ಚಾಮರಾಜನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಲೆ ಮಹದೇಶ್ವರನಿಗೆ ಉಘೇ ಎಂದ ಯಡಿಯೂರಪ್ಪ

|
Google Oneindia Kannada News

ಚಾಮರಾಜನಗರ, ಜನವರಿ 21 : ಕರ್ನಾಟಕ ಬಿಜೆಪಿ ಅಧ್ಯಕ್ಷ ಮತ್ತು 2018ರ ಚುನಾವಣೆಯ ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿ ಬಿ.ಎಸ್.ಯಡಿಯೂರಪ್ಪ ಮಲೆ ಮಹದೇಶ್ವರ ಬೆಟ್ಟಕ್ಕೆ ಬೇಡಿ ನೀಡಿ, ವಿಶೇಷ ಪೂಜೆ ಸಲ್ಲಿಸಿದರು.

ಭಾನುವಾರ ಯಡಿಯೂರಪ್ಪ ಅವರು ಮಲೆ ಮಹದೇಶ್ವರ ಬೆಟ್ಟಕ್ಕೆ ಭೇಟಿ ನೀಡಿದ್ದರು. ಮಾಜಿ ಸಚಿವರಾದ ಎಂ.ಪಿ.ರೇಣುಕಾಚಾರ್ಯ, ಸಿ.ಪಿ.ಯೋಗೇಶ್ವರ, ಎಸ್‌.ಎ.ರಾಮದಾಸ್ ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಮಲೆ ಮಹದೇಶ್ವರನಿಗೆ ಬೆಳ್ಳಿಯ ಉಡುಗೊರೆ ಕೊಡಲಿದ್ದಾರೆ ಸಿಎಂ!ಮಲೆ ಮಹದೇಶ್ವರನಿಗೆ ಬೆಳ್ಳಿಯ ಉಡುಗೊರೆ ಕೊಡಲಿದ್ದಾರೆ ಸಿಎಂ!

ವಿಶೇಷ ಪೂಜೆ ಸಲ್ಲಿಸಿದ ಬಳಿಕ ಮಾತನಾಡಿದ ಬಿ.ಎಸ್.ಯಡಿಯೂರಪ್ಪ ಅವರು, 'ಮಾದಪ್ಪನ ದರ್ಶನ ಮಾಡಿದ್ದೇನೆ. ಮುಂದಿನ ದಿನಗಳಲ್ಲಿ ರಾಜ್ಯಕ್ಕೆ ಒಳ್ಳೆಯ ಕಾಲ ಬರುತ್ತದೆ' ಎಂದರು.

Yeddyurappa visits male Mahadeshwara temple

'ಮಾದಪ್ಪನ ದಯೆಯಿಂದ ಕರ್ನಾಟಕದಲ್ಲಿ ಮುಂದಿನ ಚುನಾವಣೆಯಲ್ಲಿ ಬಿಜೆಪಿ ಬಹುಮತ ಪಡೆದು ಅಧಿಕಾರಕ್ಕೆ ಬರಲಿದೆ' ಎಂದು ವಿಶ್ವಾಸ ವ್ಯಕ್ತಪಡಿಸಿದರು.

20 ನಿಮಿಷ ಜಪ ಮಾಡಿದ ಸಿದ್ದರಾಮಯ್ಯ, ಏನಿದರ ಹಿಂದಿನ ರಹಸ್ಯ?20 ನಿಮಿಷ ಜಪ ಮಾಡಿದ ಸಿದ್ದರಾಮಯ್ಯ, ಏನಿದರ ಹಿಂದಿನ ರಹಸ್ಯ?

ಮಲೆ ಮಹದೇಶ್ವರ ದೇವಾಲಯಕ್ಕೆ ಭೇಟಿ ನೀಡಿದ ಬಳಿಕ ಯಡಿಯೂರಪ್ಪ ಚಾಮರಾಜನಗರ ಜಿಲ್ಲೆಯಲ್ಲಿ ನಡೆಯುತ್ತಿರುವ ಪರಿವರ್ತನಾ ಯಾತ್ರೆಯಲ್ಲಿ ಪಾಲ್ಗೊಂಡರು. ಕೊಳ್ಳೆಗಾಲದಲ್ಲಿ ಇಂದು ಪರಿವರ್ತನಾಯಾತ್ರೆ ನಡೆಯಿತು.

ಸಮಾವೇಶ ಉದ್ದೇಶಿಸಿ ಮಾತನಾಡಿದ ಯಡಿಯೂರಪ್ಪ, 'ಯಳಂದೂರು ಭಾಗದ 43 ಕೆರೆಗಳ ಪುನಶ್ಚೇತನದಿಂದ ಈ ಭಾಗದ ನೀರಿನ ಸಂಕಷ್ಟವನ್ನು ಕಳೆಯಬಹುದಾದರೂ ಕಾಂಗ್ರೆಸ್ ಸರ್ಕಾರ ಕಣ್ಣು ಮುಚ್ಚಿ ಕುಳಿತಿದೆ' ಎಂದು ಆರೋಪಿಸಿದರು.

English summary
Karnataka BJP president B.S.Yeddyurappa on January 21, 2018 visited Mahadeshwara temple Chamarajnagar. ಮಲೆ ಮಹದೇಶ್ವರನಿಗೆ ಉಘೇ ಎಂದ ಯಡಿಯೂರಪ್ಪ
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X