ಬಿಳಿಗಿರಿರಂಗನ ಬೆಟ್ಟದಲ್ಲಿ ರೊಟ್ಟಿ ಹಬ್ಬದ ಸಂಭ್ರಮ-ವಿಶೇಷತೆ ಏನು?
ಚಾಮರಾಜನಗರ, ಮೇ, 14: ಚಾಮರಾಜನಗರ ಜಿಲ್ಲೆಯ ಬಿಳಿಗಿರಿರಂಗನ ಬೆಟ್ಟದಲ್ಲಿ ಮುತ್ತುಗದಗದ್ದೆ ಪೋಡಿನ ಜನರು ಸಂಭ್ರಮದಿಂದ ರೊಟ್ಟಿ ಹಬ್ಬ ಆಚರಣೆ ಮಾಡಿ ಗಮನ ಸೆಳೆದರು.
ಬಿಳಿಗಿರಿರಂಗನ ಬೆಟ್ಟದ ಮುತ್ತುಗದಗದ್ದೆ ಪೋಡಿನ ಸೋಲಿಗ ಸಮುದಾಯವು ಕುಂಭೇಶ್ವರ ದೇವರಿಗೆ ರೊಟ್ಟಿ, ಹಲಸಿನಕಾಯಿ ಪಲ್ಯದ ನೈವೇದ್ಯವಿಟ್ಟು ದೇವರಿಗೆ ನಮಿಸಿದರು. ರೊಟ್ಟಿ ಹಬ್ಬ ಆಚರಣೆ ಸೋಲಿಗ ಜನಾಂಗದ ಪ್ರಮುಖ ಹಬ್ಬವಾಗಿದ್ದು, ಮೊದಲ ರಾಗಿ ಫಸಲಿನಿಂದ ರೊಟ್ಟಿ ತಯಾರಿಸಿ, ದೇವರಿಗೆ ನೈವೇದ್ಯ ಮಾಡಿ ಸಹಪಂಕ್ತಿ ಭೋಜನ ಮಾಡುವುದು ಈ ಆಚರಣೆಯ ವಿಶೇಷವಾಗಿದೆ.

ಮಾದಪ್ಪನಿಗೆ ದಾನಿಯೊಬ್ಬರಿಂದ ಬೆಳ್ಳಿ ಆರತಿ ತಟ್ಟೆ: ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನಲ್ಲಿರುವ ಪವಾಡ ಪುರುಷ ಶ್ರೀ ಮಲೆ ಮಹದೇಶ್ವರನಿಗೆ ಬೆಂಗಳೂರಿನ ದಾನಿಗಳಾದ ನಾಗಮಣಿ ಎಂ ಮತ್ತು ಕುಟುಂಬ 1 ಕೆ.ಜಿ. 600 ಗ್ರಾಂ ತೂಕದ ಬೆಳ್ಳಿಯ ಆರತಿ ತಟ್ಟೆಯನ್ನು ಕಾಣಿಕೆಯಾಗಿ ಸಲ್ಲಿಸಿದ್ದಾರೆ.
ಮಾದಪ್ಪನಿಗೆ ಕಾಣಿಕೆಯಾಗಿ ಬಂದ ಬೆಳ್ಳಿ ಆರತಿ ತಟ್ಟೆ ತುಂಬಾ ವಿಶೇಷತೆಯಿಂದ ಕೂಡಿದ್ದು, ಮಾದಪ್ಪನ ವಾಹನವಾದ ಹುಲಿ, ಢಮರುಗ ಸಮೇತ ತ್ರಿಶೂಲ, ನಂದಿ ಸೇರಿದಂತೆ ಎರಡೂ ಕೈತುಂಬಾ ಹಿಡಿದ ನಂದಾದೀಪವನ್ನು ಒಳಗೊಂಡಿದ್ದು, ತುಂಬಾ ಆಕರ್ಶಕವಾಗಿದೆ.












Click it and Unblock the Notifications