ಗುಂಡ್ಲುಪೇಟೆ ಠಾಣೆ ಆವರಣದಲ್ಲಿ ಪೊಲೀಸರು ಸಾಕಿದ್ದ ನಾಯಿಯಿಂದ ಮೂವರಿಗೆ ಕಡಿತ
ಚಾಮರಾಜನಗರ, ಜುಲೈ, 01: ಪೊಲೀಸ್ ಸಿಬ್ಬಂದಿ ಹಾಲು, ಬ್ರೆಡ್ ಕೊಟ್ಟು ಸಾಕಿದ್ದ ನಾಯಿಯಿಂದಲೇ ಮೂವರು ಕಡಿತಕ್ಕೊಳಗಾದ ಘಟನೆ ಗುಂಡ್ಲುಪೇಟೆ ಪೊಲೀಸ್ ಠಾಣಾ ಆವರಣದಲ್ಲಿ ನಡೆದಿದೆ.
ಠಾಣೆಯ ಇನ್ಸ್‌ಪೆಕ್ಟರ್, ಶಿಕ್ಷಕ ಹಾಗೂ ಮತ್ತೊಬ್ಬರಿಗೆ ಬೀದಿನಾಯಿ ಕಡಿದು ಗಾಯಗೊಳಿಸಿದ್ದು, ಠಾಣೆಯ ಸಿಬ್ಬಂದಿಯೇ ಆಹಾರ ನೀಡಿ ಸಾಕಿದ್ದ ಬೀದಿ ನಾಯಿ ಇದಾಗಿತ್ತು.

ಮೊಬೈಲ್ ಕಳೆದುಕೊಂಡಿದ್ದ ಶಿಕ್ಷಕರೊಬ್ಬರು ದೂರು ಕೊಡಲು ಠಾಣೆಗೆ ಬಂದಿದ್ದು, ಪೊಲೀಸ್ ಪೇದೆಯೊಬ್ಬರೊಂದಿಗೆ ಮಾತನಾಡುತ್ತಾ ನಿಂತಿದ್ದಾಗ ಹಿಂಬದಿಯಿಂದ ಬಂದು ಬಲಗಾಲಿಗೆ ಕಚ್ಚಿತ್ತು. ಇವರು ದೂರು ನೀಡುವುದನ್ನು ಬದಿಗೊತ್ತಿ ಆಸ್ಪತ್ರೆಗೆ ತೆರಳಿ ಚುಚ್ಚುಮದ್ದು ಪಡೆದಿದ್ದಾರೆ. ಇದಾದ ನಂತರ ಸ್ನೇಹಿತರೊಂದಿಗೆ ಬಂದಿದ್ದ ಮತ್ತೊಬ್ವನನ್ನು ನಾಯಿ ಕಚ್ಚಿದೆ.
ಅಷ್ಟರಲ್ಲೇ ಠಾಣೆಗೆ ಬಂದ ಪೊಲೀಸ್ ಇನ್ಸ್‌ಪೆಕ್ಟರ್ ಪರಶಿವಮೂರ್ತಿ ಅವರರನ್ನೂ ಬೀದಿ ನಾಯಿ ಕಚ್ಚಿದ್ದು ಇವರು ಕೂಡ ಚಿಕಿತ್ಸೆಗೆ ತೆರಳಿದ್ದಾರೆ. ಠಾಣೆ ಬಳಿಯೇ ಇದ್ದ ಬೀದಿ ನಾಯಿ ಈ ಹಿಂದೆ ಹುಚ್ಚುನಾಯಿ ಕಡಿತಕೊಳಕ್ಕಾಗಿದ್ದ ಹಿನ್ನಲೆ ಚುಚ್ಚುಮದ್ದು ಕೊಡಿಸಲಾಗಿತ್ತು. ಇದರಿಂದ ಯಾವುದೇ ತೊಂದರೆ ಮಾಡದೇ ನಾಯಿ ಠಾಣೆ ಬಳಿ ಇರುತ್ತಿತ್ತು.
ಆದರೆ ಸೋಮವಾರ (ಜುಲೈ 01) ಇದ್ದಕ್ಕಿದ್ದಂತೆ ಇನ್ಸ್ಪೆಕ್ಟರ್ ಸೇರಿ ಮೂವರನ್ನು ಕಡಿದು ಗಾಯಗೊಳಿಸಿತು. ನಂತರ ನಾಯಿಯನ್ನು ಹಿಡಿಸುವ ಪ್ರಯತ್ನ ನಡೆಸುವಷ್ಟರಲ್ಲಿ ನಾಯಿ ತಾನಾಗಾಗಿಯೇ ಮೃತಪಟ್ಟಿದೆ ಎನ್ನುವ ಮಾತಿ ಲಭ್ಯವಾಗಿದೆ.
ಹುಲಿಯನ್ನು ಅಟ್ಟಾಡಿಸಿದ ಗಜರಾಜ: ಕೆರೆಯಲ್ಲಿ ಮಲಗಿ ಕೂಲ್ ಕೂಲ್ ಆಗುತ್ತಿದ್ದ ಹುಲಿಯು ಆನೆಯನ್ನು ಕಂಡು ಕಂಗೆಟ್ಟು ಓಡಿದ ಘಟನೆ ಗುಂಡ್ಲುಪೇಟೆ ತಾಲೂಕಿನ ಬಂಡೀಪುರದ ಸಫಾರಿಯಲ್ಲಿ ಬುಧವಾರ (ಜೂನ್ 27) ಸಂಜೆ ನಡೆದಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ.
ಗಜರಾಜನ ನೋಡಿ ಹುಲಿರಾಯ ಕಾಲ್ಕಿತ್ತಿದ್ದನ್ನು ಕಂಡ ಸಫಾರಿಗರು ರೋಮಾಂಚಿತರಾಗಿದ್ದಾರೆ. ಬಂಡೀಪುರದಲ್ಲಿ ಕೆರೆಯಲ್ಲಿ ಬಿಸಿಲಿನ ತಾಪಕ್ಕೆ ಹುಲಿಯೊಂದು ಕೆರೆಗೆ ಇಳಿದು ರಿಲ್ಯಾಕ್ಸ್ ಮೂಡಿಗೆ ಜಾರಿತ್ತು. ದಾಹ ತಣಿಸಿಕೊಳ್ಳಲು ಬಂದ ಗಜರಾಜ ಹುಲಿಯನ್ನು ಕಂಡ ಕೂಡಲೇ ದಾಳಿ ಮಾಡುವಂತೆ ಮುನ್ನುಗ್ಗಿ ಹುಲಿಯನ್ನು ಅಟ್ಟಾಡಿಸಿ ಓಡಿಸಿದ್ದು, ಸದ್ಯ, ವೀಡಿಯೋ ಭಾರೀ ಸದ್ದು ಮಾಡುತ್ತಿದೆ.












Click it and Unblock the Notifications