BPL Card: ಇವರು ಅರ್ಜಿ ಹಾಕಿದರೇ ಪಟಾಪಟ್ ಕೈಸೇರಲಿದೆ ಬಿಪಿಎಲ್ ಪಡಿತರ ಚೀಟಿ
BPL Card: ಇ- ಶ್ರಮ್ ಕಾರ್ಡ್ ಹೊಂದಿರುವ ಕಾರ್ಮಿಕರಿಗೆ ಬಿಪಿಎಲ್ ಕಾರ್ಡ್ ನೀಡುವ ಸಂಬಂಧ ಇಂದಿನಿಂದ ಅಭಿಯಾನ ಆರಂಭಗೊಂಡಿದೆ. ನವೆಂಬರ್ 10ರ ವರೆಗೂ ಈ ಅಭಿಯಾನ ನಡೆಯಲಿದೆ. ಹಾಗಾದರೆ ಯಾರೆಲ್ಲ ಇದಕ್ಕೆ ಅರ್ಜಿ ಸಲ್ಲಿಸಬಹುದು ಹಾಗೂ ವಿಧಾನಗಳನ್ನು ಇಲ್ಲಿ ಬೀಡಲಾಗಿದೆ ಗಮನಿಸಿ.
ಈ ಕುರಿತು ಚಾಮರಾಜನಗರ ತಾಲೂಕು ಆಹಾರ ನಿರೀಕ್ಷಕ ದಿನಕರ್ ಮಾಹಿತಿ ಕೊಟ್ಟಿದ್ದು, ತಾಲೂಕಿನಲ್ಲಿ ಇ-ಶ್ರಮ್ ಕಾರ್ಡ್ ಹೊಂದಿರುವ 1,017 ಮಂದಿ ಕಾರ್ಮಿಕರು ಇದ್ದು, ಇವರೆಲ್ಲರಿಗೂ ಬಿಪಿಎಲ್ ಕಾರ್ಡುಗಳನ್ನು ನೀಡುವ ಬಗ್ಗೆ ಸುಪ್ರೀಂ ಕೋರ್ಟ್ ನಿರ್ದೇಶನವಿದೆ. ಕಾರ್ಮಿಕರು ಇದನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ತಿಳಿಸಿದರು.

ಈಗಾಗಲೇ ತಾಲೂಕಿನ ವಿವಿಧ ಹೋಬಳಿ ವ್ಯಾಪ್ತಿಯಲ್ಲಿ 1,017 ಇ-ಶ್ರಮ್ ಕಾರ್ಮಿಕರಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ. ಇಂತಹ ಕಾರ್ಮಿಕರು ಗ್ರಾಮ ಒನ್ ಸೇವಾ ಕೇಂದ್ರಗಳ ಮೂಲಕ, ಆಧಾರ್ ಕಾರ್ಡ್, ಆದಾಯ ಪ್ರಮಾಣ ಪತ್ರಗಳನ್ನು ಲಗತ್ತಿಸಿ ಅರ್ಜಿ ಸಲ್ಲಿಸಿದರೆ, ಅಂಥವರಿಗೆ ತಕ್ಷಣವೇ ಬಿಪಿಎಲ್ ಪಡಿತರ ಚೀಟಿಗಳನ್ನು ಮಂಜೂರು ಮಾಡಿಸಿಕೊಡಲಾಗುತ್ತದೆ ಎಂದರು.
ಈ ಅಭಿಯಾನವು ನವೆಂಬರ್ 10ರ ವರೆಗೆ ನಡೆಯಲಿದ್ದು, ಮೂರು ದಿನಗಳ ಕಾಲ ಆಹಾರ ಇಲಾಖೆ, ಕಂದಾಯ ಇಲಾಖೆ ಹಾಗು ಕಾರ್ಮಿಕ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಜಂಟಿಯಾಗಿ ಅಭಿಯಾನ ಕಾರ್ಯ ನಿರ್ವಹಿಸಲಿದ್ದಾರೆ ಎಂದು ತಿಳಿಸಿದರು.
ನಿರ್ಧಾರ ಬದಲಿಸಿದ ಸರ್ಕಾರ: ರಾಜ್ಯದಲ್ಲಿ ನಕಲಿ ದಾಖಲೆಗಳನ್ನು ನೀಡಿ ಪಡದ ಬಿಪಿಎಲ್ ಕಾರ್ಡ್‌ಗಳನ್ನು ರದ್ದು ಮಾಡಿ ಅಂತಹವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲು ಸರ್ಕಾರ ಮುದಾಗಿತ್ತು. ಆದರೆ ಇದೀಗ ಸರ್ಕಾರ ಈ ನಿರ್ಧಾರವನ್ನು ಬದಲಿಸಿ ಒಂದು ಅವಕಾಶ ನೀಡಿದೆ.
ರಾಜ್ಯದಲ್ಲಿ ಅರ್ಹರಲ್ಲದವರೂ ಬಿಪಿಎಲ್ ಕಾರ್ಡ್ ಪಡೆದಿರುವ ಬಗ್ಗೆ ಪರಿಶೀಲನೆ ನಡೆಯುತ್ತಿದೆ. ಅವರ ಕಾರ್ಡ್ ರದ್ದುಗೊಳ್ಳುವ ಆತಂಕ ಕೂಡ ಎದುರಾಗಿತ್ತು. ಆದರೇ ಇಂತವರಿಗೆ ಗುಡ್ ನ್ಯೂಸ್ ಎನ್ನುವಂತೆ ಬಿಪಿಎಲ್ ಕಾರ್ಡ್ ರದ್ದಾದರೂ, ಅವರನ್ನು ಎಪಿಎಲ್ ಕಾರ್ಡ್‌ಗೆ ವರ್ಗಾವಣೆ ಮಾಡುವುದಾಗಿ ಆಹಾರ ಸಚಿವ ವಿ.ಮುನಿಯಪ್ಪ ತಿಳಿಸುವ ಮೂಲಕ ಗುಡ್ ನ್ಯೂಸ್ ಕೊಟ್ಟಿದ್ದಾರೆ.
ಕೋಲಾರದ ಕಾಂಗ್ರೆಸ್ ನಗರಾಧ್ಯಕ್ಷ ಪ್ರಸಾದ್ ಬಾಬು ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಸರ್ವರ್ ಸಮಸ್ಯೆಯಿಂದಾಗಿ ಅನ್ನಭಾಗ್ಯ ಯೋಜನೆಯ ಹಣ ಈವರೆಗೆ ಬಿಡುಗಡೆ ಆಗಿಲ್ಲ. ಈ ಹಣವನ್ನು ಪ್ರತಿ ತಿಂಗಳು 10ರಂದು ಬಿಡುಗಡೆ ಮಾಡಲಾಗುತ್ತಿತ್ತು. ಸರ್ವರ್ ಸಮಸ್ಯೆಯಿಂದ ಈಗ ಬಿಡುಗಡೆ ಮಾಡಲಾಗಿಲ್ಲ. ಶೀಘ್ರದಲ್ಲೇ ಬಿಡುಗಡೆ ಆಗಲಿದೆ ಎಂದು ಭರವಸೆ ನೀಡಿದ್ದರು.
ಅದರಲ್ಲೂ ದಕ್ಷಿಣ ಭಾರತದಲ್ಲಿ ನಮ್ಮ ಕರ್ನಾಟಕದಲ್ಲೇ ಶೇಕಡ 80ರಷ್ಟು ಬಡತನ ಇದೆ. ಬಡತನ ರೇಖೆಗಿಂತ ಕಡಿಮೆ ಇರುವವರಿಗೆ ಬಿಪಿಎಲ್ ಕಾರ್ಡ್ ವಿತರಣೆ ಮಾಡಲಾಗುತ್ತಿದೆ. ಅರ್ಹರಲ್ಲದವರೂ ಬಿಪಿಎಲ್ ಕಾರ್ಡ್ ಪಡೆದಿರುವ ಬಗ್ಗೆ ಪರಿಶೀಲನೆ ಮಾಡಲಾಗುತ್ತಿದೆ. ಅವರ ಬಿಪಿಎಲ್ ಕಾರ್ಡ್ ರದ್ದುಗೊಳಿಸಿ, ಎಪಿಎಲ್ ಕಾರ್ಡ್‌ಗೆ ವರ್ಗಾವಣೆ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ ಎಂದು ಹೇಳಿದರು.












Click it and Unblock the Notifications