ವೀರಪ್ಪನ್ ನಿಂದ ನಲುಗಿದ್ದ 'ಉಪಕಾರ' ಕಾಲೋನಿಗೆ ಉಪಕಾರ ಮಾಡುವವರ್ಯಾರು?!

By: ಚಾಮರಾಜನಗರ ಪ್ರತಿನಿಧಿ
Subscribe to Oneindia Kannada
   Veerappan's Ghost haunts Chamarajanagar | Oneindia Kannada

   ಚಾಮರಾಜನಗರ, ಅಕ್ಟೋಬರ್ 11: ಸ್ವಾತಂತ್ರ್ಯ ಲಭಿಸಿ ಏಳು ದಶಕವಾಗಿದೆ. ಎಲ್ಲ ಕ್ಷೇತ್ರದಲ್ಲೂ ದೇಶ ಅಭಿವೃದ್ಧಿಯತ್ತ ಸಾಗಿದೆ. ಆದರೆ ಗಾಂಧೀಜಿ ಕಂಡ ಗ್ರಾಮ ಸ್ವರಾಜ್ಯದ ಕನಸು ಮಾತ್ರ ನನಸಾಗಿಲ್ಲ ಎಂಬುದಕ್ಕೆ ಗುಂಡ್ಲುಪೇಟೆ ತಾಲೂಕಿನ ಬೊಮ್ಮಲಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಗೊಳಪಡುವ 'ಉಪಕಾರ ಕಾಲೋನಿ' ಸಾಕ್ಷಿ.

   ಈ ಕಾಲೋನಿಯ ಹೆಸರು ಉಪಕಾರವಾಗಿದ್ದು, ಇಲ್ಲಿಗೊಮ್ಮೆ ತೆರಳಿದರೆ ಸರ್ಕಾರದ ಕಡೆಯಿಂದ ಯಾವುದೇ ಉಪಕಾರವಾಗಿಲ್ಲ ಎಂಬುದನ್ನು ಇಲ್ಲಿನ ಜನರು ಸಾಗಿಸುತ್ತಿರುವ ಶೋಚನೀಯ ಬದುಕು ಹೇಳುತ್ತದೆ. ಪಟ್ಟಣದ ರಂಗುರಂಗಿನ ಬದುಕಿನಿಂದ ದೂರವಾಗಿ ಕಾಡಂಚಿನಲ್ಲಿ ಬದುಕು ಕಟ್ಟಿಕೊಂಡಿರುವ ಇಲ್ಲಿನ ಜನರು ಸರಿಯಾದ ಸೂರು ಇಲ್ಲದೆ, ಹೊತ್ತಿನ ಕೂಳಿಗೂ ಪರದಾಡುತ್ತ ಜೀವನ ಸಾಗಿಸುವಂತಾಗಿದೆ.

   ಮಳೆ ಅವಾಂತರ: ಜಲಾವೃತವಾದ ಚಾಮಮರಾಜನಗರದ ಕೆಸ್ತೂರು

   ಕರ್ನಾಟಕ ತಮಿಳುನಾಡು ಹಾಗೂ ಕೇರಳ ರಾಜ್ಯಗಳ ಸಂಪರ್ಕ ಹೊಂದಿರುವ ಚಾಮರಾಜನಗರ ಜಿಲ್ಲೆಯ ಕಾಡಂಚಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಗಿರಿಜನರು ವಾಸಿಸುತ್ತಿದ್ದು, ಇವರು ಸಮಾಜದ ಮುಖ್ಯವಾಹಿನಿಗೆ ಬರಲು ಇನ್ನೂ ಕೂಡ ಸಾಧ್ಯವಾಗದೆ ಆದಿ ಮಾನವರಂತೆ ಸೌಲಭ್ಯವಂಚಿತ ಬದುಕು ಬದುಕುತ್ತಿದ್ದಾರೆ. ಸಾಧನೆಗಳ ದೊಡ್ಡ ಪಟ್ಟಿಯನ್ನೇ ನಮ್ಮ ಮುಂದೆ ನೀಡುವ ರಾಜಕಾರಣಿಗಳ ಆಶಸ್ವಾಸನೆಗಳು ಈಡೇರಿವೆಯಾ ಎಂಬುದು ಇಂತಹ ಕಾಲೋನಿಗಳಿಗೆ ಹೋಗಿ ನೋಡಿದರೆ ಗೊತ್ತಾಗಿಬಿಡುತ್ತದೆ!

   ಮೂಲಸೌಕರ್ಯವೇ ಇಲ್ಲ!

   ಮೂಲಸೌಕರ್ಯವೇ ಇಲ್ಲ!

   ರಸ್ತೆ, ಕುಡಿಯುವ ನೀರು, ವಿದ್ಯುತ್, ಉತ್ತಮ ಮನೆಗಳಿಲ್ಲದೆ ಮುರುಕು ಗುಡಿಸಿಲಿನಲ್ಲಿ ಜೀವನ ಸಾಗಿಸುತ್ತಾ ಕಾಯಿಲೆ ಬಂದರೆ ಆಸ್ಪತ್ರೆಗೆ ಹೋಗಲೂ ಸಾಧ್ಯವಾಗದೆ ಮನೆಯಲ್ಲೇ ನರಳುತ್ತಾ ಸಾಯುವ ಇವರ ಬದುಕಿನತ್ತ ಯಾರೂ ಗಮನಹರಿಸದಿರುವುದು ಮಾತ್ರ ದೇಶದ ದುರ್ದೈವವಾಗಿದೆ.

   ಆಸ್ಪತ್ರೆಗೆ ತೆರಳಲೂ ಹಣವಿಲ್ಲ!

   ಆಸ್ಪತ್ರೆಗೆ ತೆರಳಲೂ ಹಣವಿಲ್ಲ!

   ಇವತ್ತು ಉಪಕಾರ ಕಾಲೋನಿಯಲ್ಲಿ ಹಲವರು ವಿವಿಧ ಕಾಯಿಲೆಗಳಿಂದ ಬಳಲುತ್ತಿದ್ದಾರೆ. ಇವರ ಬಳಿ ಆಸ್ಪತ್ರೆಗೆ ತೆರಳಲು ಹಣವಿಲ್ಲ. ಹೀಗಾಗಿ ತಮಗೆ ತೋಚಿದ ಮನೆ ಔಷಧಿ ಮಾಡುತ್ತಾ ನರಳುತ್ತಿದ್ದಾರೆ. ಅದೃಷ್ಟ ವಶಾತ್ ಕಾಯಿಲೆ ವಾಸಿಯಾದರೆ ಬದುಕಿ ಉಳಿಯುತ್ತಾರೆ ಇಲ್ಲಾಂದ್ರೆ ಸಾವು ಗ್ಯಾರಂಟಿ!

   ವಿರಪ್ಪನ್ ನಿಂದ ನಲುಗಿದ್ದ ಕಾಲೋನಿ

   ವಿರಪ್ಪನ್ ನಿಂದ ನಲುಗಿದ್ದ ಕಾಲೋನಿ

   ಈ ಕಾಲೋನಿ ಹಿಂದೆ ವೀರಪ್ಪನ್ ಕಾರ್ಯಾಚರಣೆಯಿಂದ ನಲುಗಿತ್ತು. ಆಗ ಹೆಚ್ಚಿನ ಜನರು ಹೆದರಿ ಊರನ್ನೇ ಬಿಟ್ಟು ಹೋಗಿದ್ದರು. ಆಗಿನ ಸಂಕಷ್ಟದ ದಿನಗಳನ್ನು ಮೆಲುಕು ಹಾಕುವ ಹಿರಿಯರು ಸರ್ಕಾರ ತಮಗೇನು ಸೌಲಭ್ಯ ಕಲ್ಪಿಸಿಲ್ಲ ಎಂದು ದೂರುತ್ತಾರೆ. ಚುನಾವಣೆ ಬಂದಾಗ ಕಾಲೋನಿಗೆ ಬಂದು ಆಶ್ವಾಸನೆ ನೀಡಿ ಒಂದಷ್ಟು ಹಣ ನೀಡಿ ಹೋಗುವ ರಾಜಕಾರಣಿಗಳು ಮತ್ತೆ ಇತ್ತ ಮುಖ ಹಾಕದ ಕಾರಣದಿಂದಾಗಿ ಇಲ್ಲಿ ಅಭಿವೃದ್ಧಿ ಶೂನ್ಯವಾಗಿದೆ.

   ಊರತುಂಬಾ ಅನಕ್ಷರಸ್ಥರು!

   ಊರತುಂಬಾ ಅನಕ್ಷರಸ್ಥರು!

   ಕೂಲಿ ಮಾಡಿಕೊಂಡು ಜೀವನ ಸಾಗಿಸುವ ಕಾಲೋನಿ ಜನಕ್ಕೆ ಮೂಲಭೂತ ಸೌಲಭ್ಯವೇ ಇಲ್ಲದಾಗಿದೆ. ಹೆಚ್ಚಿನವರು ಓದುಬರಹ ಇಲ್ಲದ ಅನಕ್ಷರಸ್ಥರಾಗಿರುವುದರಿಂದ ಹೋರಾಟ ಮಾಡಿ ಸೌಲಭ್ಯಗಳನ್ನು ಪಡೆಯುವ ಶಕ್ತಿಯೂ ಇವರಿಗಿಲ್ಲವಾಗಿದೆ. ಹೀಗಾಗಿ ಕಷ್ಟವೋ ಸುಖವೋ ಕೂಲಿನಾಲಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಬಡವರ ಸೇವೆಗೆ ತಮ್ಮ ಜೀವವನ್ನೇ ಮುಡಿಪಾಗಿಟ್ಟಿದ್ದೇವೆ ಎಂದು ಭಾಷಣ ಬಿಗಿಯುವ ಮಂದಿ ಇಂತಹ ಕಾಲೋನಿಗಳಿಗೊಮ್ಮೆ ಭೇಟಿ ನೀಡಿ ಅವರ ಸಂಕಷ್ಟವನ್ನು ಹತ್ತಿರದಿಂದ ನೋಡಿಬರಲಿ ಎಂಬುದು ನಮ್ಮ ಆಶಯ.

   ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

   English summary
   Upakara colony in Chamarajanagara district which was once suffering by notorious dacoit Veerappan is now facing problems of lack of basic facility and infrastructure. Tribal people are expecting support from government.

   Oneindia ಬ್ರೇಕಿಂಗ್ ನ್ಯೂಸ್,
   ತಾಜಾ ಸುದ್ದಿ ತಕ್ಷಣವೇ ಪಡೆಯಿರಿ