• search
  • Live TV
ಚಾಮರಾಜನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

'ಇಮ್ಮಡಿ ಮಹದೇವಸ್ವಾಮಿಗೆ ಮರಣ ದಂಡನೆ ವಿಧಿಸಬೇಕು'

By ಚಾಮರಾಜನಗರ ಪ್ರತಿನಿಧಿ
|

ಚಾಮರಾಜನಗರ, ಡಿಸೆಂಬರ್ 21: ಕಿಚ್ಚುಗುತ್ತಿ ಮಾರಮ್ಮ ದೇವಾಲಯದಲ್ಲಿ ವಿಷ ಮಿಶ್ರಿತ ಪ್ರಸಾದ ಸೇವಿಸಿ ಮೃತಪಟ್ಟವರಿಗೆ ಸುಳ್ವಾಡಿ ಗ್ರಾಮದಲ್ಲಿ ಸಾಮೂಹಿಕವಾಗಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಮಾರ್ಟಳ್ಳಿ ಸಮೀಪದ ಸುಳ್ವಾಡಿ ಗ್ರಾಮದ ಕಿಚ್ಚಗುತ್ತಿ ಮಾರಮ್ಮ ದೇವಾಲಯದಲ್ಲಿ ಕಳೆದ ಶುಕ್ರವಾರ ಗೋಪುರ ನಿರ್ಮಾಣ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ದುಷ್ಕರ್ಮಿಗಳು ಪ್ರಸಾದಕ್ಕೆ ವಿಷ ಹಾಕಿ ಮಾರಣ ಹೋಮ ನಡೆಸಿದ್ದರು. ಹೀಗಾಗಿ ಮೃತರ ಆತ್ಮಕ್ಕೆ ಶಾಂತಿ ಕೋರುವ ಸಲುವಾಗಿ ಸಾಮೂಹಿಕ ಶ್ರದ್ಧಾಂಜಲಿ ನಡೆಯಿತು.

ಚಾಮರಾಜನಗರ ವಿಷ ಪ್ರಸಾದ ಸೇವನೆ: ಮೃತಪಟ್ಟವರ ಸಂಖ್ಯೆ 16ಕ್ಕೆ ಏರಿದೆ

ಸಭೆಗೆ ಮೃತ ಕುಟುಂಬದ ಸಂಬಂಧಿಕರು ಬಂದಿದ್ದರು. ಇದೇ ವೇಳೆ ಮಾಧಮದವರೊಂದಿಗೆ ಮಾತನಾಡಿದ ಮೃತ ಕೃಷ್ಣ ನಾಯಕ ಮೈಲಿ ಬಾಯಿ ಮಗಳು ರಾಣಿಬಾಯಿ, ಈ ಘಟನೆಯ ಆರೋಪಿಯಾಗಿರುವ ಅಂಬಿಕಾಳನ್ನು ಪೊಲೀಸರು ನಮಗೆ ಒಪ್ಪಿಸಲಿ ಇಲ್ಲ ಅವರಿಗೆ ಮರಣ ದಂಡನೆ ಕೊಡಲಿ ಒಂದು ವೇಳೆ ಆರೋಪಿಗಳು ಕಾನೂನಿಂದ ತಪ್ಪಿಸಿಕೊಂಡರೆ ನಾವೆಲ್ಲರೂ ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ. ಅಂಬಿಕಾ ಸೇರಿದಂತೆ ಎಲ್ಲಾ ಆರೋಪಿಗಳು ಸಾವಿನ ನೋವು ತೋರಿಸಬೇಕೆಂದು ಕಣ್ಣೀರಿಟ್ಟರು.

ಸುಳ್ವಾಡಿ ಪ್ರಕರಣವನ್ನು ಸರ್ಕಾರವು ಗಂಭೀರವಾಗಿ ಪರಿಗಣಿಸಿ ಕಿಚ್ಚುಗುತ್ತಿ ಮಾರಮ್ಮ ಟ್ರಸ್ಟ್‌ನ್ನು ರದ್ದು ಮಾಡಿ ಮುಜರಾಯಿ ಇಲಾಖೆಗೆ ಸೇರಿಸಿಕೊಳ್ಳಬೇಕು, ಸಾಲೂರು ಮಠದ ಪ್ರಾವಿತ್ರ್ಯತೆ ಹಾಳುಮಾಡಿದ ಇಮ್ಮಡಿಮಹದೇವಸ್ವಾಮಿಗೆ ಮರಣ ದಂಡನೆ ನೀಡಬೇಕು ಎಂದು ಆಗ್ರಹಿಸಿದ್ದಾರೆ. ಮುಂದೆ ಓದಿ...

ಟ್ರಸ್ಟ್ ನಿಧಿಯಿಂದಲೇ ಪರಿಹಾರ ನೀಡಿ

ಟ್ರಸ್ಟ್ ನಿಧಿಯಿಂದಲೇ ಪರಿಹಾರ ನೀಡಿ

ಸುಳ್ವಾಡಿ ಗ್ರಾಮದ ಸರ್ಕಾರಿ ಪ್ರಾಥಮಿಕ ಆಸ್ಪತ್ರೆಗೆ ನುರಿತ ವೈದ್ಯರ ನೇಮಕ, ಹಾಗೂ ನೊಂದ ಮೃತಪಟ್ಟ ಕುಟುಂಬಗಳಿಗೆ ಟ್ರಸ್ಟ್ ನಿಧಿಯಿಂದಲೇ ಪರಿಹಾರ ನೀಡಬೇಕೆಂದು ರಾಜೇಂದ್ರ ಆಗ್ರಹಿಸಿದ್ದಾರೆ.

ಇಡೀ ಸಮಾಜಕ್ಕೆ ಕಳಂಕ

ಇಡೀ ಸಮಾಜಕ್ಕೆ ಕಳಂಕ

ಕಿಚ್ಚಗುತ್ತಿ ಪ್ರಕರಣ ಕ್ಷಮಿಸಲಾಗದ ಅಪರಾಧವಾಗಿದೆ ಘಟನೆಯ ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಬೇಕು ಇಂತಹ ಘಟನೆ ಮರುಕಳಿಸದಂತೆ ಎಚ್ಚರಿಕೆ ವಹಿಸಬೇಕು ಗುರು ಸ್ಥಾನದಲ್ಲಿರುವ ವ್ಯಕ್ತಿ ಇಂತಹ ನೀಚ ಕೆಲಸಕ್ಕೆ ಮುಂದಾಗಿರೋದು ಇಡೀ ಸಮಾಜಕ್ಕೆ ಕಳಂಕವಾಗಿದೆ ಅಂತ ಬೋಸ್ಕೋ ಹೇಳುತ್ತಾರೆ. ಕಿಚ್ಚುಗುತ್ತಿ ಮಾರಮ್ಮ ದೇವಾಲಯದಲ್ಲಿ ನಡೆದ ದುರಂತ ಜನರ ಮನಸ್ಸಿನಲ್ಲಿ ಇನ್ನೂ ಹಾಗೆಯೇ ಉಳಿದು ಕೊಂಡಿದ್ದು, ಆರೋಪಿಗಳ ವಿರುದ್ಧ ಕಾನೂನಿನ ಕ್ರಮ ಕೈಗೊಳ್ಳಲಿ ಎಂದು ಆಗ್ರಹಿಸಿದ್ದಾರೆ.

ಪೊಲೀಸರು ಸುಳ್ವಾಡಿ ವಿಷಪ್ರಸಾದ ಪ್ರಕರಣ ಭೇದಿಸಿದ್ದು ಹೇಗೆ ?

ಮೃತಪಟ್ಟವರ ಸಂಖ್ಯೆ ಏರಿಕೆ

ಮೃತಪಟ್ಟವರ ಸಂಖ್ಯೆ ಏರಿಕೆ

ಚಾಮರಾಜನಗರದ ಸುಳವಾಡಿ ಹನೂರಿನ ಕಿಚ್ಚುಗುತ್ತಿ ಮಾರಮ್ಮ ದೇವಾಲಯದಲ್ಲಿ ವಿಷ ಪ್ರಸಾದ ಸೇವಿಸಿ ಮೃತಪಟ್ಟಿರುವವರ ಸಂಖ್ಯೆ ಇದೀಗ 16ಕ್ಕೆ ಏರಿದೆ. ಮಾರ್ಟಳ್ಳಿ ನಿವಾಸಿ ನಾಗೇಶ್(45) ಚಿಕಿತ್ಸೆ ಫಲಿಸದೆ ಇಂದು ಶುಕ್ರವಾರ ಜೆಎಸ್ಎಸ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

ಡಿಸ್ಚಾರ್ಜ್ ಮಾಡಲಾಗಿದೆ ಎಂಬ ಆರೋಪ

ಡಿಸ್ಚಾರ್ಜ್ ಮಾಡಲಾಗಿದೆ ಎಂಬ ಆರೋಪ

ಸುಳ್ವಾಡಿ ಮಾರಮ್ಮ ದುರಂತ ಪ್ರಕರಣದಲ್ಲಿ ಅಸ್ವಸ್ತರಾಗಿದ್ದ ರೋಗಿಗಳನ್ನು ಖಾಸಗಿ ಆಸ್ಪತ್ರೆಯಿಂದ ಬಲವಂತವಾಗಿ ಡಿಸ್ಚಾರ್ಜ್ ಮಾಡಲಾಗಿದೆ ಎಂಬ ಆರೋಪವೂ ಸದ್ಯ ಕೇಳಿ ಬಂದಿದೆ. ದೊರೆಸ್ವಾಮಿ ಮೇಡು ಗ್ರಾಮದ ಆರ್ಯೆ(55) ಎಂಬುವರು ಇದೀಗ ಸಂಪೂರ್ಣವಾಗಿ ಗುಣಮುಖರಾಗದಿದ್ದರೂ ಅವರನ್ನು ಖಾಸಗಿ ಆಸ್ಪತ್ರೆಯೊಂದು ಬಲವಂತವಾಗಿ ಡಿಸ್ಚಾರ್ಜ್ ಮಾಡಿದೆ ಎಂದು ಹೇಳಲಾಗಿದೆ.

ಇಮ್ಮಡಿ ಮಹದೇವಸ್ವಾಮಿ, ಅಂಬಿಕಾ ದ್ವೇಷಕ್ಕೆ 15 ಅಮಾಯಕ ಜೀವ ಬಲಿ

English summary
Sulwadi villagers express condolence to the people who died in temple tragedy in Chamarajangar.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X