ಚಾಮರಾಜನಗರದಲ್ಲಿ ಭೂಮಿ ಖರೀದಿರುವ ಆಸೆ ಇದೆಯೇ.? ಪ್ರದೇಶವಾರು ದರಗಳ ಮಾಹಿತಿ ತಿಳಿಯಿರಿ
ಚಾಮರಾಜನಗರ, ನವೆಂಬರ್, 15: ಇದೀಗ ಸೈಟ್‌ಗಳ ದರ ದುಬಾರಿಯಾಗುತ್ತಲೇ ಇದೆ. ಇನ್ನು 8-10 ವರ್ಷಗಳ ಹಿಂದೆ ಮೈಸೂರು, ನಂಜನಗೂಡಿನಲ್ಲಿ ಭೂಮಿ ಬೆಲೆ ಕೇಳಿ ಶಾಕ್ ಆಗುತ್ತಿದ್ದ ಸ್ಥಿತಿಯೇ ಈಗ ಗಡಿಜಿಲ್ಲೆಯಲ್ಲೂ ನಿರ್ಮಾಣವಾಗಿದೆ. ಹಾಗಾದರೆ ಇಲ್ಲಿ ಚದರ ಅಡಿ ಭೂಮಿ ಬೆಲೆ ಎಷ್ಟಿದೆ ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ಗಮನಿಸಿ.
ಚಾಮರಾಜನಗರ ಜಿಲ್ಲಾಕೇಂದ್ರ ಅಷ್ಟೆ ಅಲ್ಲದೆ, ಚಾಮರಾಜನಗರ ಸುತ್ತಮುತ್ತಲಿನ ಊರು ಮತ್ತು ಗುಂಡ್ಲುಪೇಟೆ, ರಾಷ್ಟ್ರೀಯ ಹೆದ್ದಾರಿ ಹಾದು ಹೋಗಿರುವ ಗ್ರಾಮಗಳ ಜಮೀನುಗಳಿಗೆ ಎಲ್ಲಿಲ್ಲದ ಬೇಡಿಕೆ ಸೃಷ್ಟಿಯಾಗಿದೆ. ಬಡವರಿರಲಿ, ಮಧ್ಯಮ ವರ್ಗದವರೂ ಮನೆ ಕಟ್ಟುವವರಿಗೆ ಭೂಮಿ ಕೈಗೆಟುಕದಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ಚಾಮರಾಜನಗರ ಜಿಲ್ಲಾ ಕೇಂದ್ರದಲ್ಲಿ ಹೊಸ ಲೇಔಟ್‌ಗಳು ಕೂಡ ಆಗುತ್ತಿದ್ದು, ಚಾಮರಾಜನಗರದ ಹತ್ತಿರದ ಗ್ರಾಮಗಳಿಗೂ ಈಗ ಲೇಔಟ್‌ಗಳನ್ನು ಮಾಡಲು ರಿಯಲ್ ಎಸ್ಟೇಟ್ ಉದ್ಯಮಿಗಳ ಮುಂದಾಗುತ್ತಿದ್ದಾರೆ. 30*40 ನಿವೇಶನ ಕೊಳ್ಳಲು ಜೋಬಿನಲ್ಲಿ ಅರ್ಧ ಕೋಟಿ ರೂಪಾಯಿ ಇಟ್ಟಿರಬೇಕಾಗುತ್ತದೆ.
ಕೈಗಾರಿಕಾ ಪ್ರದೇಶ ಅಭಿವೃದ್ಧಿ: ಚಾಮರಾಜನಗರದ ಬದನಗುಪ್ಪೆ-ಕೆಲ್ಲಂಬಳ್ಳಿ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಕಾಣುತ್ತಿರುವುದರಿಂದ ಭೂಮಿಗೆ ಚಿನ್ನದ ಬೆಲೆ ಬಂದಿದ್ದು, ರಿಯಲ್ ಎಸ್ಟೇಟ್ ಉದ್ಯಮ ವೇಗವಾಗಿ ಪ್ರಗತಿ ಕಾಣುತ್ತಿದೆ. ಕೈಗಾರಿಕಾಭಿವೃದ್ಧಿಯಿಂದ ಚಾಮರಾಜನಗರ ಜಿಲ್ಲಾಕೇಂದ್ರ ದಾಟಿ ಉತ್ತುವಳ್ಳಿ, ಮರಿಯಾಲ, ಬದನಗುಪ್ಪೆ, ಮಾದಾಪುರ, ಮಸಗಾಪುರ ವರೆಗೂ ಈಗ ಲೇಔಟ್ ಉದ್ಯಮ ಚಾಚಿಕೊಂಡಿದೆ.
ಜಮೀನು ಬೆಲೆ ಕೇಳಿದ್ರೆ ಶಾಕ್: ಎಕರೆಗೆ 6-7 ಲಕ್ಷ ಇದ್ದ ಜಮೀನುಗಳ ಬೆಲೆ ಈಗ 25-30 ಲಕ್ಷ ಆಗಿದೆ.ಅದರಂತೆ, ಕೇರಳ, ತಮಿಳುನಾಡಿನ ಸಿರಿವಂತರು ಅಷ್ಟೇ ಹಣ ಕೊಟ್ಟು ಜಮೀನುಗಳನ್ನು ಖರೀದಿ ಮಾಡುತ್ತಿರುವುದರಿಂದ ಜಮೀನಿನ ಬೆಲೆ ವಿಪರೀತ ಹೆಚ್ಚಾಗಿದೆ. ಇನ್ನು ರಸ್ತೆ ಸಂಪರ್ಕ, ತಾಲೂಕು, ನಗರಕ್ಕೆ ಸಮೀಪವಿರುವ ಜಮೀನುಗಳಿಗೆ ಇನ್ನಿಲ್ಲದ ಬೇಡಿಕೆ ಸೃಷ್ಟಿಯಾಗಿದ್ದು, ಮಧ್ಯಮವರ್ಗದ ಜನರಿಗೆ ಬೆಲೆ ಏರಿಕೆ ಬಿಸಿ ತಟ್ಟುತ್ತಿದೆ.
10,000 ಚದರ ಅಡಿ ನಿವೇಶನ ಖರೀದಿ: ರಾಜ್ಯ ರಾಜಧಾನಿ ಬೆಂಗಳೂರು ದಿನದಿಂದ ದಿನಕ್ಕೆ ಅಭಿವೃದ್ಧಿಯಾಗುತ್ತಲೇ ಇದೆ. ಅದರಲ್ಲೂ ಕೆಲವೊಂದು ಕಾಲೋನಿಗಳಲ್ಲಿ ಬರೀ ರಾಜಕಾರಣಿಗಳು, ಪ್ರಖ್ಯಾತ ಉದ್ಯಮಿಗಳು, ಕಗಾರಿಕೋದ್ಯಮಿಗಳೇ ನೆಲೆಸಿರುತ್ತಾರೆ. ಇಂತಹ ಪ್ರದೇಶಗಳಲ್ಲಿ ಸೈಟ್‌ಗಳನ್ನು ಅತ್ಯಂತ ದುಬಾರಿಯಾಗಿರುತ್ತವೆ. ಈ ಸಾಲಿನಲ್ಲಿ ಕೋರಮಂಗಲ ಕೂಡ ಇದ್ದು, ಇಲ್ಲಿ ಒಂದೊಂದು ಚದರ ಜಾಗಕ್ಕೂ ಅಡಿ ಜಾಗವೂ ವಜ್ರಕ್ಕಿಂತ ಬೆಲೆ ಇದೆ.
ಬೆಂಗಳೂರಿನ ಕೋರಮಂಗಲದ 3ನೇ ಬ್ಲಾಕ್ ಅನ್ನು ಬಿಲೆನಿಯರ್ ಸ್ಟ್ರೀಟ್ ಅಂತಲೂ ಕರೆಯಲಾಗುತ್ತದೆ. ಇಲ್ಲಿ ದೇಶದ ಪ್ರಖ್ಯಾತ ಉದ್ಯಮಿಗಳು, ಪ್ರತಿಷ್ಠಿತ ಕೈಗಾರಿಕೋದ್ಯಮಿಗಳು, ರಾಜಕಾರಣಿಗಳೇ ಇಲ್ಲಿ ವಾಸವಾಗಿದ್ದಾರೆ. ಇಲ್ಲಿನ ಒಂದೊಂದು ಚದುರ ಅಡಿ ಜಾಗಕ್ಕೂ ವಜ್ರಕ್ಕಿಂತ ಹೆಚ್ಚು ಬೆಲೆ ಇದೆ. ಇನ್ನೂ ಇದೀಗ ಇದೇ ಪ್ರದೇಶದಲ್ಲಿ ಉದ್ಯಮಿಯೊಬ್ಬರು ದಾಖಲೆ ಮಟ್ಟದಲ್ಲಿ ಹಣ ಸುರಿದು ಭೂಮಿ ಖರೀದಿ ಮಾಡಿ ಗಮನ ಸೆಳೆದಿದ್ದಾರೆ.
ಖ್ವೆಸ್ ಕಾರ್ಪ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಅಜಿತ್ ಐಸಾಕ್ ಅವರು ಬರೋಬ್ಬರಿ 67.5 ಕೋಟಿ ರೂಪಾಯಿ ಕೊಟ್ಟು 10,000 ಚದರ ಅಡಿಯ ಅಪಾರ್ಟ್‌ಮೆಂಟ್ ಖರೀದಿ ಮಾಡಿದ್ದು, ಎಲ್ಲರನ್ನು ಹುಬ್ಬೇರುವಂತೆ ಮಾಡಿದ್ದಾರೆ. ಇದಕ್ಕೂ ಮುನ್ನ ಟಿವಿಎಸ್ ಮೋಟಾರ್ಸ್ ಸಂಸ್ಥೆಯು 9,488 ಚದುರ ಅಡಿ ವಿಸ್ತೀರ್ಣದ ಅಪಾರ್ಟ್ ಮೆಂಟ್ ಅನ್ನು ಪ್ರತಿ ಚದುರ ಅಡಿಗೆ 68,597 ರೂಪಾಯಿಗೆ ಕೊಟ್ಟು ಖರೀದಿಸಿದ್ದರು.
ಕೋರಮಂಗಲ 3ನೇ ಬ್ಲಾಕ್ ಮಾತ್ರ ಪ್ರತಿಷ್ಠಿತ ಬಡಾವಣೆಗಳಲ್ಲಿ ನಿವೇಶನ ಆಗಲೀ ವಸತಿ ಸಮುಚ್ಚಯವಾಗಲೀ ಮಾರಾಟಕ್ಕೆ ಜಾಗ ಸಿಗುವುದೇ ಕಷ್ಟ. ಆದ್ದರಿಂದ ಬೆಲೆ ಹೆಚ್ಚಳ ಆಗುತ್ತದೆ ಎಂದು ರಿಯಲ್ ಎಸ್ಟೇಟ್ ತಜ್ಞರು ಅಭಿಪ್ರಾಯಪಡುತ್ತಾರೆ. ಇದೇ ಮಾದರಿಯನ್ನು ಎಲ್ಲ ಪ್ರದೇಶಗಳಿಗೂ ಅನ್ವಯಿಸುವುದಿಲ್ಲ ಎಂದು ಹೇಳುತ್ತಾರೆ.












Click it and Unblock the Notifications