ಸಿಎಂ ಆಯ್ಕೆಯನ್ನ ಪಕ್ಷ ಮಾಡಲಿದೆ, ಕುಮಾರಸ್ವಾಮಿ ಅಲ್ಲ: ಬಿಜೆಪಿ ಶಾಸಕ
ಸಿಎಂ ಆಯ್ಕೆಯನ್ನು ನಮ್ಮ ಪಕ್ಷವೇ ಮಾಡಲಿದೆ, ಕುಮಾರಸ್ವಾಮಿ ಅಲ್ಲ. ಹಾಗೆಯೇ ಕುಮಾರಸ್ವಾಮಿ ಏನಾದ್ರೂ ಶಾಸ್ತ್ರ ಹೇಳುತ್ತಾರಾ? ಎಂದು ಎನ್.ಮಹೇಶ್ ಪ್ರಶ್ನಿಸಿದ್ದಾರೆ.
ಚಾಮರಾಜನಗರ, ಫೆಬ್ರವರಿ, 07: ಹಿಂದೂ ಬೇರೆ, ಹಿಂದುತ್ವ ಬೇರೆ ಎನ್ನುವ ವಾದವೇ ಸರಿಯಿಲ್ಲ. ಆ ಮಾತನ್ನು ಒಪ್ಪಲಾಗಲ್ಲ ಎಂದು ಕೊಳ್ಳೇಗಾಲ ಶಾಸಕ ಎನ್.ಮಹೇಶ್ ಚಾಮರಾಜನಗರದಲ್ಲಿ ಹೇಳಿದರು. ಹಾಗೆಯೇ ಸಿಎಂ ಆಯ್ಕೆಯನ್ನು ನಮ್ಮ ಪಕ್ಷ ಮಾಡಲಿದೆ, ಕುಮಾರಸ್ವಾಮಿ ಅಲ್ಲ. ಕುಮಾರಸ್ವಾಮಿ ಏನಾದ್ರೂ ಶಾಸ್ತ್ರ ಹೇಳುತ್ತಾರಾ? ಎಂದು ಪ್ರಶ್ನಿಸಿದ್ದಾರೆ.
ಚಾಮರಾಜನಗರದಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿ, ಸಿದ್ದರಾಮಯ್ಯ ಅವರ ಹಿಂದೂ ಬೇರೆ, ಹಿಂದುತ್ವ ಬೇರೆ ಎಂಬ ಮಾತು ಸರಿಯಲ್ಲ. ಯಾರು ಹಿಂದೂ ಧರ್ಮದ ತತ್ವಗಳು ಪಾಲನೆ ಮಾಡುತ್ತಾರೇಯೋ ಆತ ಹಿಂದೂ, ಹಿಂದುತ್ವ ಪಾಲನೆ ಮಾಡುವನು. ಹೀಗೆ ಹಿಂದೂ, ಹಿಂದೂ-ಹಿಂದುತ್ವ ಬೇರೆಯಲ್ಲ ಎಂದು ಸಿದ್ದರಾಯ್ಯ ಹೇಳಿಕೆಗೆ ತಿರುಗೇಟು ಕೊಟ್ಟರು.
ನಮ್ಮ ಹೈಕಮಾಂಡ್ ಸ್ಟ್ರಾಂಗ್ ಆಗಿದೆ
ನಾನು ಓರ್ವ ಬುದ್ಧಿಸ್ಟ್, ಬೌದ್ಧ ಧರ್ಮದ ತತ್ವ ಅಂದರೆ ಬೌದ್ಧತ್ವ ಪಾಲನೆ ಮಾಡುವನು ಆಗಿರುತ್ತಾನೆ. ಅದೇ ರೀತಿ ಹಿಂದುತ್ವ ಪಾಲನೆ ಮಾಡುವವನು ಹಿಂದೂ ಆಗುತ್ತಾನೆ ಎಂದು ತಿಳಿಸಿದರು. ಇದೇ ವೇಳೆ, ಬ್ರಾಹ್ಮಣ ಸಿಎಂ ಆಗುತ್ತಾರೆ ಎಂಬ ಎಚ್.ಡಿ.ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿ, ಕುಮಾರಸ್ವಾಮಿ ಅವರೇನು ನಮ್ಮ ಹೈಕಮಾಂಡ್ ಅಲ್ಲ. ಯಾರನ್ನು ಸಿಎಂ ಮಾಡಬೇಕೆಂದು ಪಕ್ಷ ನಿರ್ಧರಿಸುತ್ತಿದೆ. ನಮ್ಮ ಹೈಕಮಾಂಡ್ ಸ್ಟ್ರಾಂಗ್ ಆಗಿದೆ. ಸೆನ್ಸಿಟಿವ್ ಆಗಿ ಅವರು ತೀರ್ಮಾನ ಮಾಡುತ್ತಾರೆ. ಸಿಎಂ ಯಾರನ್ನು ಮಾಡಬೇಕೆಂಬುದು ಜೆಡಿಎಸ್ ತೀರ್ಮಾನವಲ್ಲ. ಇದನ್ನು ಕುಮಾರಸ್ವಾಮಿ ನಿರ್ಧರಿಸಲ್ಲ ಎಂದು ಎಚ್.ಡಿ.ಕೆ ಹೇಳಿಕೆಗೆ ತಿರುಗೇಟು ನೀಡಿದರು.

ಸಿದ್ದರಾಮಯ್ಯ ವಿರುದ್ಧ ಸೋಮಣ್ಣ ಆಕ್ರೋಶ
ವಿಪಕ್ಷ ನಾಯಕ ಸಿದ್ದರಾಮಯ್ಯ ಗಂಟಲಿನಿಂದ ಮಾತನಾಡುತ್ತಾರೆ, ಹೃದಯದಿಂದಲ್ಲ ಎಂದು ಸಚಿವ ವಿ.ಸೋಮಣ್ಣ ಚಾಮರಾಜನಗರದಲ್ಲಿ ಇತ್ತೀಚೆಗಷ್ಟೇ ವ್ಯಂಗ್ಯವಾಡಿದ್ದರು. ಚಾಮರಾಜನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ್ದ ಅವರು, ಆಲಿಬಾಬಾ ಮತ್ತು 40 ಕಳ್ಳರು ಎಂಬ ಸಿದ್ದು ಹೇಳಿಕೆಗೆ ಪ್ರತಿಕ್ರಿಯಿಸಿದರು. ನಾನು ಅವರ ಬಗ್ಗೆ ಹೆಚ್ಚು ಮಾತನಾಡುವುದಿಲ್ಲ. ಒಮ್ಮೆ ಶುರುವಾದರೇ ಅದು ಮತ್ತೆಲಿಗೋ ಹೋಗುತ್ತದೆ. ಅವರು ಗಂಟಲಿನಿಂದ ಮಾತನಾಡುತ್ತಿದ್ದಾರೆ, ಹೃದಯದಿಂದಲ್ಲ ಎಂದು ಟಾಂಗ್ ಕೊಟ್ಟಿದ್ದರು.
ಚುನಾವಣೆ ಬರುತ್ತದೆ-ಹೋಗತ್ತದೆ, ಅವರು 70 ವರ್ಷ ಅಧಿಕಾರದಲ್ಲಿದ್ದರು. ನಾವು 5-10 ವರ್ಷದಿಂದ ಅಧಿಕಾರದಲ್ಲಿದ್ದೇವೆ ತಡೆದುಕೊಳ್ಳಿ. ಇನ್ನು ಸೆಸ್ಕ್ ನೌಕರರಿಗೆ ಕೊಡುತ್ತಿದ್ದ ಉಚಿತ ವಿದ್ಯುತ್ ಅನ್ನು ವಾಪಾಸ್ ತೆಗೆದುಕೊಂಡಿದ್ದು ಯಾರು? ಅವರ ಭರವಸೆಗಳು ಭರವಸೆಗಳಾಗಿಯೇ ಉಳಿದಿವೆ. ರಾಜಾಸ್ಥಾನದಲ್ಲಿ ಅವರದ್ದೇ ಸರ್ಕಾರ ಇದೆ. ಮೊದಲು ಅಲ್ಲಿ ಉಚಿತ ವಿದ್ಯುತ್, ಗೃಹಲಕ್ಷ್ಮಿ ಯೋಜನೆ ಜಾರಿಗೊಳಿಸಲಿ ಎಂದು ಸವಾಲ್ ಹಾಕಿದ್ದರು.












Click it and Unblock the Notifications