Karnataka Assembly Elections: ಹನೂರು ಕ್ಷೇತ್ರದಲ್ಲಿ ಈ ಬಾರಿ ತ್ರಿಕೋನ ಸ್ಪರ್ಧೆ
ಹನೂರು, ಮಾರ್ಚ್ 23: ಕರ್ನಾಟಕ ವಿಧಾನಸಭಾ ಚುನಾವಣೆ ಹತ್ತಿರ ಬಂದಂತೆ ಎಲೆಮರೆಕಾಯಿಯಂತಿರುವ ಚಾಮರಾಜನಗರ ಜಿಲ್ಲೆಯ ಹೈವೋಲ್ಟೇಜ್ ವಿಧಾನಸಭಾ ಕ್ಷೇತ್ರವಾದ ಹನೂರು ಕೂಡ ಈಗ ಮುನ್ನೆಲೆಗೆ ಬಂದಿದೆ. ಈ ಬಾರಿ ಕ್ಷೇತ್ರದಲ್ಲಿ ಎಲ್ಲ ಪಕ್ಷಗಳಲ್ಲಿ ಟಿಕೆಟ್ ಆಕಾಂಕ್ಷಿಗಳ ಸಾಲು ದೊಡ್ಡದಿದ್ದು, ಈಗ ಕ್ಷೇತ್ರದ ಪರಿಸ್ಥಿತಿ ಹೇಗಿದೆ ನೋಡೋಣ.
ಹನೂರು ಚಾಮರಾಜನಗರ ಜಿಲ್ಲೆಯ ಪ್ರಮುಖ ತಾಲೂಕು ಇದರ ವ್ಯಾಪ್ತಿಯಲ್ಲಿ ಕರ್ನಾಟಕದ ಖ್ಯಾತ ಮಲೆ ಮಹದೇಶ್ವರ ಬೆಟ್ಟ ಇದೆ. ಹಚ್ಚಹಸಿರಿನ 77 ಬೆಟ್ಟ ಸಾಲು ಕ್ಷೇತ್ರಕ್ಕೆ ಮುಕುಟಮಣಿಯಂತಿದೆ. ಇದು ಚಾಮರಾಜನಗರ ಜಿಲ್ಲೆಯ ಒಂದು ತಾಲೂಕು ಕೇಂದ್ರ. ಮಹದೇಶ್ವರಬೆಟ್ಟವಿರುವ ತಾಲೂಕು, ಕರ್ನಾಟಕದಿಂದ ತಮಿಳುನಾಡನ್ನು ಬೇರ್ಪಡಿಸುವ,ಕೊಯಮತ್ತೂರು ಜಿಲ್ಲೆಗೆ ಈ ತಾಲೂಕಿನಿಂದ ಹಾದು ಹೋಗಬಹುದು.

ಮಲೆ ಮಹದೇಶ್ವರ ಬೆಟ್ಟದಿಂದ ಸ್ವಲ್ಪ ದೂರದಲ್ಲಿ ಹೊಗೆನಕಲ್ಲು ಜಲಪಾತವಿದೆ. ಇದು ತಮಿಳುನಾಡಿಗೂ ಕರ್ನಾಟಕ ರಾಜ್ಯಕ್ಕೂ ವಿವಾದವಾಗಿರುವ ಸ್ಥಳ. ಹನೂರಿನ ಕ್ರಿಸ್ತರಾಜ ಶಾಲೆ ತನ್ನ ಒಳ್ಳೆಯ ಶಿಕ್ಷಣ ಮತ್ತು ಫಲಿತಾಂಶದಿಂದ ಜಿಲ್ಲೆಯಲ್ಲೇ ಹೆಸರುವಾಸಿಯಾಗಿದೆ. ಈ ಶಾಲೆ ಕಲಿಕೆಯ ಜೊತೆ ಆಟ, ಓಟದಲ್ಲೂ ಒಳ್ಳೆಯ ಫಲಿತಾಂಶವನ್ನು ಕೊಟ್ಟಿದೆ. ಕಾಡಗಳ್ಳ ವೀರಪ್ಪನ್‌ನಿಂದ ಹತ್ಯೆಗೀಡಾದ ನಾಗಪ್ಪನವರು ಹನೂರಿನ ವಿಧಾನಸಭಾ ಕ್ಷೇತ್ರದಿಂದ ಆಯ್ಕೆಯಾಗಿ ಬಂದವರು.
50 ಗ್ರಾಮಗಳಿಂದ ಕೂಡಿದ ತಾಲೂಕು
ಹನೂರನ್ನು ತಾಲೂಕಾಗಿ ಅಧಿಕೃತವಾಗಿ 30-11-2017 ರ ಗೆಜೆಟ್ ನೋಟಿಫಿಕೇಸನ್ ಹೊರಡಿಸಲಾಗಿದ್ದು, ಪ್ರತ್ಯೇಕ ತಾಲೂಕಾಗಿ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಅಧಿಕೃತವಾಗಿ ಘೋಷಣೆ ಮಾಡಿದ್ದರು. ಇದು ಈ ಹಿಂದೆ ಇದ್ದ ಕೊಳ್ಳೇಗಾಲ ತಾಲೂಕಿನಿಂದ ಬೇರ್ಪಟ್ಟು ಹನೂರು, ರಾಮಪುರ ಮತ್ತು ಲೊಕ್ಕನಹಳ್ಳಿ ಹೋಬಳಿ ವ್ಯಾಪ್ತಿಯಲ್ಲಿ ಬರುವ 50 ಗ್ರಾಮಗಳಿಂದ ಕೂಡಿದ ಹೊಸ ತಾಲೂಕಾಗಿದೆ.

ಸಿದ್ದಪ್ಪಾಜಿ, ದೊಡ್ಡಮ್ಮತಾಯಿ ಗದ್ದಿಗೆ
ಹನೂರಿನ ಬೆಟ್ಟಳ್ಳಿ ಮಾರಮ್ಮನ ದೇವಸ್ಥಾನ, ಆಂಜನೇಯ ಸ್ವಾಮಿ ದೇವಸ್ಥಾನ, ಕನ್ನಿಕಾ ಪರಮೇಶ್ವರಿ ದೇವಸ್ಥಾನ, ಚಾಮುಂಡೇಶ್ವರಿ ದೇವಸ್ಥಾನ, ಚೆಲುವ ನಾರಾಯಣ ಸ್ವಾಮಿ ದೇವಸ್ಥಾನ, ಸಿದ್ದಪ್ಪಾಜಿ, ದೊಡ್ಡಮ್ಮತಾಯಿ, ಶನೈಶ್ಚರ ದೇವಸ್ಥಾನ ಹೆಸರುವಾಸಿಯಾಗಿವೆ. ಮಾರಮ್ಮನ ದೇವಸ್ಥಾನದಲ್ಲಿ ವರ್ಷಕೊಮ್ಮೆ ನೆಡೆಯುವ ಜಾತ್ರೆ ಬಹಳ ಹೆಸರುವಾಸಿಯಾಗಿದೆ. ಈ ಜಾತ್ರೆ 5 ದಿನ ನೆಡೆಯಲ್ಲಿದ್ದು ಬಾಯಿಬೀಗ ಪ್ರಮುಖ ಆಕರ್ಷಣೆ ಆಗಿದೆ. ಸುಮಾರು 2000 ಸಣ್ಣ ಬಾಯಿಬೀಗ ಹಾಗೂ 15 ರಿಂದ 20 ಅಡಿ ಬಾಯಿಬೀಗ ಹಾಕಿಸಿಕೊಳ್ಳುತ್ತಾರೆ ಇಲ್ಲಿನ ಭಕ್ತಾದಿಗಳು.
ಯ ಆರ್. ನಾಗೇಂದ್ರ ಗೆಲುವು
ಕಳೆದ 2018ರ ವಿಧಾನಸಭಾ ಚುನಾವಣೆಯಲ್ಲಿ ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ಯ ಆರ್. ನಾಗೇಂದ್ರ ಗೆಲುವು ಸಾಧಿಸಿದ್ದರು. ಭಾರತೀಯ ಜನತಾ ಪಾರ್ಟಿಯ ಪ್ರೀತನ್ ನಾಗಪ್ಪ 3513 ಮತಗಳ ಅಂತರದಿಂದ ಸೋಲನ್ನು ಅನುಭವಿಸಿದ್ದರು. ನೈಸರ್ಗಿಕ ಸೌಂದರ್ಯಕ್ಕೆ ಹೆಸರಾಗಿರುವ ಹನೂರು ವಿಧಾನಸಭಾ ಕ್ಷೇತ್ರದಲ್ಲಿ ಈ ಬಾರಿ ತ್ರಿಕೋನ ಸ್ಪರ್ಧೆ ನಡೆಯಲಿದೆ.
ಕ್ಷೇತ್ರದಲ್ಲಿ ಹ್ಯಾಟ್ರಿಕ್ ವಿಜಯ ಸಾಧಿಸಿರುವ ಕಾಂಗ್ರೆಸ್ ಶಾಸಕ ಆರ್. ನರೇಂದ್ರ ಅವರಿಗೆ ಈ ಬಾರಿಯೂ ಟಿಕೆಟ್ ಪಕ್ಕ ಎನ್ನಲಾಗಿದೆ. ಆದರೆ ಕಾಂಗ್ರೆಸ್ ಟಿಕೆಟ್ ಬಯಸಿ ಸ್ಥಳೀಯ ಮುಖಂಡ ನಾಗೇಂದ್ರ ಕೂಡ ಅರ್ಜಿ ಹಾಕಿದ್ದಾರೆ. ಈಗ ಹೈಕಮಾಂಡ್‌ನಿಂದ ಕೆಲವೇ ದಿನಗಳಲ್ಲಿ ಅಭ್ಯರ್ಥಿಗಳ ಪಟ್ಟಿ ಘೋಷಣೆಯಾಗಲಿದ್ದು, ಯಾರಿಗೆ ಟಿಕೆಟ್ ದೊರೆಯಲಿದೆ ಎಂದು ನೋಡಬೇಕಿದೆ.
2017ರಲ್ಲಿ ರಚನೆಯಾದ ಹನೂರು ತಾಲೂಕಿನಲ್ಲಿ 2013ರವರೆಗೂ ಆರ್. ನರೇಂದ್ರ ಅವರು ತಂದೆ ರಾಜೂಗೌಡ ಹಾಗೂ ಎಚ್ ನಾಗಪ್ಪ ಅವರ ಕುಟುಂಬದ ನಡುವೆ ಸ್ಪರ್ಧೆ ಇತ್ತು. ಆದರೆ ಇದು 2018ರಿಂದ ಕ್ಷೇತ್ರದ ಚಿತ್ರಣ ಬದಲಾಗಿದೆ. ಮೊದಲಿನಿಂದಲೂ ನಾಗೇಂದ್ರ ಕುಟುಂಬ ಕಾಂಗ್ರೆಸ್‌ನಲ್ಲೇ ಗುರುತಿಸಿಕೊಂಡಿದ್ದರೆ ಎಚ್ ನಾಗಪ್ಪ ಕಟುಂಬ ಮಾತ್ರ ಮೊದಲು ಜೆಡಿಎಸ್, ಬಿಎಸ್‌ಪಿ ಹಾಗೂ ಈಗ ಬಿಜೆಪಿಯೊಂದಿಗೆ ಗುರುತಿಸಿಕೊಂಡಿದೆ. 2013ರಲ್ಲಿ ನಾಗಪ್ಪ ಅವರ ಪತ್ನಿ ಪರಿಮಳಾ ನಾಗಪ್ಪ ಹಾಗೂ ಅವರ ಮಗ ವೈದ್ಯರಾದ ಪ್ರೀತನ್ ನಾಗಪ್ಪ ಕೂಡ ಬಿಜೆಪಿಯಿಂದ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ.
ಎಂಆರ್ ಮಂಜುನಾಥ್ ಪೈಪೋಟಿ
ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ, ಗುಂಡ್ಲುಪೇಟೆ, ಚಾಮರಾಜನಗರ ಹೊರತುಪಡಿಸಿ ಹನೂರಿನಲ್ಲಿ ಮಾತ್ರ ಜೆಡಿಎಸ್ ಅಸ್ತಿತ್ವದಲ್ಲಿದೆ. 2018ರಿಂದ ಇಲ್ಲಿ ಎಂಆರ್ ಮಂಜುನಾಥ್ ಜೆಡಿಎಸ್ ಪಕ್ಷವನ್ನು ಸಂಘಟನೆ ಮಾಡುತ್ತಾ ಬಂದಿದ್ದಾರೆ. ಕಳೆದ 2018ರ ಚುನಾವಣೆಯಲ್ಲಿ ಅವರು ಕಾಂಗ್ರೆಸ್ ಹಾಗೂ ಬಿಜೆಪಿಗೆ ಪ್ರಬಲ ಪೈಪೋಟಿ ನೀಡಿದ್ದಾರೆ. ಈ ಕಾರಣದಿಂದ ಅವರಿಗೇ ಈ ಬಾರಿ ಟಿಕೆಟ್ ಸಿಗಲಿದೆ. ಈ ಹಿನ್ನೆಲೆಯಲ್ಲಿ ಮೂರು ಪಕ್ಷಗಳಲ್ಲಿ ತೀವ್ರ ಸ್ಪರ್ಧೆ ಏರ್ಪಡಲಿದೆ.
ಡಾ. ಪ್ರೀತನ್ ನಾಗಪ್ಪ ಸ್ಪರ್ಧೆ ಖಚಿತ
ಸದ್ಯ ಬಿಜೆಪಿಯಲ್ಲಿ ನಾಲ್ವರು ಮಂದಿ ಟಿಕೆಟ್ ಆಕಾಂಕ್ಷಿಗಳಿದ್ದಾರೆ. ಕ್ಷೇತ್ರದಾದ್ಯಂತ ತಮ್ಮದೇ ಬೆಂಬಲಿಗರನ್ನು ಡಾ. ಪ್ರೀತನ್ ನಾಗಪ್ಪ ಈ ಬಾರಿ ಬಹುತೇಕ ಟಿಕೆಟ್ ಪಡೆಯಲಿದ್ದಾರೆ. ಈ ಹಿನ್ನೆಲೆಯಲ್ಲಿ ಆರು ತಿಂಗಳಿನಿಂದಲೂ ಅವರು ಕ್ಷೇತ್ರದಲ್ಲಿ ಓಡಾಟ ಮಾಡುತ್ತಿದ್ದಾರೆ. ಪ್ರೀತನ್ ಅವರ ತಾಯಿ ಪರಿಮಳ ಅವರು ರಾಜ್ಯದ ನಾಯಕರೊಂದಿಗೆ ಸಂಪರ್ಕದಲ್ಲಿ ಇದ್ದಾರೆ. ಕ್ಷೇತ್ರದಲ್ಲಿ ಜಿಲ್ಲಾ ಬಿಜೆಪಿ ಘಟಕದ ಉಪಾಧ್ಯಕ್ಷ ಡಾ. ದತ್ತೇಶ್ ಕುಮಾರ್ ಕೂಡ ತಮಗೊಂದು ಅವಕಾಶ ನೀಡುವಂತೆ ಕೋರಿದ್ದಾರೆ. ಇನ್ನು ಬಿಜೆಪಿ ರಾಜ್ಯ ಒಬಿಸಿ ಕಾರ್ಯಕಾರಿಣಿ ಸಮಿತಿ ಸದಸ್ಯ ಬಿ ವೆಂಕಟೇಶ್ ಕ್ಷೇತ್ರದಾದ್ಯಂತ ಸಂಚಾರ ಮಾಡುತ್ತಿದ್ದಾರೆ. ಇನ್ನು ಪಕ್ಷೇತರ ಅಭ್ಯರ್ಥಿಯಾಗಿ ಕೆ ಗುಂಡಾಪುರದ ಮುಜಾಮಿಲ್ ಪಾಷಾ ಅವರು ಪಕ್ಷೇತರವಾಗಿ ಕಣಕ್ಕಿಳಿಯುವುದಾಗಿ ತಿಳಿಸಿದ್ದಾರೆ.
ಹನೂರು ಕ್ಷೇತ್ರದಲ್ಲಿ ಹಾಲಿ ಶಾಸಕ ಆರ್ ನರೇಂದ್ರಗೆ ಈ ಬಾರಿ ಬಾರಿಯ ಗೆಲುವು ಸುಲಭವಂತೂ ಆಗಿರುವುದಿಲ್ಲ. ಕಾರಣ ಸ್ಥಳೀಯ ಮುಖಂಡರು ಕೆಲವರು ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದರೆ ಕೆಲವರು ಮೃತರಾಗಿದ್ದಾರೆ. ಆದರೂ ಪಕ್ಷದಲ್ಲಿರುವ ಕೆಲವು ನಿಷ್ಠಾವಂತ ಕಾರ್ಯಕರ್ತರು ತಮ್ಮನ್ನು ಗೆಲ್ಲಿಸಲಿದ್ದಾರೆ ಎಂದು ನರೇಂದ್ರ ಭರವಸೆ ಹೊಂದಿದ್ದಾರೆ.












Click it and Unblock the Notifications