ವೈರಲ್ ವಿಡಿಯೋ: ಅಧಿಕಾರಿಗೆ ಚಪ್ಪಲಿಯಿಂದ ಥಳಿಸಿದ ಬಿಜೆಪಿ ನಾಯಕಿ

ಹರ್ಯಾಣ, ಜೂನ್ 6: ಟಿಕ್ ಟಿಕ್ ಮೂಲಕ ಭರ್ಜರಿ ಜನಪ್ರಿಯತೆ ಗಳಿಸಿದ್ದ, ಬಿಜೆಪಿ ಪಕ್ಷದಿಂದ ಟಿಕೆಟ್ ಪಡೆದು ಚುನಾವಣೆಯಲ್ಲಿ ಸೋಲು ಅನುಭವಿಸಿದ್ದ ಸೊನಾಲಿ ಫೋಗಟ್ ಇದೀಗ ಮತ್ತೆ ಸುದ್ದಿಯಲ್ಲಿದ್ದಾರೆ.

Recommended Video

      ಬದಲಾಯಿಸಲು ಯಾರೆಲ್ಲಾ ಸ್ಟಾರ್ ಗಳು ಬಂದಿದ್ದಾರೆ ನೋಡಿ | Badalagu Neenu Badalayisu Neenu | Oneindia Kannada

      ಹರಿಯಾಣದ ಅಧಿಕಾರಿಗೆ ಚಪ್ಪಲಿಯಿಂದ ಥಳಿಸಿ ವಿವಾದದ ಕೇಂದ್ರಬಿಂದುವಾಗಿದ್ದಾರೆ ಸೊನಾಲಿ ಫೋಗಟ್. ಅಧಿಕಾರಿಗೆ ಸೊನಾಲಿ ಫೋಗಟ್ ಚಪ್ಪಲಿಯಿಂದ ಥಳಿಸಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

      ಅಷ್ಟಕ್ಕೂ, ಅಧಿಕಾರಿಗೆ ಸೊನಾಲಿ ಫೋಗಟ್ ಚಪ್ಪಲಿಯಿಂದ ಹೊಡೆದಿದ್ದು ಯಾಕೆ.? ಘಟನೆಯ ಹಿನ್ನಲೆ ಏನು ಅಂತೀರಾ.? ಸಂಪೂರ್ಣ ಮಾಹಿತಿ ಇಲ್ಲಿದೆ, ಓದಿರಿ...

      ರೈತರ ಮಾರ್ಕೆಟ್ ಗೆ ತೆರಳಿದ್ದ ಸೊನಾಲಿ ಫೋಗಟ್

      ರೈತರ ಮಾರ್ಕೆಟ್ ಗೆ ತೆರಳಿದ್ದ ಸೊನಾಲಿ ಫೋಗಟ್

      ನಿನ್ನೆ (ಶುಕ್ರವಾರ, ಜೂನ್ 5) ರೈತರ ಮಾರುಕಟ್ಟೆಗೆ ಸೊನಾಲಿ ಫೋಗಟ್ ತೆರಳಿದ್ದರು. ರೈತರು ನೀಡಿದ್ದ ದೂರಿನ ಮೇರೆಗೆ ಅಗ್ರಿಕಲ್ಚರಲ್ ಪ್ರೊಡ್ಯೂಸ್ ಮಾರ್ಕೆಟ್ ಕಮಿಟಿಯ ಸದಸ್ಯ ಸುಲ್ತಾನ್ ಸಿಂಗ್ ಜೊತೆಗೆ ಸೊನಾಲಿ ಫೋಗಟ್ ಮಾತುಕತೆ ನಡೆಸುತ್ತಿದ್ದರು. ಈ ವೇಳೆ ಆಕ್ರೋಶಗೊಂಡ ಸೊನಾಲಿ ಫೋಗಟ್ ಅಧಿಕಾರಿಯನ್ನು ಥಳಿಸಿದ್ದಾರೆ.

      ಇಬ್ಬರ ವಿರುದ್ಧವೂ ದೂರು ದಾಖಲು

      ಇಬ್ಬರ ವಿರುದ್ಧವೂ ದೂರು ದಾಖಲು

      ಅಧಿಕಾರಿಯನ್ನು ಸೊನಾಲಿ ಫೋಗಟ್ ಚಪ್ಪಲಿಯಲ್ಲಿ ಥಳಿಸಿರುವ ದೃಶ್ಯ ಕ್ಯಾಮರಾ ಕಂಗಳಲ್ಲಿ ಸೆರೆಯಾಗಿದೆ. ಚಪ್ಪಲಿಯಿಂದ ಸೊನಾಲಿ ಫೋಗಟ್ ಹಲ್ಲೆ ಮಾಡುತ್ತಿದ್ದರೆ, ಹೊಡೆಯುವುದನ್ನು ನಿಲ್ಲಿಸುವಂತೆ ಅಧಿಕಾರಿ ಬೇಡಿಕೊಳ್ಳುತ್ತಿದ್ದರು. ಬಳಿಕ ಸೊನಾಲಿ ಫೋಗಟ್ ಮತ್ತು ಅಧಿಕಾರಿಯ ವಿರುದ್ಧ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.

      ಘಟನೆಯನ್ನು ವಿವರಿಸಿದ ಅಧಿಕಾರಿ

      ಘಟನೆಯನ್ನು ವಿವರಿಸಿದ ಅಧಿಕಾರಿ

      ''ದೂರು ಕೊಡಲು ಸೊನಾಲಿ ಫೋಗಟ್ ಬಂದರು. ''ನಾನ್ಯಾರು ಗೊತ್ತಾ.?'' ಅಂತ ಕೇಳಿದರು. ಅದಕ್ಕೆ ನಾನು ''ಅಧಮ್ ಪುರದ ವಿಧಾನ ಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿದ್ರಿ ನೀವು. ನಿಮ್ಮ ದೂರನ್ನು ನಾನು ಸ್ವೀಕರಿಸಿದ್ದೇನೆ. ಆದಷ್ಟು ಬೇಗ ಆ ಬಗ್ಗೆ ಗಮನ ಹರಿಸುತ್ತೇನೆ'' ಎಂದೆ.

      ಬಳಿಕ, 'ಚುನಾವಣೆಯಲ್ಲಿ ನನ್ನನ್ನ ನೀವು ವಿರೋಧಿಸಿದ್ದು ಏಕೆ.?'' ಅಂತ ಆಕೆ ನನ್ನನ್ನು ಪ್ರಶ್ನಿಸಿದರು. ''ನಾನು ಅಧಮ್ ಪುರ್ ನಲ್ಲಿ ನೆಲೆಸಿಲ್ಲ. ಅಲ್ಲಿ ಮತ ಚಲಾಯಿಸುವ ಅಧಿಕಾರ ಕೂಡ ನನಗಿಲ್ಲ. ಚುನಾವಣೆ ಮುಗಿದು ಎಷ್ಟೋ ದಿನ ಕಳೆದ ಮೇಲೆ ನನ್ನ ಮೇಲೆ ಬೆಟ್ಟು ಮಾಡಿ ತೋರಿಸುತ್ತಿರುವುದೇಕೆ'' ಎಂದು ನಾನು ಪ್ರಶ್ನಿಸಿದೆ. ಆಗ ಸೊನಾಲಿ ಫೋಗಟ್ ''ನನ್ನನ್ನು ನಿಂದಿಸುತ್ತಿದ್ದೀರಾ'' ಎಂದರು.

      ''ನಾನು ನಿಂದಿಸಲಿಲ್ಲ'' ಅಂತ ಎಷ್ಟೇ ಹೇಳಿದರೂ ಅವರು ಕೇಳಲಿಲ್ಲ. ಚಪ್ಪಲಿಯಿಂದ ಥಳಿಸಲು ಸೊನಾಲಿ ಫೋಗಟ್ ಆರಂಭಿಸಿದರು ಎಂದು ಘಟನೆ ಕುರಿತು ಅಧಿಕಾರಿ ಪೊಲೀಸರಿಗೆ ತಿಳಿಸಿದ್ದಾರೆ.

      ಕಠಿಣ ಕ್ರಮ ಕೈಗೊಳ್ಳಿ..

      ಕಠಿಣ ಕ್ರಮ ಕೈಗೊಳ್ಳಿ..

      ಸೊನಾಲಿ ಫೋಗಟ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಹರ್ಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಗೆ ಕಾಂಗ್ರೆಸ್ ವಕ್ತಾರ ರಣ್ದೀಪ್ ಸಿಂಗ್ ಸುರ್ಜೇವಾಲಾ ಒತ್ತಾಯಿಸಿದ್ದಾರೆ.

      ಯಾರೀ ಸೊನಾಲಿ ಫೋಗಟ್.?

      ಯಾರೀ ಸೊನಾಲಿ ಫೋಗಟ್.?

      ಟಿಕ್ ಟಾಕ್ ಮೂಲಕ ಜನಪ್ರಿಯತೆ ಪಡೆದಾಕೆ ಸೊನಾಲಿ ಫೋಗಟ್. ಇದೇ ಜನಪ್ರಿಯತೆಯನ್ನು ಸದ್ಬಳಕೆ ಮಾಡಿಕೊಳ್ಳಲು ಅಧಮ್ ಪುರ್ ಕ್ಷೇತ್ರದಿಂದ ವಿಧಾನ ಸಭೆ ಚುನಾವಣೆಗೆ ಸ್ಪರ್ಧಿಸಲು ಸೊನಾಲಿ ಫೋಗಟ್ ಗೆ ಬಿಜೆಪಿ ಟಿಕೆಟ್ ನೀಡಿತ್ತು. ಆದ್ರೆ, ಚುನಾವಣೆಯಲ್ಲಿ ಸೊನಾಲಿ ಫೋಗಟ್ ಸೋಲು ಕಂಡರು.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+