ಚಾಮರಾಜನಗರ: ರಸ್ತೆಗಿಳಿದು ದಾಂಧಲೆ ಶುರು ಮಾಡಿ.. ಹೇಯ್.. ಅಂದವರ ಕಡೆಗೆ ಗುರಾಯಿಸಿದ ಗಜರಾಜ, ವಿಡಿಯೋ ವೈರಲ್
ಚಾಮರಾಜನಗರ, ಸೆಪ್ಟೆಂಬರ್, 18: ಗಡಿಜಿಲ್ಲೆ ಚಾಮರಾಜನಗರ ಜಿಲ್ಲೆಯ ಹಲವೆಡೆ ಆಗಾಗ ಪ್ರಾಣಿಗಳು ಹಾವಳಿ ಮಾಡುತ್ತಲೇ ಇರುತ್ತವೆ. ಹಾಗೆಯೇ ಇದೀಗ ಕಾಡಾನೆಯೊಂದು ಆಹಾರ ಅರಸಿ ರಸ್ತೆಗಿಳಿದ ಪರಿಣಾಮ ವಾಹನ ಸವಾರರು ಪರದಾಡಿದ ಘಟನೆ ಜಿಲ್ಲೆಯ ಗಡಿಭಾಗವಾದ ತಮಿಳುನಾಡಿನ ತಾಳವಾಡಿ ಸಮೀಪ ಮಂಗಳವಾರ ಸಂಜೆ ನಡೆದಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ದಿಢೀರ್ ನಡು ರಸ್ತೆಯಲ್ಲಿ ಪ್ರತ್ಯಕ್ಷವಾದ ಕಾಡಾನೆ ಕಬ್ಬಿನ ಲಾರಿ ಅಡ್ಡಗಟ್ಟಿದೆ. ಇನ್ನು ಆನೆ ಕಂಡು ಹೌಹಾರಿರುದ ವಾಹನ ಸವಾರರು ರಸ್ತೆಯ ಎರಡೂ ಬದಿಗಳಲ್ಲೂ ವಾಹನ ನಿಲ್ಲಿಸಿ ಆನೆ ಪಕ್ಕಕ್ಕೆ ಸರಿಯುವ ತನಕ ಕಾದಿದ್ದು, ಅರ್ಧ ತಾಸಿಗಿಂತಲೂ ವಾಹನ ಸಂಚಾರ ಅಸ್ತವ್ಯಸ್ತವಾಗಿತ್ತು.

ಕಬ್ಬಿನ ಲಾರಿಗೆ ಟಾರ್ಪಾಲ್ ಸುತ್ತಿದ್ದರೂ ಬಿಡದ ಕಾಡಾನೆ ಟಾರ್ಪಾಲ್ ಕಿತ್ತು ಬಿಸಾಡಿ ಕಬ್ಬಿನ ಜಲ್ಲೆಗಳಲ್ಲಿ ಸವಿದಿದೆ. ಇನ್ನು ಆನೆ ಸಮೀಪವೇ ಇದ್ದರೂ ಬೈಕ್ ಸವಾರರು ಆನೆ ಬಳಿಯೇ ನಿಂತು ಹುಚ್ಚಾಟ ಮೆರೆದಿರುವುದು ವೀಡಿಯೋದಲ್ಲಿ ಸೆರೆಯಾಗಿದೆ.
ಸಕ್ಕರೆ ಕಾರ್ಖಾನೆಗಳಿಗೆ ಕಬ್ಬು ತುಂಬಿಕೊಂಡು ಹೋಗುವ ಲಾರಿಗಳೇ ಕಾಡಾನೆಯ ಟಾರ್ಗೆಟ್ ಆಗಿದ್ದು, ಆಗಾಗ್ಗೆ ರಸ್ತೆಗಿಳಿದು ಕಬ್ಬು ವಸೂಲಿ ಮಾಡಲಿದೆ. ಆನೆಗೆ ಊಟವಾದರೇ ವಾಹನ ಸವಾರರಿಗೆ ಪ್ರಾಣ ಸಂಕಟವಾಗಿದೆ.
ಹುಲಿಯನ್ನೇ ಗುಮ್ಮಿದ ಕಾಡೆಮ್ಮೆ: ಚಾಮರಾಜನಗರ ಜಿಲ್ಲೆಯಲ್ಲಿ ಕಾಡುಪ್ರಾಣಿಗಳ ಹಾವಳಿ ಮಾಡುತ್ತಲೇ ಇರುತ್ತವೆ. ಇತ್ತೀಚೆಗಷ್ಟೇ ಹುಲಿಯೊಂದು ಎರಡು ಹಸುಗಳ ರಕ್ತ ಹೀರಿರುವ ಘಟನೆ ಜಿಲ್ಲೆಯ ವಡೆಯನಪುರ ಗ್ರಾಮದಲ್ಲಿ ನಡೆದಿತ್ತು. ಇನ್ನು ಇದೀಗ
ಬೇಟೆಯಾಡಲು ಬಂದ ಹುಲಿಯನ್ನೇ ಕಾಡೆಮ್ಮೆಯೊಂದು ಹಿಮ್ಮೆಟ್ಟಿಸಿರುವುದು ಬಂಡೀಪುರ ಸಫಾರಿಯಲ್ಲಿ ನಡೆದಿದೆ.
ಸುಮ್ಮೆನೆ ಯಾವುದೇ ಪ್ರಾಣಿಗರ ತಂಟೆಗೆ ಹೋಗದೇ ಮೇಯುತ್ತಿದ್ದ ಕಾಡೆಮ್ಮೆ ಮೇಲೆ ದಾಳಿ ಹುಲಿ ದಾಳಿ ನಡೆಸಲು ಮುಂದಾಗಿದೆ. ಈ ವೇಳೆ ಹುಲಿಗೆ ಕಾಲಿನಿಂದ ಒದ್ದು ಕಾಡೆಮ್ಮೆ ಎದುರಿಸಿ ನಿಂತಿದೆ. ಇನ್ನು ಕಾಡೆಮ್ಮೆಯ ರೌದ್ರಾವತಾರ ಕಂಡ ಹುಲಿ ಬಂದ ದಾರಿಗೆ ಸುಂಕ ಇಲ್ಲವೆಂಬಂತೆ ಸ್ಥಳದಿಂದ ಕಾಲ್ಕಿತ್ತಿದೆ.
ಇನ್ನು, ಈ ರೋಮಾಂಚಕ ಬೇಟೆ ದೃಶ್ಯವನ್ನು ಸಫಾರಿಗೆ ತೆರಳಿದ್ದ ಪ್ರವಾಸಿಗರು ಸೆರೆ ಹಿಡಿದಿದ್ದಾರೆ. ಮಂಗಳವಾರ (ಸೆಪ್ಟೆಂಬರ್ 11) ಸಂಜೆ ಸಫಾರಿಯಲ್ಲಿ ಈ ಬೇಟೆ ಕಾಳಗ ನಡೆದಿದೆ ಎಂದು ತಿಳಿದುಬಂದಿದೆ. ಕಾಡೆಮ್ಮೆ ಬಲಿಷ್ಠ ಪ್ರಾಣಿಯಾದರೂ ಸಹ ಹುಲಿಯ ಪ್ರಮುಖ ಬೇಟೆಗಳಲ್ಲಿ ಒಂದಾಗಿದೆ. ಆದರೆ, ಹುಲಿಯನ್ನು ಎದುರಿಸಿ ಹಿಮ್ಮೆಟ್ಟಿಸಿದ್ದು ಮಾತ್ರ ರೋಮಾಂಚಕಾರಿ ಆಗಿದೆ.












Click it and Unblock the Notifications