ಚಾಮರಾಜನಗರ: ಮನೆ ಕೊಡಿಸುವ ನೆಪದಲ್ಲಿ ಮಹಿಳೆಯ ಅತ್ಯಾಚಾರ, ವಿಡಿಯೋ ಮಾಡಿ ವಿಕೃತಿ ಮೆರೆದ ಗ್ರಾ.ಪಂ. ಅಧ್ಯಕ್ಷೆ ಮಗ
ಚಾಮರಾಜನಗರ, ಮೇ, 28: ಪಂಚಾಯಿತಿಯಿಂದ ಮನೆ ಕೊಡಿಸುವುದಾಗಿ ಗ್ರಾಮ ಪಂಚಾಯತಿ ಅಧ್ಯಕ್ಷೆ ಪುತ್ರ ಅತ್ಯಾಚಾರ ಎಸಗಿ, ವೀಡಿಯೋ ಸೆರೆ ಹಿಡಿದ ಘಟನೆ ಹನೂರು ತಾಲೂಕಿನ ಪೊನ್ನಾಚಿ ಗ್ರಾಪಂ ವ್ಯಾಪ್ತಿಯ ಗ್ರಾಮದಲ್ಲಿ ನಡೆದಿದೆ.
ಇನ್ನು ಸಂಬಂಧ ಗ್ರಾಮ ಪಂಚಾಯತಿ ಅಧ್ಯಕ್ಷೆ ಪುತ್ರ ವೈದೇಶ್, ಬಸಮ್ಮಣ್ಣಿ ಹಾಗೂ ಶಿವಮ್ಮಣ್ಣಿ ಎಂಬವರ ವಿರುದ್ಧ ಮಲೆಮಹದೇಶ್ವರ ಬೆಟ್ಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

25 ವರ್ಷದ ವಿವಾಹಿತೆಯೊಬ್ಬಳು ಮನೆಗಾಗಿ ಅರ್ಜಿ ಸಲ್ಲಿಸಿದ್ದ ವೇಳೆ, ಮನೆ ಕಟ್ಟಿಕೊಡುವ ಆಸೆ ತೋರಿಸಿ ವೈದೇಶ್ ಆಕೆಯನ್ನು ಅತ್ಯಾಚಾರ ಎಸಗಿ, ಖಾಸಗಿ ಫೋಟೋ ಸೆರೆ ಹಿಡಿದಿದ್ದಾನೆ. ಅದಾದ ಬಳಿಕ, ಅದನ್ನು ಸಾಮಾಜಿಕ ಜಾಲತಾಣಕ್ಕೆ ಹರಿಬಿಟ್ಟಿರುವುದಾಗಿ ಮಹಿಳೆ ದೂರು ಕೊಟ್ಟು ಮೂವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾಳೆ.ಸದ್ಯ, ಮಲೆ ಮಹದೇಶ್ವರ ಬೆಟ್ಟ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ ಎನ್ನಲಾಗಿದೆ.
ಮದ್ಯ ಕಳವು: ಶುಕ್ರವಾರ (ಮೇ 11) ತಡರಾತ್ರಿ ಸುಮಾರು 32,000 ರೂಪಾಯಿ ಬೆಲೆ ಬಾಳುವ ಮದ್ಯವನ್ನು ಕಳ್ಳನೋರ್ವ ಕಳವು ಮಾಡಿರುವ ಘಟನೆ ಹನೂರು ಪಟ್ಟಣದ ಅಮೃತ್ ಬಾರ್ ಅಂಡ್ ರೆಸ್ಟೋರೆಂಟ್‌ನಲ್ಲಿ ನಡೆದಿದೆ.
ಹನೂರು ಪಟ್ಟಣದ ಬಂಡಳ್ಳಿ ಮುಖ್ಯ ರಸ್ತೆಯಲ್ಲಿರುವ ಅಮೃತ್ ಬಾರ್ ಅಂಡ್ ರೆಸ್ಟೋರೆಂಟ್‌ನಲ್ಲಿ ಬಾರ್ ಹಿಂಭಾಗದ ಶೆಲ್ಟರ್ ಒಡೆದು ಒಳನುಗ್ಗಿರುವ ಕಳ್ಳ ಸಾವಿರಾರು ರೂಪಾಯಿ ಮೌಲ್ಯದ ವಿವಿಧ ಕಂಪನಿಯ ಮಧ್ಯವನ್ನು ಕಳ್ಳತನ ಮಾಡಿಕೊಂಡು ಹೋಗಿದ್ದಾನೆ.
ಅಮೃತ್ ಬಾರ್ ಅಂಡ್ ರೆಸ್ಟೋರೆಂಟ್‌ನಲ್ಲಿ ಕಳ್ಳತನ ದೂರು ದಾಖಲಾಗುತ್ತಿದ್ದಂತೆ ಪಟ್ಟಣ ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ರಿಹಾನ ಬೇಗಮ್ ನೇತೃತ್ವದಲ್ಲಿ ಚಾಮರಾಜನಗರ ಜಿಲ್ಲಾ ಕೇಂದ್ರದಿಂದ ಆಗಮಿಸಿದ್ದ ಬೆರಳಚ್ಚು ತಜ್ಞರು ಹಾಗೂ ಶ್ವಾನದಳದ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇನ್ನು ಸಿಸಿ ಟಿವಿಯಲ್ಲಿ ಯುವಕನೋರ್ವ ಓಡಾಡಿ ಬಾಕ್ಸ್ ಹೊತ್ತೊಯ್ಯುವುದು ಸೆರೆಯಾಗಿದೆ.












Click it and Unblock the Notifications