ಚಾಮರಾಜನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪ್ರತಿ ಚುನಾವಣೆಗೆ ಸಿದ್ದು ಕ್ಷೇತ್ರ ಬದಲಿಸುವುದು ಸರಿಯಲ್ಲ: ಸುಧಾಕರ್ ವ್ಯಂಗ್ಯ

By ಚಾಮರಾಜನಗರ ಪ್ರತಿನಿಧಿ
|
Google Oneindia Kannada News

ಚಾಮರಾಜನಗರ, ಜುಲೈ 6: ''ಸಿದ್ದರಾಮಯ್ಯ ರಾಜ್ಯದ ಸಿಎಂ ಆಗಿದ್ದವರು, ಅವರು ಚುನಾವಣೆಯಿಂದ ಚುನಾವಣೆಗೆ ಕ್ಷೇತ್ರ ಬದಲಿಸುವುದು ಸರಿಯಲ್ಲ'' ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಹೇಳಿದರು.

ಯಳಂದೂರು ತಾಲೂಕಿನ ಬಿಳಿಗಿರಿರಂಗನ ಬೆಟ್ಟದಲ್ಲಿ ಅವರು ಮಾತನಾಡಿ, ''ರಾಜ್ಯದ ಸಿಎಂ ಅಗಿದ್ದ ಸಿದ್ದರಾಮಯ್ಯರನ್ನು 224 ಕ್ಷೇತ್ರದಲ್ಲೂ ಕರೆಯೋದು ಸರ್ವೇ ಸಾಮಾನ್ಯ. ಆದರೆ ಸಿಎಂ ಆಗಿದ್ದವರನ್ನು ಅವರ ಜಿಲ್ಲೆಯ ಜನತೆ ಕೈ ಬಿಟ್ಟರೂ ಬೇರೆ ಜಿಲ್ಲೆಯವರು ಕೈ ಹಿಡಿದರು. ಈಗ ಬಾದಾಮಿಯಿಂದಲೂ ಬೇರೆ ಕಡೆ ಹೋಗ್ತೀನಿ ಅಂದ್ರೆ ಏನು ಸಂದೇಶ ಕೊಡ್ತಾರೆ. ದೊಡ್ಡ ನಾಯಕರು, ಅಪಾರ ರಾಜಕೀಯ ಅನುಭವವುಳ್ಳವರು. ಇಂತವರು ಚುನಾವಣೆಯಿಂದ ಚುನಾವಣೆಗೆ ಬೇರೆ ಕ್ಷೇತ್ರ ಹುಡುಕುವುದು ಸರಿಯಲ್ಲ'' ಎಂದು ವ್ಯಂಗ್ಯ ಮಾಡಿದ್ದಾರೆ.

ನೆನಗುದಿಗೆ ಬಿದ್ದ ಕಾಮಗಾರಿ, ಸಿಎಂ ಆದ್ಮೇಲೆ ರಾಯಚೂರು ಮರೆತ ಬೊಮ್ಮಾಯಿನೆನಗುದಿಗೆ ಬಿದ್ದ ಕಾಮಗಾರಿ, ಸಿಎಂ ಆದ್ಮೇಲೆ ರಾಯಚೂರು ಮರೆತ ಬೊಮ್ಮಾಯಿ

ಇದೇ ವೇಳೆ, ಪಿಎಸ್ಐ ಅಕ್ರಮ ನೇಮಕಾತಿ ವಿಚಾರ ಸಂಬಂಧ ಗೃಹ ಸಚಿವರ ರಾಜೀನಾಮೆಗೆ ಕಾಂಗ್ರೆಸ್ ಆಗ್ರಹದ ಬಗ್ಗೆ ಮಾತನಾಡಿ, ಅನೇಕ ವರ್ಷಗಳಿಂದ ನೋಡಿದ್ದೇವೆ ಈ ರೀತಿ ಗಂಭೀರ ತನಿಖೆಯಾಗಿಲ್ಲ. ಹಿರಿಯ ಅಧಿಕಾರಿಗಳನ್ನ ಅರೆಸ್ಟ್ ಮಾಡಿರುವ ಯಾವುದಾದರು ಸರಕಾರ ಇದ್ದರೆ ಅದು ಬಿಜೆಪಿ ಸರ್ಕಾರ. ಈ ವಿಚಾರವಾಗಿ ಮಾತನಾಡಲು ಕಾಂಗ್ರೆಸ್ ನವರಿಗೆ ನೈತಿಕತೆ ಇಲ್ಲ. ಎಲ್ಲಾ ತನಿಖೆ ಅಪಾದನೆ ಮುಚ್ಚಿ ಹಾಕ್ಕಿದ್ದು ಕಾಂಗ್ರೆಸ್ ಸರಕಾರ. ಕೆಂಪಣ್ಣ ಆಯೋಗ, ರಿಡೋ ಏನಾಯ್ತು? ಈ ಬಗ್ಗೆ ಅವರು ಮಾತನಾಡದೆ ಇದ್ರೆ‌ ಕಾಂಗ್ರೆಸ್ ನವರಿಗೆ ಒಳ್ಳೆಯದು ಎಂದು ಕೈ ಪಕ್ಷಕ್ಕೆ ತಿರುಗೇಟು ನೀಡಿದರು.

Siddaramaiah Change Constituency Every Election: Dr K.Sudhakar teases

ಕೋವಿಡ್ ನಂತರದ ಆರೋಗ್ಯ ಸಮಸ್ಯೆ ಉಂಟಾಗುತ್ತಿರುವ ಪ್ರಶ್ನೆಯೊಂದಕ್ಕೆ ಅವರು ಪ್ರತಿಕ್ರಿಯಿಸಿ, ''ಕೆಲವು ಕಡೆ ಹೃದಯ ಸಮಸ್ಯೆ ಕಂಡುಬಂದಿದೆ. ಅದು ಕೋವಿಡ್ ನಿಂದಲೇ ಅಂತಾ ಹೇಳುವುದಕ್ಕಾಗಲ್ಲ. ಇದರ ಬಗ್ಗೆ ಸುದೀರ್ಘ ಅಧ್ಯಯನ ನಡೆಯಬೇಕಿದೆ. ಕೋವಿಡ್ ಬಂದು ಎರಡು ವರ್ಷವಾಗಿದೆ, ಅದರ ಬಗ್ಗೆ ಅಧ್ಯಯನಕ್ಕೆ ಬಹಳ ವರ್ಷ ಬೇಕು. ಆಯಾಸ, ಮರೆವು, ಹೃದಯ ಸಮಸ್ಯೆ, ರಕ್ತನಾಳದ ಸಮಸ್ಯೆ ಈ ರೀತಿಯ ಸಮಸ್ಯೆ ಕಂಡು ಬಂದಿದೆ. ನೇರವಾಗಿ ಕೋವಿಡ್ ನಂತರ ಬಂದಿದೆ ಅಂತಾ ಹೇಳಲು ಸಾಧ್ಯವಿಲ್ಲ. ಅಧ್ಯಯನದ ಅಂತಿಮ ವರದಿ ಬಂದ ನಂತರ ಗೊತ್ತಾಗುತ್ತೆ '' ಎಂದರು. ಆಮ್ಲಜನಕ ದುರಂತದ ಸಂಬಂಧ ಕೇಳಿದ್ದ ಪ್ರಶ್ನೆಗೆ ಹಾರಿಕೆ ಉತ್ತರ ಕೊಟ್ಟು ತೆರಳಿದರು.

ಕಾಂಗ್ರೆಸ್ ಬಿಟ್ಟು, ಜೆಡಿಎಸ್ ಸೇರುವ ವಿಚಾರ: ಕೆ.ಎಚ್.ಮುನಿಯಪ್ಪ ಸ್ಪಷ್ಟನೆಕಾಂಗ್ರೆಸ್ ಬಿಟ್ಟು, ಜೆಡಿಎಸ್ ಸೇರುವ ವಿಚಾರ: ಕೆ.ಎಚ್.ಮುನಿಯಪ್ಪ ಸ್ಪಷ್ಟನೆ

ಮುಟ್ಟಿನ ಕಪ್‌ ಪರಿಸರ ಸ್ನೇಹಿ
''ಸುರಕ್ಷಿತ ಋತುಚಕ್ರ ನಿರ್ವಹಣೆಗೆ ಮೈತ್ರಿ ಮುಟ್ಟಿನ ಕಪ್‌ ಶುಚಿ ಯೋಜನೆಯನ್ನು ಸರಕಾರ ಜಿಲ್ಲೆಯ ಯಳಂದೂರು ತಾಲೂಕಿ ನ ಬಿಳಿರಂಗನ ಬೆಟ್ಟದಲ್ಲಿ ಚಾಲನೆ ನೀಡಲಾಯಿತು. ಈ ಕುರಿತು ಮಾತನಾಡಿದ ಆರೋಗ್ಯ ಸಚಿವ ಸುಧಾಕರ್, ಮುಟ್ಟಿನ ಕಪ್‌ಗಳನ್ನು ಈಗಾಗಲೇ ವಿದೇಶದಲ್ಲಿ ಬಳಕೆ ಮಾಡಲಾಗುತ್ತಿದೆ. ವಿದ್ಯಾವಂತರು ಮಾತ್ರ ಪ್ರಸ್ತುತ ಉಪಯೋಗಿಸುತ್ತಿದ್ದಾರೆ. ಇದರಿಂದ ಈ ಬಗ್ಗೆ ಅರಿವು ಮೂಡಿಸುವ ಕೆಲಸ ಮಾಡುತ್ತೇವೆ. ಈ ಕಪ್‌ ಅನ್ನು 8 ವರ್ಷದವರೆಗೆ ಬಳಕೆ ಮಾಡಬಹುದು. ಸ್ಯಾನಿಟರಿ ಪ್ಯಾಡ್‌ಗಳು ಪರಿಸರಕ್ಕೆ ತೊಂದರೆಯಾಗುತ್ತಿದೆ'' ಎಂದು ತಿಳಿಸಿದರು.

English summary
Siddaramaiah was former Chief minister, but he change the constituency every every election its not good. Health minister Dr K Sudhakar said in Chamarajanagar.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X