ಎಎಪಿ ಅಧಿಕಾರಕ್ಕೆ ಬರಲೆಂದು ಪಂಜಾಬ್ ಜನತೆ ಬಯಸುತ್ತಿದೆ: ಭಗವಂತ್

ಚಂಡೀಗಢ, ಫೆಬ್ರವರಿ 3: ಇದೇ ತಿಂಗಳು ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಎಎಪಿ ಅಧಿಕಾರಕ್ಕೆ ಬರಲೆಂದು ಪಂಜಾಬ್ ಜನತೆ ಬಯಸುತ್ತಿದೆ ಎಂದು ಎಎಪಿ ಸಿಎಂ ಅಭ್ಯರ್ಥಿ ಭಗವಂತ್ ಮನ್ ಹೇಳಿದ್ದಾರೆ.

ಪಂಜಾಬ್‌ನ ಜನರು ಕಳೆದ 44 ವರ್ಷಗಳಿಂದ ಕಾಂಗ್ರೆಸ್ ಮತ್ತು ಎಸ್‌ಎಡಿಗೆ ಅವಕಾಶಗಳನ್ನು ನೀಡಿ ಬೇಸತ್ತಿದ್ದಾರೆ ಮತ್ತು ಈಗ ಆಮ್ ಆದ್ಮಿ ಪಕ್ಷ ಅಧಿಕಾರಕ್ಕೆ ಬರಲಿ ಎಂದು ಬಯಸುತ್ತಿದ್ದಾರೆ ಎಂದರು.

ಹಣದುಬ್ಬರ, ಡ್ರಗ್ಸ್‌ ಹಾವಳಿ ಮತ್ತು ಕೃಷಿ ಸಂಕಷ್ಟಗಳು ರಾಜ್ಯ ಎದುರಿಸುತ್ತಿರುವ ಕೆಲವು ಸಮಸ್ಯೆಗಳಾಗಿವೆ ಅವುಗಳನ್ನು ಪರಿಹರಿಸಲು ತಮ್ಮ ಪಕ್ಷವು ಕೆಲಸ ಮಾಡಲಿದೆ ಎಂದು ಧುರಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸುತ್ತಿರುವ 48 ವರ್ಷದ ಮನ್ ಹೇಳಿದ್ದಾರೆ.

Bhagwant Mann Says People Of Punjab Want AAP To Form Next Govt In State

ಕಳೆದ ತಿಂಗಳು ಪಂಜಾಬ್‌ನಲ್ಲಿ ಪಕ್ಷವು ಮೊದಲ ಬಾರಿಗೆ ಜನತಾ ಚುನೇಗಿ ಅಪನಾ ಸಿಎಂ ಅಭಿಯಾನ ನಡೆಸಿ ಭಗವಂತ್ ಮನ್ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಣೆ ಮಾಡಿತ್ತು.

ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಆಯ್ಕೆ ಮಾಡಲು ಸಂಖ್ಯೆ ಒಂದನ್ನು ನೀಡಲಾಗಿತ್ತು, ಅದಕ್ಕೆ ಕರೆ ಮಾಡಬಹುದು ಅಥವಾ ಸಂದೇಶವನ್ನು ಕಳುಹಿಸಬಹುದು ಎಂದು ತಿಳಿಸಲಾಗಿತ್ತು.

ಸಮೀಕ್ಷೆಯಲ್ಲಿ ಶೇ.93ರಷ್ಟು ಮಂದಿ ಭಗವಂತ್ ಮನ್ ಅವರನ್ನು ಆಯ್ಕೆ ಮಾಡಿದ್ದರು. ಪಂಜಾಬ್‌ನಲ್ಲಿ ಇನ್ನು ಕೆಲವೇ ವಾರಗಳಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಈ ನಿಟ್ಟಿನಲ್ಲಿ ಎಲ್ಲಾ ಪಕ್ಷಗಳು ಭರ್ಜರಿ ಪ್ರಚಾರವನ್ನು ನಡೆಸುತ್ತಿದೆ.

ಈ ನಡುವೆ ಹಲವಾರು ಮಾಧ್ಯಮಗಳು ಚುನಾವಣಾ ಪೂರ್ವ ಸಮೀಕ್ಷೆಯನ್ನು ಪ್ರಕಟ ಮಾಡಿದೆ. Zee News ಕೂಡಾ ಪಂಜಾಬ್‌ ವಿಧಾನಸಭೆ ಚುನಾವಣೆಗಾಗಿ ಸಮೀಕ್ಷೆಯನ್ನು ಮಾಡಿ, ಪ್ರಕಟ ಮಾಡಿದೆ.

ಉತ್ತರ ಪ್ರದೇಶದಲ್ಲಿ ಫೆಬ್ರವರಿ 10, 14, 20, 23 ಮತ್ತು ಮಾರ್ಚ್ 3 ಮತ್ತು 7 ರಂದು ಚುನಾವಣೆ ನಡೆಯಲಿದೆ. ಗೋವಾ ಮತ್ತು ಉತ್ತರಾಖಂಡದಲ್ಲಿ ಫೆಬ್ರವರಿ 14 ರಂದು ಮತದಾನ ನಡೆಯಲಿದೆ.

ಪಂಜಾಬ್‌ನಲ್ಲಿ ಫೆಬ್ರವರಿ 20 ರಂದು ಮತದಾನ ನಡೆಯಲಿದೆ. ಮಣಿಪುರದಲ್ಲಿ ಫೆಬ್ರವರಿ 27 ಮತ್ತು ಮಾರ್ಚ್ 3 ರಂದು ಎರಡು ಹಂತಗಳಲ್ಲಿ ಮತದಾನ ನಡೆಯಲಿದೆ. ಮಾರ್ಚ್ 10 ರಂದು ಮತ ಎಣಿಕೆ ನಡೆಯಲಿದೆ.

ಪಂಜಾಬ್, ಉತ್ತರಾಖಂಡ ಮತ್ತು ಯುಪಿಯ ಚುನಾವಣಾ ಪೂರ್ವ ಸಮೀಕ್ಷೆಯನ್ನು ಝೀ ನ್ಯೂಸ್‌ ಈಗಾಗಲೇ ಪ್ರಕಟ ಮಾಡಿದೆ. ಯುಪಿ, ಉತ್ತರಾಖಂಡ ಪ್ರದೇಶವಾರು ಅಭಿಪ್ರಾಯ ಸಂಗ್ರಹಗಳನ್ನು ಕೂಡಾ ವರದಿ ಮಾಡಿದೆ. ಈಗ ಪಂಜಾಬ್‌ನ ಪ್ರದೇಶವಾರು ಅಭಿಪ್ರಾಯ ಸಂಗ್ರಹವನ್ನು ಹೆಚ್ಚು ವಿವರವಾಗಿ ವರದಿ ಮಾಡಿದೆ. ಪಂಜಾಬ್ ಅನ್ನು ಒಟ್ಟು ಮೂರು ಮಾಜಾ, ದೋಬಾ ಮತ್ತು ಮಾಲ್ವಾ ಪ್ರದೇಶಗಳಾಗಿ ವಿಂಗಡಿಸಲಾಗಿದೆ.

ಮೂರು ಕ್ಷೇತ್ರಗಳಲ್ಲಿ ಒಟ್ಟು 117 ವಿಧಾನಸಭಾ ಸ್ಥಾನಗಳಿವೆ. ಈ ಸ್ಥಾನಗಳ ಸಮೀಕ್ಷೆ ಮಾಡಲಾಗಿದೆ. ಈ ಸಮೀಕ್ಷೆಯಲ್ಲಿ 10 ಲಕ್ಷಕ್ಕೂ ಹೆಚ್ಚು ಜನರ ಅಭಿಪ್ರಾಯ ಸಂಗ್ರಹವನ್ನು ಮಾಡಲಾಗಿದೆ. ಸಮೀಕ್ಷೆಯನ್ನು 10 ಡಿಸೆಂಬರ್ 2021 ರಿಂದ 15 ಜನವರಿ 2022 ರವರೆಗೆ ಮಾಡಲಾಗಿದೆ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+