ಇಂದಿರಾ ಗಾಂಧಿ ಪ್ರತಿರೂಪದಂತಿದ್ದೀರಿ ಎಂದ ಮಹಿಳೆಯನ್ನು ತಬ್ಬಿದ ಪ್ರಿಯಾಂಕ ಗಾಂಧಿ

ಚಾಮರಾಜನಗರ, ಏಪ್ರಿಲ್‌ 25: ಚಾಮರಾಜನಗರ ಜಿಲ್ಲೆಯ ಹನೂರಿನಲ್ಲಿ ಮಂಗಳವಾರ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಮತ ಬೇಟೆ ನಡೆಸಿದ್ದು, ಕಾಂಗ್ರೆಸ್‌ ಮಹಿಳೆಯ ಕಾರ್ಯಕರ್ತೆಯರ ಜೊತೆ ಸಂವಾದ ನಡೆಸಿದ್ದಾರೆ.

ಮಹಿಳೆಯರ ಸಂವಾದದಲ್ಲಿ ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟ ಗ್ರಾಪಂ ವ್ಯಾಪ್ತಿಯ ಕೊಕ್ಕಬೊರೆ ಗ್ರಾಮದ ಬೊಮ್ಮಮ್ಮ ಮಾತನಾಡಿ 'ನಮಗೆ ಇಷ್ಟು ವರ್ಷಗಳಾದರೂ ವಿದ್ಯುತ್ ಇಲ್ಲ, ರಸ್ತೆಯೂ ಇಲ್ಲ, ಮನೆಗಳು ಇಲ್ಲ, ಸೂಕ್ತ ಆರೋಗ್ಯ ಸೌಲಭ್ಯ ಸಿಗುತ್ತಿಲ್ಲ' ಎಂದು ಅಳಲು ತೋಡಿಕೊಂಡರು. ಇದಕ್ಕೆ, ಪ್ರಿಯಾಂಕಾ ಗಾಂಧಿ ಪ್ರತಿಕ್ರಿಯಿಸಿ, ನಮ್ಮ ಸರ್ಕಾರ ಬರಲಿದೆ, ಎಲ್ಲ ಸಮಸ್ಯೆಯನ್ನು ಪರಿಹಾರ ಮಾಡುತ್ತೇವೆ ಎಂದು ಭರವಸೆ ಕೊಟ್ಟರು.

Priyanka Gandhi Hugs A Woman Who Praised Indira Gandhi In Hanur

ಹನೂರು ತಾಲೂಕಿನ ಹೊಸಪೋಡು ಗ್ರಾಮದ ತಿರುಮಮ್ಮ ಮಾತನಾಡಿ, ಇಂದಿರಾ ಗಾಂಧಿ ಅವರ ಕಾಲದಲ್ಲಿ ನಮಗೆ ಸೌಲಭ್ಯಗಳು ಸಿಕ್ಕಿದವು, ನೀವು ಇಂದಿರಾ ಪ್ರತಿರೂಪದಂತೆ ಇದ್ದೀರಿ, ನಮ್ಮ ಸಮಸ್ಯೆಗಳನ್ನು ಪರಿಹರಿಸಿ ಎಂದು ಹೇಳಿದ್ದಕ್ಕೆ ವೇದಿಕೆಯಿಂದ ಕೆಳಗಿಳಿದು ಬಂದ ಪ್ರಿಯಾಂಕ ಗಾಂಧಿ ತಿರುಮಮ್ಮ ಅಪ್ಪಿಕೊಂಡರು.

ಇನ್ನು, ಪ್ರಿಯಾಂಕಾ ಅಪ್ಪುಗೆ ಬಗ್ಗೆ ತಿರುಮಮ್ಮ ಮಾತನಾಡಿ, ನಮ್ಮ ಸಮಸ್ಯೆಗಳನ್ನು ಈಡೇರಿಸುವ ಭರವಸೆ ಕೊಟ್ಟಿದ್ದಾರೆ, ಕಾಂಗ್ರೆಸ್ ಇದ್ದಾಗಲೇ ನಾನು ಗ್ರಾಮ ಪಂಚಾಯತಿ ಸದಸ್ಯಳಾಗಿದ್ದೆ, ನಮ್ಮ ಮತ ಯಾವಾಗಲೂ ಕಾಂಗ್ರೆಸ್‌ಗೆ ಎಂದರು.

ಭದ್ರತೆ ಬಿಟ್ಟು ಜನರ ಬಳಿ ಬಂದ ಪ್ರಿಯಾಂಕ ಗಾಂಧಿ

ಚಾಮರಾಜನಗರ ಜಿಲ್ಲೆಯ ಹನೂರಿನಲ್ಲಿ ಕಾರ್ಯಕ್ರಮಕ್ಕೆ ಆಗಮಿಸಿದ ವೇಳೆಯೂ ಕಾರಿನಿಂದ ಇಳಿದು ಜನರ ಬಳಿ ತೆರಳಿದ ಪ್ರಿಯಾಂಕಾ ಗಾಂಧಿ ಹಸ್ತಲಾಘವ ಕೊಟ್ಟು, ನಮಸ್ಕಾರ ಕಾರ್ಯಕ್ರಮದ ಕೊನೆಯಲ್ಲೂ ವೇದಿಕೆಯಿಂದ ಇಳಿದು ಜನರ ಬಳಿ ಮಿಂಚಿನ ಸಂಚಾರ ನಮಾಡಿದರು. ಡೆಸಿ ಗಮನ ಸೆಳೆದರು. ಈ ಬಾರಿ ರಾಜ್ಯದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ತರುವಂತೆ ಮತದಾರರಲ್ಲಿ ಮನವಿ ಮಾಡಿದ್ದಾರೆ.

Priyanka Gandhi Hugs A Woman Who Praised Indira Gandhi In Hanur

ಇನ್ನು ಇಂದಿನ ಸಮಾವೇಶದಲ್ಲಿ 10-12 ಸಾವಿರದಷ್ಟು ಮಂದಿ ಮಹಿಳೆಯರು ಭಾಗಿಯಾಗಿದ್ದರು. ಭಾಷಣದ ಕೊನೆಯಲ್ಲಿ ಜನರ ಕೈಯಲ್ಲಿ ಜೈ ಕರ್ನಾಟಕ ಎಂದು ಹೇಳಿಸಿದ್ದು ವಿಶೇಷವಾಗಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+