ಹರ್ಯಾಣದ ಗಣಿಗಾರಿಕೆ ಪ್ರದೇಶದಲ್ಲಿ ಭೂಕುಸಿತ, 15-20 ಮಂದಿ ಸಿಲುಕಿರುವ ಶಂಕೆ
ಚಂಡೀಗಢ, ಜನವರಿ 01: ಹರ್ಯಾಣದ ಭಿವಾನಿ ಜಿಲ್ಲೆಯ ಗಣಿಗಾರಿಕೆ ಪ್ರದೇಶದಲ್ಲಿ ಭೂಕುಸಿತ ಉಂಟಾಗಿದ್ದು, 15-20 ಮಂದಿ ಸಿಲುಕಿರುವ ಶಂಕೆ ವ್ಯಕ್ತವಾಗಿದೆ.
ರಕ್ಷಣಾ ಅಧಿಕಾರಿಗಳು ಸ್ಥಳಕ್ಕೆ ತಲುಪಿದ್ದು, ಇದುವರೆಗೆ ಮೂವರನ್ನು ರಕ್ಷಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಶನಿವಾರ(ಜ.1) ಬೆಳಗ್ಗೆ 8.15ರ ಸುಮಾರಿಗೆ ಗಣಿಗಾರಿಕೆ ನಡೆಯುತ್ತಿದ್ದಾಗ ಭೂ ಕುಸಿತವಾಗಿದೆ ಎಂದು ತಿಳಿದುಬಂದಿದೆ. ಘಟನೆ ವೇಳೆ ಸ್ಥಳದಲ್ಲಿ ನಿಂತಿದ್ದ ಸುಮಾರು ಅರ್ಧ ಡಜನ್ ಪಾಪ್‌ಲ್ಯಾಂಡ್ ಯಂತ್ರಗಳು ಮತ್ತು ಡಂಪರ್‌ಗಳು ಹೂತುಹೋಗಿವೆ ಎಂದು ತಿಳಿದುಬಂದಿದೆ.
ತೋಷಮ್ ಬ್ಲಾಕ್‌ನ ದಡಮ್ ಗಣಿಗಾರಿಕೆ ಪ್ರದೇಶದಲ್ಲಿ ಪರ್ವತದ ಹೆಚ್ಚಿನ ಭಾಗವು ಬಿರುಕು ಬಿಟ್ಟಿದ್ದರಿಂದ ಭೂಕುಸಿತ ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕೃಷಿ ಸಚಿವ ಜೆಪಿ ದಲಾಲ್ ರಕ್ಷಣಾ ಕಾರ್ಯಾಚರಣೆಯ ಮೇಲ್ವಿಚಾರಣೆಗಾಗಿ ಸ್ಥಳಕ್ಕೆ ತಲುಪಿದ್ದಾರೆ. ಸದ್ಯಕ್ಕೆ ಪರ್ವತ ಜಾರಿ ಬೀಳಲು ಕಾರಣ ತಿಳಿದುಬಂದಿಲ್ಲ.

10 ರಿಂದ 15ಕ್ಕೂ ಹೆಚ್ಚು ಮಂದಿ ಮಣ್ಣಿನಡಿ ಸಿಲುಕಿ ಜೀವಂತ ಸಮಾಧಿಯಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಈಗಾಗಲೇ ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ಆರಂಭವಾಗಿದ್ದು, ಮೃತರ ಬಗ್ಗೆ ಸ್ಥಳೀಯ ಅಧಿಕಾರಿಗಳು ಇನ್ನಷ್ಟೇ ಸ್ಪಷ್ಪನೆ ನೀಡಬೇಕಿದೆ.
ದಡಮ್ ಗಣಿಗಾರಿಕೆ ಪ್ರದೇಶ ಮತ್ತು ಖಾನಕ್ ಪಹಾರಿ ಪ್ರದೇಶದಲ್ಲಿ ಗಣಿಗಾರಿಕೆಯ ಮೇಲಿನ ನಿಷೇಧವನ್ನು ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ಹಿಂತೆಗೆದುಕೊಂಡ ನಂತರ ಗಣಿಗಾರಿಕೆ ಚಟುವಟಿಕೆಗಳು ದೊಡ್ಡ ಪ್ರಮಾಣದಲ್ಲಿ ನಡೆಯುತ್ತಿವೆ. ಮಾಲಿನ್ಯದ ಹಿನ್ನೆಲೆಯಲ್ಲಿ ಹಸಿರು ನ್ಯಾಯಾಲಯ ವಿಧಿಸಿದ್ದ 2 ತಿಂಗಳ ನಿಷೇಧವನ್ನು ಗುರುವಾರ ಹಿಂತೆಗೆದುಕೊಳ್ಳಲಾಗಿದ್ದು, ಶುಕ್ರವಾರವಷ್ಟೇ ಗಣಿಗಾರಿಕೆ ಪುನರಾರಂಭವಾಗಿದೆ.
ಭಿವಾನಿ ಜಿಲ್ಲೆಯ ದಡಮ್ ಗಣಿಗಾರಿಕೆ ಪ್ರದೇಶದಲ್ಲಿ ಈ ದುರಂತ ಸಂಭವಿಸಿದ್ದು, ಗಣಿಗಾರಿಕೆ ವೇಳೆ ಭೂ ಕುಸಿತವಾಗಿ 10-15 ಮಂದಿ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ ಎಂದು ಎಎನ್‌ಐ ಸುದ್ದಿಸಂಸ್ಥೆ ವರದಿ ಮಾಡಿದೆ. ಘಟನೆಯಲ್ಲಿ ಗಣಿಗಾರಿಕೆಗೆ ಬಳಸುತ್ತಿದ್ದ ವಾಹನಗಳು ಕೂಡ ಕುಸಿತವಾಗಿರುವ ಭೂಮಿಯ ಅವಶೇಷಗಳಡಿ ಹೂತು ಹೋಗಿವೆ ಎಂದು ಹೇಳಲಾಗುತ್ತಿದೆ.
ಘಟನೆ ವೇಳೆ ಸ್ಥಳದಲ್ಲಿ ನಿಂತಿದ್ದ ಸುಮಾರು ಅರ್ಧ ಡಜನ್ ಪಾಪ್‌ಲ್ಯಾಂಡ್ ಯಂತ್ರಗಳು ಮತ್ತು ಡಂಪರ್‌ಗಳು ಹೂತುಹೋಗಿವೆ ಎಂದು ವರದಿಗಳಿಂದ ತಿಳಿದುಬಂದಿದೆ. ಇದರೊಂದಿಗೆ 10-15ಕ್ಕೂ ಹೆಚ್ಚು ಮಂದಿ ಮಣ್ಣಿನಡಿ ಸಲುಕಿ ಜೀವಂತ ಸಮಾಧಿಯಾಗಿದ್ದಾರೆ ಎಂದು ಹೇಳಲಾಗುತ್ತಿದೆ.












Click it and Unblock the Notifications