ಉರುಳಿದ ಟೆಂಪೋ ಟ್ರಾವಲರ್ ಸಿನಿಮೀಯ ರೀತಿಯಲ್ಲಿ ಪಾರು

By: ಚಾಮರಾಜನಗರ ಪ್ರತಿನಿಧಿ
Subscribe to Oneindia Kannada

ಚಾಮರಾಜನಗರ, ನವೆಂಬರ್ 15: ತಮಿಳುನಾಡಿನ ಊಟಿಯಿಂದ ಮೈಸೂರಿನತ್ತ ತೆರಳುತ್ತಿದ್ದ ಟೆಂಪೋ ಟ್ರಾವಲರ್ ನ ಟೈರ್ ಸ್ಫೋಟಗೊಂಡ ಪರಿಣಾಮ ಗುಂಡ್ಲು ಪೇಟೆ ಬಳಿ ಉರುಳಿಬಿದ್ದು ಇಬ್ಬರು ಪ್ರಯಾಣಿಕರು ಗಾಯಗೊಂಡಿದ್ದಾರೆ.

ಈ ಘಟನೆಯಿಂದ ಸುಮಾರು ಎಂಟಕ್ಕೂ ಹೆಚ್ಚು ಪ್ರಯಾಣಿಕರು ಯಾವುದೇ ಗಾಯಗಳಾಗದೆ ಆಶ್ಚರ್ಯಕರ ರೀತಿಯಲ್ಲಿ ಪಾರಾಗಿರುವುದು ಕುತೂಹಲಕ್ಕೆ ಕಾರಣವಾಗಿದೆ.

tempo

ತಾಲೂಕಿನ ಬೆಂಡಗಳ್ಳಿ ಗೇಟ್ ಬಳಿ ಮಂಗಳವಾರ ಸಂಜೆ 4ರ ಸಮಯದಲ್ಲಿ ಈ ದುರ್ಘಟನೆ ಸಂಭವಿಸಿದೆ. ತಮಿಳುನಾಡಿನ ಊಟಿಯಿಂದ ಪಟ್ಟಣದ ಮಾರ್ಗವಾಗಿ ಮೈಸೂರಿಗೆ ಸಾಗುತ್ತಿದ್ದ ಟೆಂಪೋ ಟ್ರಾವಲರ್ (ಕೆ.ಎ.02, ಎ.ಬಿ.2736 ) ಟೈರ್ ಸ್ಪೋಟಗೊಂಡಿದೆ. ಈ ವೇಳೆ ನಿಯಂತ್ರಣ ತಪ್ಪಿದ ಟ್ರಾವೆಲರ್ ಉರುಳಿ ಬಿದ್ದಿದೆ. ಆದರೆ ಟ್ರಾವೆಲರ್ ನಲ್ಲಿದ್ದ ಇಬ್ಬರು ಪ್ರಯಾಣಿಕರು ಮಾತ್ರ ಗಾಯಗೊಂಡಿದ್ದಾರೆ.

ಉಳಿದ 8 ಮಂದಿ ಪ್ರಯಾಣಿಕರು ಗಾಯಗಳಿಲ್ಲದೇ ಆಶ್ಚರ್ಯಕರ ರೀತಿಯಲ್ಲಿ ಪಾರಾಗಿದ್ದಾರೆ. ಈ ವೇಳೆ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನಗಳು ವಿರಳವಾದ ಪರಿಣಾಮ ಸಂಭಾವ್ಯ ಅನಾಹುತ ತಪ್ಪಿದೆ. ಟ್ರಾವೆಲರ್ ರಸ್ತೆಯಲ್ಲೇ ಉರುಳಿ ಬಿದ್ದಿದ್ದ ಪರಿಣಾಮ ಕೆಲಕಾಲ ಸಂಚಾರ ಸ್ಥಗಿತಗೊಂಡಿತ್ತು.

ಸ್ಥಳಕ್ಕೆ ಬೇಗೂರು ಪೋಲೀಸ್ ಠಾಣೆಯ ಎಎಸ್ಐ ದೊರೆರಾಜು ಭೇಟಿ ನೀಡಿ ಗಾಯಾಳುಗಳನ್ನು ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ಅನುಕೂಲ ಮಾಡಿಕೊಟ್ಟಿದ್ದು, ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Tamilnadu to Mysuru travling tempo traveller tair blast traveller fall down to road. cinematically escape all people, 2 injured in near gundlupet
Please Wait while comments are loading...