ಚಾಮರಾಜನಗರ: ಒಂದೇ ದಿನ 7 ಬಾಲ್ಯ ವಿವಾಹಗಳಿಗೆ ತಡೆ

ಚಾಮರಾಜನಗರ, ಜೂನ್ 15: ಚಾಮರಾಜನಗರ ಜಿಲ್ಲೆಯ ಹಲವೆಡೆ ಒಂದೇ ದಿನ 7 ಕಡೆ ಬಾಲ್ಯವಿವಾಹ ಮಾಡಲು ಸಿದ್ಧತೆ ನಡೆಸಿದ್ದ ಪಾಲಕರಿಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಮತ್ತು ಸ್ವಯಂ ಸೇವಾ ಸಂಸ್ಥೆಯವರು ಬುದ್ಧಿಮಾತು ಹೇಳುವ ಮೂಲಕ ಮದುವೆ ನಿಲ್ಲಿಸಿದ್ದಾರೆ.

Recommended Video

      ಕರೋನ ವೈರಸ್ ಪವರ್ ಕಡಿಮೆ ಅಗಿದ್ಯಂತೆ | Oneindia Kannada

      ಮಲೆಮಹದೇಶ್ವರ ಬೆಟ್ಟದ ತಪ್ಪಲಿನ ಇಂಡಿಗನತ್ತ ಗ್ರಾಮದಲ್ಲಿ 16 ವರ್ಷದ ಬಾಲಕಿಗೆ ಮದುವೆ ಮಾಡಲು ಪೋಷಕರು ಸಿದ್ಧತೆ ನಡೆಸಿದ್ದರು. ಮಾಹಿತಿ ತಿಳಿದ ಕೂಡಲೇ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮತ್ತು ಮಕ್ಕಳ ಸಹಾಯವಾಣಿ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಮದುವೆ ನಿಲ್ಲಿಸಿದ್ದಾರೆ.

      ಹನೂರು ತಾಲ್ಲೂಕಿನ ಲೊಕ್ಕನಹಳ್ಳಿ ಗ್ರಾಮ, ಚಾಮರಾಜನಗರ ತಾಲ್ಲೂಕಿನ ಅರಕಲವಾಡಿ ಗ್ರಾಮ, ವೈ.ಕೆ.ಮೋಳೆ, ಅಮಚವಾಡಿ ಹಾಗೂ ಶೆಟ್ಟಿಹಳ್ಳಿಯ ಬಾಲ್ಯವಿವಾಹಗಳು ನಡೆಯದಂತೆ ಅಧಿಕಾರಿಗಳು ತಡೆದಿದ್ದಾರೆ. ಒಡಿಪಿ ಸಂಸ್ಥೆಯವರೂ ಸಹ ತಕ್ಷಣ ಸ್ಥಳಗಳಿಗೆ ತೆರಳಿ ಎಲ್ಲ ಮದುವೆಗಳನ್ನು ನಿಲ್ಲಿಸಿದ್ದಾರೆ.

      Stopped 7 Child Marriages On Same Day In Chamarajanagara

      ಕಳೆದ ತಿಂಗಳು 18 ಹಾಗೂ ಈ ತಿಂಗಳು 20 ಬಾಲ್ಯವಿವಾಹಗಳನ್ನು ಮಕ್ಕಳ ಸಹಾಯವಾಣಿ ನಿಲ್ಲಿಸಿದೆ. ಆದಾಗ್ಯೂ ಮೇ ತಿಂಗಳಲ್ಲಿ ಮೂರು ಬಾಲ್ಯ ವಿವಾಹಗಳು ನಡೆದಿದ್ದು, ಎರಡು ಪ್ರಕರಣಗಳಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+