• search
  • Live TV
ಚಾಮರಾಜನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಚಾಮರಾಜನಗರದ ಒಂಟಿಗುಡ್ಡದಲ್ಲಿ ಹುಲಿ- ಚಿರತೆಯ ಕಳೇಬರಗಳು ಪತ್ತೆ

By ಚಾಮರಾಜನಗರ ಪ್ರತಿನಿಧಿ
|

ಚಾಮರಾಜನಗರ, ಮೇ 28: ಗುಂಡ್ಲುಪೇಟೆ ತಾಲೂಕಿನ ಗ್ರಾಮೀಣ ಪ್ರದೇಶಗಳಲ್ಲಿ ಹುಲಿ ಉಪಟಳ ನೀಡುತ್ತಿದ್ದರೆ, ಸ್ಕಂದಗಿರಿ ಪಾರ್ವತಾಂಬಾ ಬೆಟ್ಟದ ಹಿಂಭಾಗದಲ್ಲಿ ಒಂಟಿಗುಡ್ಡದಲ್ಲಿ ಹುಲಿ ಮತ್ತು ಚಿರತೆಯ ಕಳೇಬರಗಳು ಪತ್ತೆಯಾಗಿವೆ. ಗುಂಡ್ಲುಪೇಟೆ ತಾಲೂಕಿನ ಸ್ಕಂದಗಿರಿ ಪಾರ್ವತಾಂಬಾ ಬೆಟ್ಟದ ಹಿಂಭಾಗದ ಒಂಟಿಗುಡ್ಡದಲ್ಲಿ ಭಾರೀ ಗಾತ್ರದ ಆರು ವರ್ಷದ ಹೆಣ್ಣು ಹುಲಿ ಹಾಗೂ ಏಳು ವರ್ಷದ ಗಂಡು ಚಿರತೆಯ ಕಳೇಬರಗಳು ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿವೆ.

ಕೆಲವು ಯುವಕರು ಕರುವಿನ ಮೇಲೆ ದಾಳಿ ನಡೆಸಿದ ಹುಲಿಯ ಹೆಜ್ಜೆಯ ಜಾಡು ಹಿಡಿದು ಹಿಂಬಾಲಿಸಿದಾಗ ಬೆಟ್ಟದ ಬಂಡೆಯ ಮೇಲೆ ಚಿರತೆಯ ಕಳೇಬರ ಪತ್ತೆಯಾಗಿದೆ. ಅಷ್ಟೇ ಅಲ್ಲದೆ ಸ್ವಲ್ಪ ಮುಂದೆ ತೆರಳಿದವರಿಗೆ ಪೊದೆಯಲ್ಲಿ ಹುಲಿಯ ಕಳೇಬರ ಪತ್ತೆಯಾಗಿದೆ.

ಎಚ್.ಡಿ.ಕೋಟೆ ಗ್ರಾಮಸ್ಥರಿಗೆ ತಲೆನೋವಾದ ಹುಲಿ -ಚಿರತೆ ಉಪಟಳ

ಈ ಬಗ್ಗೆ ಅರಣ್ಯ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದ ಹಿನ್ನೆಲೆಯಲ್ಲಿ ಸ್ಥಳಕ್ಕೆ ಭೇಟಿ ನೀಡಿದ ಗುಂಡ್ಲುಪೇಟೆ ಉಪವಿಭಾಗದ ಎಸಿಎಫ್ ಎಂ.ಎಸ್.ನಟರಾಜು, ಅರಣ್ಯ ಇಲಾಖೆಯ ಪಶುವೈದ್ಯ ನಾಗರಾಜು ಹಾಗೂ ಸಿಬ್ಬಂದಿ ಪರಿಶೀಲಿಸಿ, ಮರಣೋತ್ತರ ಪರೀಕ್ಷೆ ನಂತರ ಅಂತ್ಯಕ್ರಿಯೆ ನಡೆಸಿದ್ದಾರೆ. ಇವು ಕಾದಾಟದಲ್ಲಿ ಸಾವನ್ನಪ್ಪಿರಬಹುದು ಎಂದು ಸಂಶಯ ವ್ಯಕ್ತಪಡಿಸಲಾಗಿದೆ.

ತ್ರಿಯಂಭಕಪುರ-ಶಿಂಡನಪುರದಲ್ಲಿ ಹುಲಿಯ ಭಯ:

ತ್ರಿಯಂಭಕಪುರ-ಶಿಂಡನಪುರ ಸಮೀಪದ ಜಮೀನಿನಲ್ಲಿ ಮೇಯುತ್ತಿದ್ದ ಜಾನುವಾರು ಮೇಲೆ ಹಾಡಹಗಲೇ ಹುಲಿಯೊಂದು ದಾಳಿ ನಡೆಸಿ, ಕೊಂದು ಹಾಕಿದೆ. ಇದರಿಂದ ರೈತರು ಜಮೀನಿಗೆ ತೆರಳಲು ಭಯಪಡುತ್ತಿದ್ದಾರೆ.

ಉರುಳು ಹಾಕಿದ್ದು ಕಾಡುಹಂದಿಗೆ, ಆದರೆ ಸಿಕ್ಕಿಬಿದ್ದದ್ದು ಚಿರತೆ

ಮಂಗಳವಾರ ಮಧ್ಯಾಹ್ನ ಮಾದಪ್ಪ ಎಂಬುವರ ಜಮೀನಿನ ಬಳಿ ಮೇಯುತ್ತಿದ್ದ ಬಸಪ್ಪ ಎಂಬುವರಿಗೆ ಸೇರಿದ ಜಾನುವಾರಿನ ಮೇಲೆ ಹುಲಿ ದಾಳಿ ಮಾಡಿದೆ. ಈ ವೇಳೆ ಕರು ಕಿರುಚಿಕೊಂಡಿದೆ. ಕರುವಿನ ಅರಚಾಟದ ಶಬ್ದ ಕೇಳಿ, ಅಕ್ಕಪಕ್ಕದ ರೈತರು ಸ್ಥಳಕ್ಕೆ ಓಡಿ ಬಂದು, ಕಲ್ಲು ಎಸೆದಿದ್ದರಿಂದ ಹುಲಿಯು ಕರುವನ್ನು ಬಿಟ್ಟು ಓಡಿ ಹೋಗಿದೆ. ಬಳಿಕ ಅರಣ್ಯ ಇಲಾಖೆಗೆ ಗ್ರಾಮಸ್ಥರು ಮಾಹಿತಿ ನೀಡಿದ್ದಾರೆ.

ಅರಣ್ಯ ಇಲಾಖೆ ಸಿಬ್ಬಂದಿಯು ಕಚೇರಿಗೆ ಬಂದು ಲಿಖಿತ ಮನವಿ ಸಲ್ಲಿಸುವಂತೆ ಹೇಳಿದ್ದಾರೆ. ಇದು ಗ್ರಾಮಸ್ಥರ ಆಕ್ರೋಶಕ್ಕೂ ಕಾರಣವಾಗಿದೆ. ಹತ್ತಕ್ಕೂ ಹೆಚ್ಚಿನ ಕುಟುಂಬಗಳು ಜಮೀನುಗಳಲ್ಲಿ ನೆಲೆಸಿದ್ದು, ಹಾಲು ಹಾಕಲು, ಗೃಹಬಳಕೆಗೆ ಬೇಕಾದ ಸಾಮಾನು- ಸರಂಜಾಮು ಕೊಳ್ಳಲು ಗ್ರಾಮಗಳತ್ತ ಬರಬೇಕಾಗಿದೆ. ಅಲ್ಲದೆ ಮಕ್ಕಳು ಶಾಲೆಗಳಿಗೆ ಹೋಗಬೇಕಾಗಿರುವುದರಿಂದ ಗ್ರಾಮದ ಜನರು ಭೀತಿಗೊಳಗಾಗಿದ್ದಾರೆ.

ಹುಲಿ ದಾಳಿಯಿಂದಾಗಿ ಸಾರ್ವಜನಿಕರಲ್ಲಿ ಆತಂಕ ಹೆಚ್ಚಾಗಿದ್ದು, ಕತ್ತಲಾದ ನಂತರ ಮನೆಯಿಂದ ಹೊರಬರಲು ಭಯಪಡುವಂತಾಗಿದೆ.

English summary
Tiger and Leopard decomposed body found in Chamarajanagar on Tuesday. On the other incident, after Tiger cited in Triyanbhakapura people panic.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X