Dry Chilly Price: ಬ್ಯಾಡಗಿ, ಡಬ್ಬಿ ಮೆಣಸಿನಕಾಯಿಗೆ ಭರ್ಜರಿ ಬೇಡಿಕೆ, ಇಂದಿನ ಮಾರುಕಟ್ಟೆ ಬೆಲೆ ಎಷ್ಟಿದೆ?
Dry Chilly Price Today: ರಾಜ್ಯದಲ್ಲಿ ಒಣ ಮೆಣಸಿನಕಾಯಿ ಬೆಲೆ ಉತ್ತಮವಾಗಿದೆ. ಕಳೆದ ವರ್ಷಕ್ಕಿಂತ ಈ ಬಾರಿ ಒಳ್ಳೆಯ ದರ ಒಣ ಕೆಂಪು ಮೆಣಸಿನಕಾಯಿಗೆ ಸಿಕ್ಕಿದೆ. ಮಸಾಲೆಗೆ, ಖಾರದ ಪುಡಿಗೆ, ಆಹಾರ ಪದಾರ್ಥ ಹಾಗೂ ಇತರ ಉದ್ದೇಶಗಳಿಗೆ ಬಳಕೆ ಆಗುವ ಒಣಮೆಣಸಿನಕಾಯಿ ಬೆಲೆ ಸಮಧಾನಕರವಾಗಿದೆ. ಕೆಲವು ವಾರಗಳ ಹಿಂದೆ ಬ್ಯಾಡಗಿ ಮೆಣಸಿನಕಾಯಿಗೆ (ಉದ್ದ ಕೆಂಪು ಮೆಣಸಿನಕಾಯಿ) ದಾಖಲೆಯ 58,000 ರೂ. ಡಬ್ಬಿ ಮೆಣಸಿನಕಾಯಿಗೆ 60000 ರೂಪಾಯಿ ಇತ್ತು. ಅದಕ್ಕಿಂತ ಕೊಂಚ ಸಣ್ಣದಾಗಿ ಇರುವ ಕೆಂಪು ಮೆಣಸಿನಕಾಯಿಗೆ ಸುಮಾರು 35,000 ರೂಪಾಯಿ ಇದೆ.
ಡಬ್ಬಿ ಮೆಣಸಿನಕಾಯಿ, ಬ್ಯಾಡಗಿ ಮೆಣಸಿನಕಾಯಿ, ಕಡ್ಡಿ ಮೆಣಸಿನಕಾಯಿ, ಗುಂಟೂರು ಮೆಣಸಿನಕಾಯಿ ಎಂದು ಕೆಲವು ವಿಧಗಳಿವೆ. ಮೆಣಸಿನಕಾಯಿಗೆ ಹೆಸರುವಾಸಿಯಾದ ಬ್ಯಾಡಗಿ (ಹಾವೇರಿ) ಒಳಗೊಂಡಂತೆ, ಬೆಂಗಳೂರು ಹಾಗೂ ಇನ್ನಿತರ ಮಾರುಕಟ್ಟೆಗಳಲ್ಲಿ ಇಂದಿನ (ಏಪ್ರಿಲ್ 25) ಒಣಮೆಣಸಿನಕಾಯಿ ದರ ಎಷ್ಟಿದೆ ಎಂಬ ಮಾಹಿತಿ ಇಲ್ಲಿದೆ.

ರಾಜ್ಯದ ವಿವಿಧ ಕಡೆ ಇಂದು ಕೆಂಪು ಮೆಣಸಿಕಾಯಿ ಬೆಲೆ
* ಹುಬ್ಬಳ್ಳಿ ಅಮರಗೋಳ ಮಾರುಕಟ್ಟೆಯಲ್ಲಿ ಇಂದು ಕಡ್ಡಿ ಮೆಣಸಿನಕಾಯಿ 1 ಕ್ವಿಂಟಾಲ್ ದರ ಕನಿಷ್ಠ 32,867 ರೂ. ಹಾಗೂ ಗರಿಷ್ಠ 55,200 ರೂಪಾಯಿ ಇದೆ.
* ಬಳ್ಳಾರಿ ಮಾರುಕಟ್ಟೆಯಲ್ಲಿ ಗುಂಟೂರು ಮೆಣಸಿನಕಾಯಿ ದರ 11,000 ರೂ.ನಿಂದ 20000 ರೂಪಾಯಿಗೆ ಮಾರಾಟವಾಗಿದೆ.
* ಇನ್ನು ಹಾವೇರಿ ಭಾಗದಲ್ಲಿ ಹೆಚ್ಚು ಬಳಕೆ ಆಗುವ ಬ್ಯಾಡಗಿ ಕೆಂಪು ಮೆಣಸಿನಕಾಯಿ 1 ಕ್ವಿಂಟಾಲ್ ಬೆಲೆ 34,000ರೂಪಾಯಿ ಕಂಡಿದೆ.
* ಬೆಂಗಳೂರಿನಲ್ಲಿ ಕೆಂಪು ಮೆಣಸಿನಕಾಯಿ ಕ್ವಿಂಟಾಲ್‌ಗೆ 20,500 ರೂ.ಗೆ ಬಿಕರಿಯಾಗಿದೆ.
* ಬೆಂಗಳೂರಿನಲ್ಲಿ ಗುಂಟೂರು ಮೆಣಸಿನಕಾಯಿ ಕನಿಷ್ಠ 18000 ಮತ್ತು ಗರಿಷ್ಠ 23,000 ರೂಪಾಯಿ ಇದೆ.
* ರಾಯಚೂರಿನ ಸಿಂಧನೂರಿನಲ್ಲಿ ಒಣಮೆಣಸಿನಕಾಯಿ ಬೆಲೆ 4,500 ರೂಪಾಯಿ ಇದೆ
ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಆಂಧ್ರ ಪ್ರದೇಶ ಮತ್ತು ಬಳ್ಳಾರಿ ಭಾಗದಲ್ಲಿ ಗುಂಟೂರು ಮೆಣಸಿನಕಾಯಿಗೆ ಕ್ವಿಂಟಾಲ್ ಗೆ 18,000-22,800 ರೂಪಾಯಿ ಇತ್ತು. ಇನ್ನೂ ಬೆಂಗಳೂರು ಮತ್ತು ಬ್ಯಾಡಗಿಯಲ್ಲಿ ಕೆಂಪು ಮೆಣಸಿನಕಾಯಿ 19000-20,500 ರೂಪಾಯಿ ಇತ್ತು. ಅದಕ್ಕೆ ಹೋಲಿಕೆ ಮಾಡಿದರೆ ಈ ವರ್ಷ ಕೊಂಚ ಉತ್ತಮ ಬೆಲೆ ಇದೆ.
ಈ ಭಾಗದಲ್ಲಿ ಕೆಂಪು ಮೆಣಸಿನಕಾಯಿ ಕೃಷಿ
ಹಾವೇರಿ, ಗದಗ, ಧಾರವಾಡ, ಆಂಧ್ರ ಪ್ರದೇಶ, ರಾಯಚೂರು, ಕಲಬುರಗಿ, ತೆಲಂಗಾಣ, ತಮಿಳುನಾಡಿನಲ್ಲಿ ಹೆಚ್ಚಾಗಿ ಕೆಂಪು ಮೆಣಸಿನಕಾಯಿ ಬೆಳೆಲಾಗುತ್ತದೆ. ಅದರಲ್ಲಿ ಕಡ್ಡಿ ಮತ್ತು ಡಬ್ಬಿ ಮೆಣಸಿನಕಾಯಿ, ನೆರೆ ರಾಜ್ಯಗಳಲ್ಲಿ ಗುಂಟೂರು ಮೆಣಸಿನಕಾಯಿ ಬೆಳೆಯುವುದು ಹೆಚ್ಚು. ಅಲ್ಲಿಂದ ಸುತ್ತಮುತ್ತಲಿನ ಮಾರುಕಟ್ಟೆಗಳಿಗೆ ರಫ್ತಾಗುತ್ತವೆ. ಹಾವೇರಿ ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆಗೆ ಬೇರೆ ರಾಜ್ಯಗಳಿಂದ ಲಕ್ಷಗಟ್ಟಲೇ ಚೀಲ ಆವಕ ವಾಗುತ್ತಿವೆ. ಸದ್ಯ ಮಧ್ಯಪ್ರಾಚ್ಯ ಯುದ್ಧದಿಂದಾಗಿ ಕೊಲ್ಲಿ ರಾಷ್ಟ್ರಗಳಿಗೆ ಚಿಲ್ಲಿ ರಫ್ತು ನಿಂತಿದೆ ಎನ್ನಲಾಗಿದೆ.
ಸಾಮಾನ್ಯವಾಗಿ ಡಿಸೆಂಬರ್‍ನಿಂದ ಮಾರ್ಚ್ ಅವಧಿಯನ್ನು ಮೆಣಸಿನಕಾಯಿ ಋತು ಎನ್ನಲಾಗುತ್ತದೆ. ಈ ವೇಳೆ ಬ್ಯಾಡಗಿ ಮಾರುಕಟ್ಟೆಗೆ ಲಕ್ಷಗಟ್ಟಲೇ ಚೀಲಗಳು ಆವಕವಾಗುತ್ತವೆ. ಕಳೆದ ಬಾರಿ ಉತ್ತಮ ಬೆಲೆ ಸಿಗದ ಪರಿಣಾಮ ಕರ್ನಾಟಕದಲ್ಲಿ ಕಂಪು ಮೆಣಸಿನಕಾಯಿ ಉತ್ಪಾದನೆ ಕಡಿಮೆ ಆಗಿದೆ.













Click it and Unblock the Notifications