳು ವಿಫಲವಾಗಿದೆ. ಮೊದಲು ಕಾಂಗ್ರೆಸ್ ಪಂಜಾಬ್‌ನ ಉಸ್ತುವಾರಿ ಹರೀಶ್ ರಾವತ್‌ರನ್ನು ನವಜೋತ್ ಸಿಂಗ್ ಸಿಧು ಜೊತೆ ಮಾತನಾಡಲು ಕಾಂಗ್ರೆಸ್ ಕಳುಹಿಸಿತ್ತು. ಈಗ ಮುಖ್ಯಮಂತ್ರಿ ಚರಣ್‌ಜೀತ್ ಸಿಂಗ್ ಚನ್ನಿರ ಬಳಿ ನವಜೋತ್ ಸಿಂಗ್ ಸಿಧು ಜೊತೆ ಮಾತನಾಡಲು ಹೇಳಿದ್ದಾರೆ ಎನ್ನಲಾಗಿದೆ. ಈ ಹಿನ್ನೆಲೆ ಚರಣ್‌ಜೀತ್ ಸಿಂಗ್, ಸಿಧು ಬಳಿ ಮಾಡತನಾಡುವ ಎಂದಿದ್ದಾರೆ ಎಂದು ವರದಿಯಾಗಿದೆ
* ಪಂಜಾಬ್‌ನಲ್ಲಿ ಕಾಪ್ಟನ್ ಅಮರೀಂದರ್ ಸಿಂಗ್ ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ನವಜೋತ್ ಸಿಂಗ್ ಸಿಧುಗೆ ಪರವಾಗಿ ನಿಂತಿದ್ದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕ ಗಾಂಧಿ ಈಗ ನವಜೋತ್ ಸಿಂಗ್ ಸಿಧು ಪರವಾಗಿ ಇಲ್ಲ ಎಂದು ಕೂಡಾ ಸ್ಪಷ್ಟವಾಗುತ್ತಿದೆ. ಅಮರೀಂದರ್ ಸಿಂಗ್ ರಾಜೀನಾಮೆಯ ಹಿನ್ನೆಲೆ ಚರಣ್‌ಜೀತ್ ಸಿಂಗ್ ಚನ್ನಿ ಪಂಜಾಬ್‌ನ ಮುಖ್ಯಮಂತ್ರಿ ಆದ ಬಳಿಕ ಗಾಂಧಿಗಳು, ಚರಣ್‌ಜೀತ್ ಸಿಂಗ್ ನಿರ್ಧಾರಗಳಿಗೆ ಮಣೆ ಹಾಕುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಇದು ನವಜೋತ್ ಸಿಂಗ್ ಸಿಧು ಮನವೊಲಿಕೆ ಎಷ್ಟು ಬಾರಿ ಮಾಡಿದರೂ ನಿರ್ಧಾರ ಬದಲಾಯಿಸದಿರಲೂ ಕಾರಣ ಎನ್ನಲಾಗಿದೆ.
(ಒನ್‌ಇಂಡಿಯಾ ಸುದ್ದಿ)












Click it and Unblock the Notifications