ಖಾಸಗಿ ವೈದ್ಯರ ಮುಷ್ಕರಕ್ಕೆ ಚಾಮರಾಜನಗರದಲ್ಲಿ ವ್ಯಕ್ತಿ ಬಲಿ

ಚಾಮರಾಜನಗರ, ನವೆಂಬರ್ 16 : ರಾಜ್ಯದಲ್ಲಿ ನಡೆಯುತ್ತಿರುವ ಖಾಸಗಿ ವೈದ್ಯರ ಮುಷ್ಕರದ ಬಿಸಿ ಚಾಮರಾಜನಗರಕ್ಕೂ ತಟ್ಟಿದ್ದು, ಪಟ್ಟಣದಲ್ಲಿ ಎದೆನೋವಿನಿಂದ ಬಳಲುತ್ತಿದ್ದ ವ್ಯಕ್ತಿಯೊಬ್ಬರು ಸೂಕ್ತ ಚಿಕಿತ್ಸೆ ಸಿಗದೆ ಸಾವನ್ನಪ್ಪಿದ ಘಟನೆ ಬುಧವಾರ(ನ.15) ನಡೆದಿದೆ.

ಚಾಮರಾಜನಗರ ಸಮೀಪದ ರಾಮಸಮುದ್ರದ ನಾಗಮಲ್ಲೇಶ್(33) ಎಂಬ ವ್ಯಕ್ತಿ ಸಾವನ್ನಪ್ಪಿದ ದುರ್ದೈವಿ. ಈತನಿಗೆ ಬುಧವಾರ ಇದ್ದಕ್ಕಿದ್ದಂತೆಯೇ ಎದೆನೋವು ಕಾಣಿಸಿದೆ. ತಕ್ಷಣ ಕರೆತಂದು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ. ಆದರೆ ಅಲ್ಲಿ ಯಾವುದೇ ರೀತಿಯ ಚಿಕಿತ್ಸೆ ನೀಡಲು ಸೌಲಭ್ಯಗಳಿಲ್ಲದ ಕಾರಣದಿಂದಾಗಿ ಹೆಚ್ಚಿನ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ಕರೆದೊಯ್ಯುವಂತೆ ಹೇಳಲಾಗಿದೆ.

Private Hospital doctors' strike in Karnataka: a man dies in Chamarajanagara

ಸ್ಥಳೀಯವಾಗಿ ಯಾವುದೇ ಖಾಸಗಿ ಆಸ್ಪತ್ರೆಗಳು ತೆರೆಯದೇ ಇದ್ದ ಕಾರಣದಿಂದಾಗಿ ಮೈಸೂರಿನತ್ತ ಕರೆದೊಯ್ಯಲು ಮುಂದಾಗಿ ವಾಹನದಲ್ಲಿ ಮೈಸೂರಿನತ್ತ ತೆರಳಿದರಾದರೂ ಮಾರ್ಗ ಮಧ್ಯೆ ಸಾವನ್ನಪ್ಪಿದ್ದಾರೆ. ನಾಗಮಲ್ಲೇಶ್ ಸಾವಿಗೆ ಖಾಸಗಿ ವೈದ್ಯರ ಮುಷ್ಕರವೇ ಕಾರಣ ಎಂದು ಆರೋಪಿಸಲಾಗುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+