Bhagyalakshmi Serial: ಈ ಸೌಭಾಗ್ಯಕ್ಕೆ ಭಾಗ್ಯ ಯಾಕೆ 2ನೇ ಮದುವೆ ಆಗಬೇಕಿತ್ತು - ಹೊಸ ಟ್ವಿಸ್ಟ್‌ಗೆ ಪ್ರೇಕ್ಷಕರು ಶಾಕ್

Bhagyalakshmi Serial: ಭಾಗ್ಯಲಕ್ಷ್ಮೀ ಸೀರಿಯಲ್‌ನಲ್ಲಿ ಭಾಗ್ಯ ಹೊಸ ಮನೆಗೆ ಹೋದರೂ ಸಂಕಷ್ಟ ತಪ್ಪುತ್ತಿಲ್ಲ. ಈ ಸಂಪತ್ತಿಗೆ ಭಾಗ್ಯ ಯಾಕೆ ಎರಡನೇ ಮದುವೆ ಆಗಬೇಕಿತ್ತು ಎಂದು ನೆಟ್ಟಿಗರು ಪ್ರಶ್ನೆ ಮಾಡುತ್ತಿದ್ದಾರೆ. ಹೊಸ ಎಪಿಸೋಡ್‌ನಲ್ಲಿ ಭಾಗ್ಯಾಗೆ ಸಾಲು ಸಾಲು ಸವಾಲುಗಳು ಎದುರಾಗಿದ್ದು, ಭಾಗ್ಯಲಕ್ಷ್ಮೀ ಸೀರಿಯಲ್ ಪ್ರೇಕ್ಷಕರು ದಂಗಾಗಿದ್ದಾರೆ. ಕನ್ನಡದ ಪ್ರಮುಖ ಸೀರಿಯಲ್‌ಗಳಲ್ಲಿ ಒಂದಾಗಿರುವ ಭಾಗ್ಯಲಕ್ಷ್ಮೀ ಸೀರಿಯಲ್‌ನ ಹೊಸ ಎಪಿಸೋಡ್‌ಗಳಲ್ಲಿ ಏನಿದೆ ಹಾಗೂ ಇದಕ್ಕೆ ಪ್ರೇಕ್ಷಕರು ಏನು ಹೇಳುತ್ತಿದ್ದಾರೆ ಎನ್ನುವ ಸಂಪೂರ್ಣ ವಿವರ ಇಲ್ಲಿದೆ.

ಕನ್ನಡದ ಪ್ರಮುಖ ಸೀರಿಯಲ್‌ಗಳಲ್ಲಿ ಒಂದಾಗಿರುವ ಭಾಗ್ಯಲಕ್ಷ್ಮೀ ಸೀರಿಯಲ್ ಹಲವು ತಿರುವುಗಳನ್ನು ಪಡೆದುಕೊಂಡಿದೆ. ಭಾಗ್ಯಲಕ್ಷ್ಮೀಯಲ್ಲಿ ಭಾಗ್ಯ - ಆದಿ ವಿವಾಹವಾಗಿದೆ. ತಾಂಡವ್‌ನ ಕಿರಿಕಿರಿ - ಕಿರುಕುಳದಿಂದ ತಪ್ಪಿಸಿಕೊಂಡು ಭಾಗ್ಯ - ಆದಿ ವಿವಾಹವಾಗಿತ್ತು. ಈ ಹಿಂದೆ ಭಾಗ್ಯಗೆ ಹಲವು ಸಂಕಷ್ಟಗಳು ಎದುರಾಗಿದ್ದವು. ಎಲ್ಲಾ ಸಂಕಷ್ಟಗಳನ್ನು ದಾಟಿಕೊಂಡು ಭಾಗ್ಯ - ಆದಿ ವಿವಾಹವಾಗಿದೆ. ಆದರೆ ವಿವಾಹವಾಗಿ ವರನ ಮನೆಗೆ ಬಂದ ಬೆನ್ನಲ್ಲೇ ಇಲ್ಲೂ ಭಾಗ್ಯಾಗೆ ಸಾಲು ಸಾಲು ಸವಾಲುಗಳು ಎದುರಾಗಿವೆ. ಈ ದೃಶ್ಯಗಳನ್ನು ನೋಡಿರು ಪ್ರೇಕ್ಷಕರು ಈ ಭಾಗ್ಯಕ್ಕೆ ಭಾಗ್ಯ ಯಾಕೆ ಎರಡನೇ ಮದುವೆ ಆಗಬೇಕಾಗಿತ್ತು ಅಂತ ಕೇಳ್ತಾ ಇದ್ದಾರೆ.

Bhagyalakshmi Serial

ಆದಿ ಮನೆಗೆ ಭಾಗ್ಯ ಬಂದ ಮೇಲೆ ವಿಶೇಷ ಪೂಜೆ ನಡೆಯುತ್ತಿದೆ. ಈ ಪೂಜೆಯಲ್ಲಿ ಭಾಗ್ಯ ಪಾಲ್ಗೊಳ್ಳಬಾರದು ಎಂದು ಆದಿ ಮನೆಯವರು ಬಾರೀ ಕಿರುಕುಳ ಕೊಡುತ್ತಿದ್ದಾರೆ. ಅದರಲ್ಲೂ ಆದಿಯ ಸೋದರತ್ತೆ ಹಾಗೂ ಕನ್ನಿಕಾಳ ಅಧಿಕಪ್ರಸಂಗತನ ಹೆಚ್ಚಾಗಿದೆ. ಈ ರೀತಿ ಇರುವಾಗಲೇ ಭಾಗ್ಯ ಪೂಜೆಯಲ್ಲಿ ಭಾಗಿಯಾಗಬಾರದು ಅಂತ ಆಕೆಯ ಸೀರೆಯನ್ನು ಸುಟ್ಟು ಹಾಕಿದ್ದರು. ಅಲ್ಲದೆ ನೆಕ್ಸೆಸ್‌ ಸಹ ಮುರಿದು ಹೋಗಿತ್ತು. ಆದರೆ ಭಾಗ್ಯ ಈ ಸವಾಲನ್ನು ಧೈರ್ಯವಾಗಿ ಎದುರಿಸಿದ್ದಳು. ಬೇಗ ಬೇಗ ಸುಟ್ಟ ಸೀರೆಗೆ ಹೊಲಿಗೆ ಹಾಕಿಕೊಂಡ ಆದಿಯೊಂದಿಗೆ ಬಂದಿದ್ದಾಳೆ. ಇದನ್ನು ನೋಡಿ ಆದಿ ಮನೆಯವರು ಶಾಕ್ ಆಗಿದ್ದಾರೆ.

ಭಾಗ್ಯಗೆ ಪರಂಪರೆಯ ಪರೀಕ್ಷೆ

ಇನ್ನು ಭಾಗ್ಯಲಕ್ಷ್ಮೀ ಸೀರಿಯಲ್‌ನಲ್ಲಿ ಭಾಗ್ಯಾಗೆ ಪರಂಪರೆಯ ಪರೀಕ್ಷೆ ಶುರುವಾಗಿದೆ. ಪೂಜಾರಿಗಳು ಭಾಗ್ಯಗೆ ಹೋಗಿ ನೈವೇದ್ಯ ಮಾಡಿಕೊಂಡು ಬನ್ನಿ ಅಂತ ಹೇಳಿದ್ದಾರೆ. ಆಗ ಆದಿಯ ಸೋದರತ್ತೆ ನೈವೇದ್ಯದೊಂದಿಗೆ ಮನೆಯವರಿಗೆಲ್ಲರಿಗೂ ಅಡುಗೆ ಮಾಡಬೇಕು ಅಂತ ಹೇಳಿದ್ದಾರೆ. ಅಲ್ಲದೆ ಎಲ್ಲರಿಗೂ ಅಡುಗೆ - ದೇವರಿಗೆ ನೈವೇದ್ಯ ಮಾಡುವ ಸಂದರ್ಭದಲ್ಲಿ ಯಾರ ಸಹಾಯವನ್ನೂ ಪಡೆದುಕೊಳ್ಳಬಾರದು ಅಂತ ಹೇಳಿದ್ದಾರೆ. ಈ ಮೂಲಕ ಭಾಗ್ಯಾಗೆ ಪರಂಪರೆಯ ಪರೀಕ್ಷೆ ಶುರುವಾಗಿದೆ ಎಂದು ಹೇಳಲಾಗಿದೆ. ಇನ್ನು ಭಾಗ್ಯ ನೈವೇದ್ಯವನ್ನು ಮಾಡಿಕೊಂಡು ಇನ್ನೇನು ತೆಗೆದುಕೊಂಡು ಬರುವಾಗ ಮಗುವೊಂದು ಅಡ್ಡ ಬಂದಿದ್ದು, ನೈವೇದ್ಯ ಚಲ್ಲಿರುವಂತೆ ತೋರಿಸಲಾಗಿದೆ. ಹೀಗಾಗಿ ಮುಂದೆ ಭಾಗ್ಯ ಏನು ಮಾಡುತ್ತಾಳೆ ಎನ್ನುವ ಕುತೂಹಲ ಎದುರಾಗಿದೆ.

Karna Serial: ಕೊನೆಗೂ ಸತ್ಯಗಳ ಅನಾವರಣ ಒಂದಾದ ಕರ್ಣ - ನಿಧಿ ಜೋಡಿ, ನಿತ್ಯಾ ನಿರ್ಧಾರಕ್ಕೆ ಪ್ರೇಕ್ಷಕ ಶಾಕ್
Karna Serial: ಕೊನೆಗೂ ಸತ್ಯಗಳ ಅನಾವರಣ ಒಂದಾದ ಕರ್ಣ - ನಿಧಿ ಜೋಡಿ, ನಿತ್ಯಾ ನಿರ್ಧಾರಕ್ಕೆ ಪ್ರೇಕ್ಷಕ ಶಾಕ್

ಈ ಭಾಗ್ಯಕ್ಕೆ ಯಾಕೆ ಎರಡನೇ ಮದುವೆ ಆಗಬೇಕಾಗಿತ್ತು ?

ಭಾಗ್ಯಲಕ್ಷ್ಮೀ ಸೀರಿಯಲ್‌ನ ಇತ್ತೀಚಿನ ಎಪಿಸೋಡ್‌ಗಳಿಗೆ ಪ್ರೇಕ್ಷಕರು ಶಾಕ್ ಆಗಿದ್ದಾರೆ. ಈ ಭಾಗ್ಯಕ್ಕೆ ಭಾಗ್ಯ ಯಾಕೆ ಎರಡನೇ ಮದುವೆ ಆಗಬೇಕಾಗಿತ್ತು ಎಂದು ಹಲವರು ಪ್ರಶ್ನೆ ಮಾಡಿದ್ದಾರೆ. ಲಲಿತಾ ಎಪಿ ಎನ್ನುವವರು, ಸೊಸೆಯೊಬ್ಬಳೇ ಅಡುಗೆ ಮಾಡಬೇಕು ಎಂದು ಯಾವ ಶಾಸ್ತ್ರದಲ್ಲಿ ಹೇಳಿದೆ? ಸದ್ಯ, ಸೌದೆ ಒಲೆಯಲ್ಲಿಯೇ ಮಾಡಬೇಕು ಎಂದು ಹೇಳಲಿಲ್ಲವಲ್ಲ, ಆದಿಯ ಈ ಸೋದರತ್ತೆಗೆ ಮದುವೆ ಆಗಿಲ್ಲವೇ ಅವಳ ಹಾಗೂ ಕನ್ನಿಕಾಳ ಅಧಿಕಪ್ರಸಂಗಕ್ಕೆ, ದುಷ್ಟತನಕ್ಕೆ, ದುರ್ದುಂಡಿ ಮುಖಗಳಿಗೆ ಈ ಮನೆಯಲ್ಲಿ ಯಾಕಿಷ್ಟು ಪ್ರಾಶಸ್ತ್ಯ.. ಬೆನ್ನೆಲುಬು ಇಲ್ಲದ ಗಂಡಸರು! ಯಪ್ಪಾ... ಎಂದಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+