ಚಾಮರಾಜನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಗುಂಡ್ಲುಪೇಟೆಯ ಪ್ರಿನ್ಸ್ ಹುಲಿ ಹತ್ಯೆ ಪ್ರಕರಣ: ಮೂವರ ಬಂಧನ

ಬಂಡೀಪುರ ಅಭಯಾರಣ್ಯದ ರಾಯಾಭಾರಿಯಾಗಿದ್ದ ಪ್ರಿನ್ಸ್ ಹುಲಿ ಸಾವನ್ನಪ್ಪಿದ್ದ ಸಂದರ್ಭ ಬಳಸಿಕೊಂಡು ಹುಲಿ ಮುಖ ವಿರೂಪಗೊಳಿಸಿ ಹಲ್ಲುಗಳನ್ನು ಕದ್ದೊಯ್ದು ಮಾರಾಟ ಮಾಡಿದ್ದ ಮೂವರು ಆರೋಪಿಗಳನ್ನು ಅರಣ್ಯ ಇಲಾಖೆ ಸಿಬ್ಬಂದಿ ಬಂಧಿಸಿದ್ದಾರೆ.

By ಚಾಮರಾಜನಗರ ಪ್ರತಿನಿಧಿ
|
Google Oneindia Kannada News

ಗುಂಡ್ಲುಪೇಟೆ, ಏಪ್ರಿಲ್ 27: ಬಂಡೀಪುರ ಅಭಯಾರಣ್ಯದ ರಾಯಾಭಾರಿಯಾಗಿದ್ದ ಪ್ರಿನ್ಸ್ ಹುಲಿ ಸಾವನ್ನಪ್ಪಿದ್ದ ಸಂದರ್ಭ ಬಳಸಿಕೊಂಡು ಹುಲಿ ಮುಖ ವಿರೂಪಗೊಳಿಸಿ ಹಲ್ಲುಗಳನ್ನು ಕದ್ದೊಯ್ದು ಮಾರಾಟ ಮಾಡಿದ್ದ ಮೂವರು ಆರೋಪಿಗಳನ್ನು ಅರಣ್ಯ ಇಲಾಖೆ ಸಿಬ್ಬಂದಿ ಬಂಧಿಸಿದ್ದಾರೆ.

ತಾಲೂಕಿನ ಕಾಡಂಚಿನ ಚೆಲುವರಾಯನಪುರ ಗ್ರಾಮದ ಸೋಮ ಮತ್ತು ಬೊಮ್ಮ, ಹುಂಡೀಪುರದ ಚಿನ್ನಸ್ವಾಮಿ ಎಂಬುವವರೆ ಬಂಧಿತ ಆರೋಪಿಗಳಾಗಿದ್ದಾರೆ. ಏಪ್ರಿಲ್ 2 ರಂದು ಬಂಡೀಪುರ ರಾಷ್ಟ್ರೀಯ ಉದ್ಯಾನದ ಕುಂದಕೆರೆ ವಲಯದ ಲೊಕ್ಕೆರೆ ಬೀಟ್ ನಲ್ಲಿ ಪ್ರಿನ್ಸ್ ಹುಲಿ ಸಾವನ್ನಪ್ಪಿತ್ತು. ಈ ಸಂದರ್ಭದಲ್ಲಿ ಕಾಡಿನೊಳಗೆ ಅಕ್ರಮವಾಗಿ ಪ್ರವೇಶ ಮಾಡಿದ್ದ ಸೋಮ ಮತ್ತು ಬೊಮ್ಮ ಸತ್ತ ಹುಲಿಯ ಮುಖದ ಭಾಗವನ್ನು ಮಚ್ಚಿನಿಂದ ಕತ್ತರಿಸಿ ಮೂರು ಹಲ್ಲುಗಳನ್ನು ಕದ್ದೊಯ್ದಿದ್ದರು.[ವಿಧಿ ವಿಜ್ಞಾನ ಪರೀಕ್ಷೆಗೆ 'ಪ್ರಿನ್ಸ್' ಹುಲಿಯ ಅವಶೇಷ]

Tiger Prince death case: 3 people arrested

ಘಟನೆಗೆ ಕಾರಣರಾದ ಮೂವರು ಆರೋಪಿಗಳನ್ನು ಬಂಧಿಸಿ, ಕೇಸು ದಾಖಲಿಸಿ ನ್ಯಾಯಾಲಯ ಬಂಧನಕ್ಕೆ ಒಪ್ಪಿಸಲಾಗಿದೆ.['ಪ್ರಿನ್ಸ್' ಮುಖ ಪತ್ತೆ, ಮುಗಿಯದ ಹುಲಿ ಸಾವಿನ ಗೊಂದಲ]

Tiger Prince death case: 3 people arrested
English summary
Tiger Prince of Gundlupet death case 3 people arrested today by Forest department officials in Bandipur.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X